Cinema

ಲಾಕ್ ಡೌನ್ ನಲ್ಲಿ ಮನೆಲ್ಲಿರುವ ಅನಿರುದ್ಧ್ ಏನ್ ಮಾಡ್ತಿದ್ದಾರೆ ನೋಡಿ !

ಜೊತೆಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರ ನಿರ್ವಹಿಸುತ್ತಿರುವ ಅನಿರುದ್ಧ್ ಅವರು ಲಾಕ್ ಡೌನ್ ಇಂದಾಗಿ ಮನೆಯಲ್ಲಿ ಏನು ಮಾಡುತ್ತಾ ಇದಾರೆ ಗೊತ್ತಾ..

ಈ ಲಾಕ್ ಡೌನ್ ಆಕಸ್ಮಿಕವಾಗಿ ಬಂದಿರುವ ವಿರಾಮ ಅಂದುಕೊಂಡಿದ್ದಾರೆ ಅನಿರುದ್ಧ್.. ಶೂಟಿಂಗ್ ಇಂದ ಮನೆಯವರ ಜೊತೆ ಕಾಲ ಕಳೆಯಲು ಸಮಯ ಸಿಗದ ಕಾರಣ ಲಾಕ್ ಡೌನ್ ಸಮಯದಲ್ಲಿ ಮನೆಯವರ ಜೊತೆ ಹೆಚ್ಚಾಗಿ ಕಾಲ ಕಳೆಯುತ್ತಿದ್ದಾರೆ ಮತ್ತು ಮನೆಯಲ್ಲಿ ಕುಳಿತು ಮಾಡಬೇಕಾದ ಕೆಲಸಗಳನ್ನು ಮಾಡುತ್ತಿದ್ದಾರೆ.. . ಹಿರಿಯ ನಟಿ ಭಾರತಿ ವಿಷ್ಣುವರ್ಧನ್‌ ಅವರ ಜೀವನ ಪುಟಗಳನ್ನು ತೆರೆದಿಡುವ ಸಾಕ್ಷ್ಯ ಚಿತ್ರಕ್ಕೆ ಸಬ್‌ಟೈಟಲ್‌ ಬರೆಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಅನಿರುದ್ಧ್. ಜೊತೆಗೆ ಆಂಗ್ಲ ಪತ್ರಿಕೆಗೆ ಲೇಖನಗಳನ್ನು ಸಹ ಬರೆಯುತ್ತಿದ್ದಾರೆ.


ಇದರ ನಡುವೆ ಸಿನಿಮಾ ನೋಡುವುದು ಮತ್ತು ಪತ್ನಿ ಹಾಗೂ ತಾಯಿ ಭಾರತಿ ವಿಷ್ಣುವರ್ಧನ್ ಅವರ ಜೊತೆ ಮನೆ ಕೆಲಸಗಳಲ್ಲಿ ಜೊತೆಯಾಗಿದ್ದಾರೆ.. ಎಲ್ಲಕ್ಕಿಂತ ಮುಖ್ಯವಾಗಿ ಮನೆಯಲ್ಲಿ ಕುಳಿತು ತಮ್ಮ ಧಾರಾವಹಿಯನ್ನು ವೀಕ್ಷಿಸಲಿದ್ದಾರೆ ಅನಿರುದ್ಧ್..

Trending

To Top