Film News

ಲಾಕ್ ಡೌನ್ ವೇಳೆ ಮನೆಯಲ್ಲಿ ಏನೆಲ್ಲ ಕೆಲಸ ಮಾಡಿದ್ದಾರೆ ಪವರ್ ಸ್ಟಾರ್ ?

‘ನಟಸಾರ್ವಭೌಮ’ ಡಾ. ರಾಜ್‌ಕುಮಾರ್ ಅವರ ಜನ್ಮದಿನದ ಪ್ರಯುಕ್ತ ಪುನೀತ್ ರಾಜ್‌ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದರು. ಅಲ್ಲಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು. ‘ಪವರ್ ಸ್ಟಾರ್’ ಪುನೀತ್‌ ರಾಜ್‌ಕುಮಾರ್ ನಿನ್ನೆ (ಏ.24) ಇನ್‌ಸ್ಟಾಗ್ರಾಮ್ ಲೈವ್ ಬಂದು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಲೈವ್ ನಲ್ಲಿ ಅಪ್ಪು ಕೊರೊನಾ ವಿರುದ್ಧ ಹೋರಾಡುತ್ತಿರುವ ಎಲ್ಲ ವೈದ್ಯಕೀಯ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು ಹಾಗೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿರುವ ಅಭಿಮಾನಿಗಳಿಗೂ ಧನ್ಯವಾದ ತಿಳಿಸಿದ್ದಾರೆ. ಇನ್ನೂ, ಗಡ್ಡದ ಲುಕ್‌ನಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ ಅಪ್ಪು.

‘ನಾವು ಯಾವತ್ತು ಮನೆಯಲ್ಲಿ ಇಷ್ಟೊಂದು ಫ್ರೀಯಾಗಿ ಇದ್ದೇ ಇಲ್ಲ ಅಲ್ವಾ? ಆರಂಭದಲ್ಲಿ ಡಿಜಿಟಲ್ ಫ್ಲಾಟ್‌ಫಾರ್ಮ್‌ನಲ್ಲಿರುವ ಸಿನಿಮಾಗಳನ್ನು ನೋಡಿದೆ. ತಂದೆಯವರ ಸಿನಿಮಾಗಳನ್ನು ನೋಡಿದೆ. ಮನೆ ಕ್ಲೀನಿಂಗ್ ಮಾಡಿದೆ. ಬೇಳೆಸಾರು, ಟೋಮ್ಯಾಟೊ ಪಲ್ಯ, ಪನ್ನೀರ್ ಬುರ್ಜಿ ಮಾಡಿದೆ. ನನ್ನದೇ ವರ್ಷನ್‌ನಲ್ಲಿ ಆಲೂಗಡ್ಡೆ ಪಲ್ಯ ಮಾಡಿದೆ. ಇದರ ಜೊತೆಗೆ ಇನ್ನೊಂದಿಷ್ಟು ಅಡುಗೆಗಳನ್ನು ಕಲಿಯೋಣ ಎಂದುಕೊಂಡಿದ್ದೇನೆ. ಅಡುಗೆ ಮಾಡೋದು ಎಷ್ಟು ಕಷ್ಟ ಅಂತ ಈಗ ಅರ್ಥ ಆಗ್ತಿದೆ. ಅಡುಗೆ ಮಾಡೋಕೆ ಅದಕ್ಕೇ ಆದಂತಹ ಟೈಮ್ ಇರುತ್ತದೆ ಎಂದು ಗೊತ್ತಾಯಿತು. ಅಡುಗೆ ಮನೆಯಲ್ಲಿ ಮಹಿಳೆಯರ ಕಷ್ಟ ಏನು ಅಂತ ಗೊತ್ತಾಯಿತು’ ಎಂದು ಹೇಳುವ ಅಪ್ಪು, ಸಿನಿಮಾಗಳ ಬಗ್ಗೆಯೂ ಮಾತನಾಡಿದರು. ‘ಇದೆಲ್ಲ ಮುಗಿದ ಮೇಲೆ ಒಳ್ಳೊಳ್ಳೆ ದಿನಗಳು ಖಂಡಿತ ಬರುತ್ತದೆ. ಯುವರತ್ನದ ಎಲ್ಲ ಕೆಲಸಗಳು ಮುಗಿದಿವೆ. ಆದರೆ, ಎರಡು ಹಾಡುಗಳ ಕೆಲಸ ಬಾಕಿ ಇದೆ. ಈ ತೊಂದರೆಗಳೆಲ್ಲ ಮುಗಿದ ಮೇಲೆ ಆ ಹಾಡುಗಳ ಚಿತ್ರೀಕರಣವನ್ನು ಬೇಗ ಮುಗಿಸುತ್ತೇವೆ. ‘ಜೇಮ್ಸ್’ ಶೂಟಿಂಗ್ ಶುರುವಾಗಲಿದೆ. ಇನ್ನೂ ಒಂದೆರಡು ಕಾನ್ಸೆಪ್ಟ್‌ಗಳನ್ನು ರೆಡಿ ಮಾಡುತ್ತಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ ಅಪ್ಪು.

Trending

To Top