ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದು ಇತಿಹಾಸ ಸೃಷ್ಠಿಸಿದ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಟೆಸ್ಟ್ ತಂಡ ‘ವರ್ಷದ ತಂಡ’ ಪ್ರಶಸ್ತಿಗೆ ಭಾಜನವಾಗಿದೆ.
ಪ್ರಶಸ್ತಿಯ ಪ್ರಾಯೋಜಕತ್ವವನ್ನು ಒಡಿಶಾ ಪ್ರವಾಸೋದ್ಯಮ, ಎಂ.ಆರ್. ಎಫ್, ಟಿಸ್ಸೊಟ್, ಸ್ಪೈಸ್ ಜೆಟ್, ವಿಸಿಟ್ ಮೊನಾಕೊ, ಎಲ್ಐಸಿ, ನಿಪ್ಪೊನ್ ಪೈಂಟ್ಸ್ ಹಾಗೂ ಸೋನಿ ಟೆನ್-1 ವಹಿಸಿಕೊಂಡಿದ್ದವು. ಭಾರತ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೋಡ್ ಅವರು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ವರ್ಷದ ತಂಡ ಪ್ರಶಸ್ತಿ ಪಡೆದ ಭಾರತ ತಂಡ ಹಾಗೂ ವಿಕ್ರಮ್ ಅವರಿಗೆ ಅಭಿನಂದನೆ ಸಲ್ಲಿಸಿರುವ ಗಂಗೂಲಿ ಟಿ-20 ವಿಶ್ವಕಪ್ ವರ್ಷದಂತೆ ಇನ್ನು ಮುಂದೆಯೂ ಉತ್ತಮ ಸಾಧನೆ ಮಾಡುವಂತೆ ಆಶಿಸಿದರು.
