Kannada Updates
Kannada Serials

ಲಾಕ್ ಡೌನ್ ಸಮಯದಲ್ಲಿ ನಾಯಿಗಳಿಗೆ ಪಕ್ಷಿಗಳಿಗೆ ಆಹಾರದ ಒದಗಿಸುತ್ತಿದ್ದಾರೆ ಜೊತೆಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ

ಜೊತೆ ಜೊತೆಯಲಿ.. ಧಾರವಾಹಿಯನ್ನೂ ಸಿನಿಮಾ ರೇಜಿಂಗೆ ಮಾಡಬಹುದು ಅಂತಾ ತೋರಿಸಿಕೊಟ್ಟ ಒಂದು ಪ್ರಯತ್ನ. ಈ ಒಂದು ಪ್ರಯತ್ನವನ್ನು ಕನ್ನಡಿಗರು ದೊಡ್ಡದಾಗಿಯೇ ಸ್ವೀಕರಿಸಿದ್ದರು. ಕೆಲವೇ ದಿನಗಳಲ್ಲಿ ಮನೆ- ಮನಗಳ ಫೇವರಿಟ್ ಧಾರವಾಹಿ ಆಗಿಬಿಟ್ಟಿತ್ತು. ಆರ್ಯವರ್ಧನ್- ಅನು ಸಿರಿಮನೆ ಲವ್ ಸ್ಟೋರಿಗೆ ಜನ ಫಿದಾ ಆಗಿದ್ದರು. ಅನಿರುದ್ಧ್ ಅವರಂತೆಯೇ ಅನು ಪಾತ್ರಧಾರಿ ಮೇಘಾ ಶೆಟ್ಟಿಗೆ ದೊಡ್ಡ ಓಪನಿಂಗ್ ಸಿಕ್ಕಿತ್ತು. ಅನು ಮುಗ್ಧತೆಗೆ, ನಟನೆಗೆ ವೀಕ್ಷಕರು ಫ್ಯಾನ್ಸ್ ಆಗಿಬಿಟ್ಟಿದ್ರು. ಇದೀಗ ಕೊರೊನಾ ಲಾಕ್ಡೌನ್ ನಡುವೆಯೂ ಜನಮೆಚ್ಚುವ ಕೆಲಸದಿಂದ ಸುದ್ದಿಯಾಗಿದ್ದಾರೆ.

ಲಾಕ್ ಡೌನ್ ಇರೋದ್ರಿಂದ ಕಲಾವಿದರೆಲ್ಲರೂ ಮನೆಯಲ್ಲೇ ಇರುವಂತಾಗಿದೆ. ಮನೆ ಬಳಿಯೇ ಇದ್ರೂ ಒಂದಷ್ಟು ಒಳ್ಳೆಯ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಜನಸಾಮಾನ್ಯರಿಗೇ ದಿನ ದೂಡುವುದು ಕಷ್ಟವಾಗಿದೆ. ಅಂಥದ್ದರಲ್ಲಿ ಬೀದಿ ನಾಯಿ, ಪಕ್ಷಿಗಳ ಸ್ಥಿತಿ ಏನಾಗಬಹುದು. ಹೀಗಾಗಿ ಮೇಘಾ ಶೆಟ್ಟಿ ಬೀದಿ ನಾಯಿಗಳು, ಪಕ್ಷಿಗಳಿಗೆ ಆಹಾರ ವ್ಯವಸ್ಥೆ ಮಾಡ್ತಿದ್ದಾರೆ.

ನಂದಿನಿ ಲೇ ಔಟ್ನಲ್ಲಿರೋ ತಮ್ಮ ನಿವಾಸದ ಬಳಿ ನಾಯಿಗಳಿಗೆ ಫೀಡ್ ಮಾಡ್ತಿದ್ದಾರೆ. ಪಕ್ಷಿಗಳಿಗೆ ದವಸ- ಧಾನ್ಯ, ನೀರಿನ ವ್ಯವಸ್ಥೆ ಮಾಡಿದ್ದಾರೆ. ಪ್ರತಿನಿತ್ಯ ಈ ಕಾಯಕದಲ್ಲಿ ಮೇಘಾ ತೊಡಗಿಕೊಂಡಿದ್ದು, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೇವಲ ಲಾಕ್ ಡೌನ್ ಸಂದರ್ಭದಲ್ಲಿ ಅಂತಲ್ಲ.. ಮೊದಲಿನಿಂದಲೂ ಪ್ರತಿ ದಿನ ನಮ್ಮ ಮನೆಯಲ್ಲಿ ಬಳಿಕ ಬೀದಿ ನಾಯಿ, ಪಕ್ಷಗಳಿಗೆ ಆಹಾರ ವ್ಯವಸ್ಥೆ ಮಾಡ್ತಾ ಬರ್ತಿದ್ದೀವಿ ಆಂತ ಹೇಳಿದ್ದಾರೆ..

ಉಳಿದಂತೆ ಮನೆಯಲ್ಲೇ ಲಾಕ್ ಡೌನ್ ಆಗಿರೋ ಮೇಘಾ.. ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಒಂದಷ್ಟು ಸಿನಿಮಾ ನೋಡ್ತಿದ್ದು.. ಕೇರಂ, ಜಿಮ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಳಿಂದಲೂ ಸಾಕಷ್ಟು ಆಫರ್ಸ್ ಹುಡುಕಿ ಬರ್ತಿದ್ದು, ಬಿಗ್ ಸ್ಕ್ರೀನ್ಗೆ ಪಾದಾರ್ಪಣೆ ಮಾಡಲೂ ತಯಾರಿ ನಡೆಸುತ್ತಿದ್ದಾರೆ.

Related posts

ಬೀದಿಗೆ ಬಂತು ‘ಕಮಲಿ’ ಕಲಹ: ಧಾರಾವಾಹಿ ನಿರ್ದೇಶಕನಿಂದ ವಂಚನೆ, ದೂರು

Pooja Siddaraj

ಡಾ.ರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ ಅನುಭವ ಹಂಚಿಕೊಂಡ ಸಿಲ್ಲಿ ಲಲ್ಲಿ ಧಾರಾವಾಹಿ ಖ್ಯಾತಿಯ ನಟಿ ನಮಿತಾ ರಾವ್

Pooja Siddaraj

ಶತಕದ ಸಂಭ್ರಮದಲ್ಲಿ ಜೊತೆ ಜೊತೆಯಲಿ !

Pooja Siddaraj

ಗಟ್ಟಿಮೇಳ ಆದ್ಯ / ಅನ್ವಿತಾ ಸಾಗರ್ ಧಾರಾವಾಹಿಗೆ ಬರುವ ಮುನ್ನ ಮಾಡಿದ ಸಿನಿಮಾ ಹಾಡಿನ ವಿಡಿಯೋ ನೋಡಿ!

webadmin

ಕಿರುತೆರೆಗೂ ಕೊರೊನಾ ಭೀತಿ! ಧಾರಾವಾಹಿ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದಾರೆ ಟೆಲಿವಿಷನ್ ಅಸೋಸಿಯೇಷನ್!

Pooja Siddaraj

‘ಜೊತೆ ಜೊತೆಯಲಿ’ ಧಾರಾವಾಹಿಗೆ ಹಿನ್ನಡೆ !

Pooja Siddaraj

ಮತ್ತೆ ಬರಲಿದೆ ಅದ್ಭುತ ಕನ್ನಡ ಧಾರಾವಾಹಿ TN ಸೀತಾರಾಮ್ ‘ಮಾಯಾಮೃಗ’! ಯಾವ ಚಂಙಲ್ ಗೊತ್ತಾ

webadmin

ರಾಧಾ ಕೃಷ್ಣ ಧಾರಾವಾಹಿಯ ನಟಿ ರಾಧೆ ನಿಜ ಜೇವನದಲ್ಲಿ ಹೇಗಿದ್ದಾರೆ ಗೊತ್ತಾ! ಹೊಸ ಫೋಟೋಗಳನ್ನು ನೋಡಿ

webadmin

ಸಿಲ್ಲಿ ಲಲ್ಲಿ ಖ್ಯಾತಿಯ ಸಮಾಜ ಸೇವಕಿ ಲಲಿತಾಂಬ-ಮಂಜು ಭಾಷಿಣಿ ಈಗ ಎಲ್ಲಿದ್ದಾರೆ, ಏನು ಮಾಡ್ತಾ ಇದ್ದಾರೆ ಗೊತ್ತಾ!

webadmin

ಗಟ್ಟಿಮೇಳ ಧಾರಾವಾಹಿಯ ಆರತಿ ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

Pooja Siddaraj

ಅಭಿಮಾನಿ ಎಂದು ಹೇಳ್ಕೊಂಡು ಆತ ಮಾಡಿದ್ದೇನು ಗೊತ್ತಾ! ಪೊಲೀಸ್ ಠಾಣೆ ಮೆಟ್ಟಿಲೇರಿದ ಪಾರು ಧಾರಾವಾಹಿ ನಟಿ

webadmin

ಪತ್ನಿಯ ಹುಟ್ಟು ಹಬ್ಬಕ್ಕೆ ಭಾವನಾತ್ಮಕ ಪತ್ರ ಬರೆದ ಜೊತೆಜೊತೆಯಲಿ ಅನಿರುಧ್! ಪತ್ರದಲ್ಲಿ ಏನಿದೆ ನೋಡಿ

webadmin