Film News

ಲಾಕ್ ಡೌನ್ ನಲ್ಲಿ ಕಷ್ಟಪಡುತ್ತಿರುವ ಜನರಿಗೆ ನಟ ಅನಿಶ್ ಮತ್ತು ಕುಟುಂಬದವರು ಮಾಡಿರುವ ಸಹಾಯ ನೋಡಿ

ಸ್ಯಾಂಡಲ್ ವುಡ್ ನ ಉದಯೋನ್ಮುಖ ನಾಯಕ ನಟ, ನಿರ್ದೇಶಕ ಅನೀಶ್. ಸದ್ಯ ಅವರ ಕುಟುಂಬ ಲಾಕ್ ಡೌನ್ ಪರಿಣಾಮದಿಂದ ಊಟ ಸಿಗದೆ ಒದ್ದಾಡುತ್ತಿರುವ ಹಲವು ಜನರಿಗೆ ಊಟ ಒದಗಿಸುವ ಕೆಲಸ ಮಾಡುತ್ತಿದೆ. ಅನೀಶ್ ಅವರ ತಂದೆ, ತಾಯಿ, ತಂಗಿ ಹೀಗೆ ಎಲ್ಲ ಕುಟುಂಬದ ಸದಸ್ಯರು, ಒಬ್ಬರು ಅಡುಗೆ ಭಟ್ಟರು ಸೇರಿ ಅಡಿಗೆ ಸಿದ್ಧ ಮಾಡುತ್ತಾರಂತೆ. ನಂತರ ಫುಡ್ ಪ್ಯಾಕ್ ಮಾಡಿ ಮಾರತಹಳ್ಳಿಯ ಪೊಲೀಸ್ ಸ್ಟೇಷನ್ ಗೆ ರಿಪೋರ್ಟ್ ಮಾಡುತ್ತಾರಂತೆ. ನಂತರ ಕ್ಯೂ ಸಿಸ್ಟಮ್ ಮೂಲಕ ಅವಶ್ಯಕತೆ ಇರುವವರಿಗೆ ಫುಡ್ ಡಿಸ್ಟ್ರಿಬ್ಯೂಷನ್ ನಡೆಯುತ್ತಿದೆ. ಅವರ ಕುಟುಂಬದ ಕಡೆಯಿಂದ ಪ್ರತಿದಿನ 1000 ಪ್ಯಾಕೆಟ್ ತಿಂಡಿ ಅಲ್ಲಿಗೆ ತೆರಳುತ್ತಿದೆ. ಇದುವರೆಗೂ 25000 ಮಂದಿಗೆ ಊಟ ನೀಡಿರುವ ಸಂತೃಪ್ತಿಯನ್ನ ಅನೀಶ್ ವ್ಯಕ್ತಪಡಿಸಿದ್ರು.

https://www.instagram.com/p/B-eRY82Jc4z/?igshid=1su3l5fadwp6s

https://www.instagram.com/p/B-g4NwnJ9Yc/?igshid=1x6h0yss72azu

https://www.instagram.com/p/B-ysELhp2bL/?igshid=q8lbdvlmn9v9

Trending

To Top