Film News

ಲಾಕ್ ಡೌನ್ ಸಮಯವನ್ನು ಹೇಗೆ ಕಳೆಯುತ್ತಿದ್ದಾರೆ ರಕ್ಷಿತ್ ಶೆಟ್ಟಿ ?

ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಕೊರೊನಾ ಲಾಕ್ ಡೌನ್ ಅನ್ನು ಬರವಣಿಗೆ ಹಾಗು ಸಿನಿಮಾ ನೋಡಲು ಬಳಸುತ್ತಿದ್ದಾರೆ. ಈ ಮೂಲಕ ಸಿಕ್ಕ ವೇಳೆಯನ್ನು ಸದುಪಯೋಗ ಪಡಿಸುತ್ತಿದ್ದಾರೆ ನಟ ರಕ್ಷಿತ್ ಶೆಟ್ಟಿ.

ಈ ಬಗ್ಗೆ ಮಾತನಾಡುವ ರಕ್ಷಿತ್, ಲಾಕ್ ಡೌನ್ ನಲ್ಲಿ ನಾನು ಬರವಣಿಗೆ ಹಾಗೂ ಸಿನಿಮಾ ನೋಡುತ್ತಿದ್ದೇನೆ. ಪುಣ್ಯಕೋಟಿ ಚಿತ್ರದ ಸ್ಕ್ರಿಪ್ಟ್ ಮಾಡುತ್ತಿದ್ದೇನೆ.

ಸಂಜೆ ಹೊತ್ತು ಆನ್ ಲೈನ್ ಗೆ ಬಂದು ನಮ್ಮ 7 ಓಡ್ಸ್ ತಂಡದೊಂದಿಗೆ ಸಿನಿಮಾ ಕೆಲಸಗಳ ಕುರಿತು ಚರ್ಚಿಸುತ್ತೇವೆ. ಇಲ್ಲೂ ನಾವು ಸಿನಿಮಾ ವಿಷಯಗಳ ಕುರಿತಾಗಿಯೂ ಚರ್ಚಿಸುತ್ತೇವೆ.

ತನ್ನ ತಂಡ ರಿಚ್ಚಿ ಚಿತ್ರದ ಸ್ಕ್ರಿಪ್ಟ್ ನಲ್ಲಿ ಬಿಝಿ. ಹಿಂದೆಲ್ಲಾ ಚಿತ್ರೀಕರಣದ ಗ್ಯಾಪ್ ನಲ್ಲಿ ಬರವಣಿಗೆ ಮಾಡಬೇಕಿತ್ತು. ಆದರೆ ಈಗ ಚಿತ್ರೀಕರಣವಿಲ್ಲದ ಕಾರಣ ಪೂರ್ಣ ಪ್ರಮಾಣದಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಹೆಚ್ಚು ಯೋಚನೆ ಮಾಡಲು, ಹೊಸದಾಗಿ ಆಲೋಚಿಸಲು ಈಗ ಸಮಯ ಸಿಗುತ್ತದೆ’ ಎನ್ನುವುದು ರಕ್ಷಿತ್ ಶೆಟ್ಟಿ ಮಾತು.

ಹಾಗಂತ ಅವರು ಕೇವಲ ಬರವಣಿಗೆಗಷ್ಟೇ ಸೀಮಿತವಾಗಿಲ್ಲ. ತಮಗೆ ಇಷ್ಟವಾದ ಒಂದಷ್ಟು ಸಿನಿಮಾಗಳನ್ನು ಕೂಡಾ ನೋಡುತ್ತಿದ್ದಾರೆ. ಬರವಣಿಗೆ ಜೊತೆಗೆ ಸಿನಿಮಾ ಕೂಡಾ ನೋಡುತ್ತಿದ್ದೇನೆ. ಫಾರಿನ್, ಇಂಡಿಯನ್ . ಹೀಗೆ ಸಾಕಷ್ಟು ಸಿನಿಮಾಗಳನ್ನು ನೋಡುತ್ತಾ ಕಾಲ ಕಳೆಯುತ್ತಿದ್ದೇನೆ. ನನಗೆ ಈ ಲಾಕ್ ಡೌನ್ ಬೋರ್ ಆಗಿಲ್ಲ. ಸಿನಿಮಾದ ಕೆಲಸ ಕಾರ್ಯಗಳಲ್ಲಿ ಮನೆಯಲ್ಲೇ ಬಿಝಿಯಾಗಿದ್ದೇವೆ ಎನ್ನುತ್ತಾರೆ ರಕ್ಷಿತ್.

Trending

To Top