Film News

ವರ್ಲ್ಡ್ ಬ್ಲಡ್ ಡೋನೇಷನ್ ಡೇ ಅಂದು ರಕ್ತದಾನ ಮಾಡಿದ ನಟ ನೆನಪಿರಲಿ ಪ್ರೇಮ್

ಜೂನ್ 14, ಅಂದರೆ ನಿನ್ನೆ ವರ್ಲ್ಡ್ ಬ್ಲಡ್ ಡೋನೇಷನ್ ಡೇ, ರಕ್ತದಾನ ಮಹಾದಾನ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಷಯ. ರಕ್ತದಾನ ಮಾಡುವುದರಿಂದ ಒಬ್ಬ ವ್ಯಕ್ತಿಯ ಪ್ರಾಣ ಉಳಿಸಬಹುದು, ಜೊತೆಗೆ ಆ ವ್ಯಕ್ತಿಯನ್ನೇ ನಂಬಿಕೊಂಡಿರುವ ಕುಟುಂಬವನ್ನು ಕಾಪಾಡಬಹುದು. ಹಾಗಾಗಿಯೇ ರಕ್ತದಾನವನ್ನು ಶ್ರೇಷ್ಠವಾದ ದಾನ ಎನ್ನುತ್ತಾರೆ.ಈ ವಿಶೇಷವಾದ ದಿನದಂದು, ಸ್ಯಾಂಡಲ್ ವುಡ್ ನಟ ನೆನಪಿರಲಿ ಪ್ರೇಮ್ ರಕ್ತದಾನ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ರಕ್ತದಾನ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿರುವ ನಟ ಪ್ರೇಮ್, ರಕ್ತದಾನದ ಬಗ್ಗೆ ಕೆಲವು ಮಾತುಗಳನ್ನೂ ಆಡಿದ್ದಾರೆ..”ಹಾಯ್ ಎಲ್ಲರಿಗೂ, ಇವತ್ತು ವರ್ಲ್ಡ್ ಬ್ಲಡ್ ಡೋನೇಷನ್ ಡೇ, ಹಾಗಾಗಿ ಇವತ್ತು ಬ್ಲಡ್ ಡೋನೇಟ್ ಮಾಡ್ತಾ ಇದೀನಿ. ನಿಮ್ಮಲ್ಲಿ ಒಂದು ರಿಕ್ವೆಸ್ಟ್ ಏನು ಅಂದ್ರೆ, ನೀವೂ ಸಹ ಬ್ಲಡ್ ಡೋನೇಟ್ ಮಾಡಿ.. ಒಂದು ಯೂನಿಟ್ ಬ್ಲಡ್ ಡೋನೇಟ್ ಮಾಡೋದ್ರಿಂದ, 3 ಜೀವ ಉಳಿಸಬಹುದು, ಆ ಮೂರು ಜೀವದ ಹಿಂದೆ, ನೂರು ಜೀವ ಇರುತ್ತೆ. ಯಾಕಂದ್ರೆ ಒಂದು ವ್ಯಕ್ತಿ ಕುಟುಂಬದಲ್ಲಿ ಉಳಿದ್ರೆ, ಅವನ ಹಿಂದೆ ಇಡೀ ಕುಟುಂಬ ಇರುತ್ತೆ, ಆ ಕುಟುಂಬದ ಹಿಂದೆ ಎಷ್ಟು ಜನ ಇರ್ತಾರೆ, ಅಷ್ಟೂ ಜನ ಉಳ್ಕೊತಾರೆ, ಅವರ ನಗುವಿಗೆ, ಅವರ ಪ್ರೀತಿಗೆ, ಅವರ ಕುಟುಂಬದ ಒಂದು ಜ್ಯೋತಿಯನ್ನ ಬೆಳಗಿದ್ದಕ್ಕೆ, ನೀವು ಕಾರಣಕರ್ತರಾಗ್ತಿರಾ ಅಂತ ಹೇಳೋದಕ್ಕೆ ಇಷ್ಟ ಪಡ್ತೀನಿ. ರೀಲ್ ಲೈಫ್ ಅಲ್ಲ, ರಿಯಲ್ ಲೈಫ್ ನಲ್ಲಿ ಇನ್ನೊಬ್ಬರ ಬದುಕಿಗೆ ನೀವ್ ಹೀರೋ ಆಗಿ ಅಂತ ಹೇಳೋದಕ್ಕೆ ಇಷ್ಟಪಡ್ತೀನಿ. ಹ್ಯಾಪಿ ವರ್ಲ್ಡ್ ಬ್ಲಡ್ ಡೋನೇಷನ್ ಡೇ. ನೀವೂ ಸಹ ರಕ್ತದಾನ ಮಾಡಿ, ಅನೇಕ ಜೀವಗಳನ್ನ ಉಳಿಸಿ. ನಾನು ಕೂಡ ರಕ್ತದಾನ ಮಾಡಿದ್ದೀನಿ, ನನ್ನ ಅಭಿಮಾನಿಗಳ ಜೊತೆ ಹಾಗೂ ಪ್ರೇಮಮ್ ಪೂಜ್ಯಮ್ ಸಿನಿಮಾ ಟೀಮ್ ಜೊತೆ ಬ್ಲಡ್ ಡೊನೇಟ್ ಮಾಡಿದೀನಿ. ಥ್ಯಾಂಕ್ ಯೂ ಸೋ ಮಚ್.. ಲವ್ ಯೂ…” ಎಂದು ವಿಡಿಯೋದಲ್ಲಿ ಹೇಳಿದ್ದಾರೆ ಪ್ರೇಮ್.ಈ ವಿಡಿಯೋ ಮೂಲಕ, ಹಲವಾರು ಜನರಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

Trending

To Top