‘ಕಾಮಿಡಿ ಕಿಲಾಡಿ’ ಸೀಸನ್ 3 ರ ರನ್ನರ್ ಅಪ್ ಆಗಿರುವ ತುಕಾಲಿ ಸ್ಟಾರ್ ಖ್ಯಾತಿಯ ಸಂತೋಷ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿಯೇ ಅವರು ಮದುವೆಯಾಗಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಸಂತೋಷ್ ಈಗಾಗಲೇ 12 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಲಾಕ್ ಡೌನ್ ಜಾರಿಯಾದ ಕಾರಣ ನಿಗದಿಯಾಗಿದ್ದ ಸಂಭ್ರಮದ ಮದುವೆಗೆ ಬ್ರೇಕ್ ಬಿದ್ದಿದ್ದು, ಅನುಮತಿ ಪಡೆದು 20 ಜನರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ.
ಕುಟುಂಬಸ್ಥರು ಮತ್ತು ಆತ್ಮೀಯರ ಸಮ್ಮುಖದಲ್ಲಿ ಮದುವೆ ನೆರವೇರಿದ್ದು, ‘ಕಾಮಿಡಿ ಕಿಲಾಡಿ’ ಖ್ಯಾತಿಯ ಮಡೆನೂರು ಮನು ಕೂಡ ಮದುವೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿದೆ.
