Film News

ಲೇಡಿ ಸೂಪರ್ ಸ್ಟಾರ್ ನಯನತಾರಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಮತ್ತೊಬ್ಬ ನಟಿ !

ತೆಲುಗು ನಟಿ ಶ್ರೀರೆಡ್ಡಿ ವಿವಾದಾತ್ಮಕ ಹೇಳಿಕೆಗಳಿಂದ ಯಾವಾಗಲೂ ಟ್ರೋಲ್ ಆಗುತ್ತಾರೆ. ಕೆಲ ದಿನಗಳ ಹಿಂದೆ ಕೊರೊನಾ ಬಗ್ಗೆ ನೀಡಿದ್ದ ಹೇಳಿಕೆಯಿಂದಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಇದೀಗ ನಟಿ ನಯನತಾರಾ ಅವರ ಬಗ್ಗೆ ಹೇಳಿಕೆ ನೀಡಿದ್ದಾರೆ.

ಶ್ರೀ ರೆಡ್ಡಿಯ ವೈಯುಕ್ತಿಕ ವಿಷಯಗಳನ್ನು ಪ್ರಸ್ತಾಪಿಸಿ ಕೆಲವರು ಪೋಸ್ಟ್ಗಳನ್ನು ಹಾಕಿದ್ದರು. ಇದರಿಂದ ಕುಪಿತಗೊಂಡಿರುವ ಶ್ರೀರೆಡ್ಡಿ ನೇರವಾಗಿ ನಯನತಾರಾ ಹೆಸರು ಸೂಚಿಸಿ ವಿವಾದ ಹುಟ್ಟುಹಾಕಿದ್ದಾರೆ. ಈ ಬಗ್ಗೆ ಫೇಸ್ಬುಕ್ ಪೋಸ್ಟ್ನಲ್ಲಿ ಬರೆದುಕೊಂಡಿರುವ ಶ್ರೀರೆಡ್ಡಿ “ವಿವಾಹಿತರು ಮತ್ತು ಅವಿವಾಹಿತರ ಜತೆಯೂ ನಯನತಾರಾಗೆ ಸಂಬಂಧವಿದೆ. ನಿಮಗೆಲ್ಲ ಅವಳ ಬಗ್ಗೆ ಮಾತಾಡುವ ಧಮ್ಮಿದೆಯಾ?” ಎಂದು ಪ್ರಶ್ನಿಸಿದ್ದಾರೆ.

https://www.facebook.com/1395692674010994/posts/2667069620206620/

Trending

To Top