Film News

ಲಾಕ್ ಡೌನ್ ಕಾರಣ ರೋರಿಂಗ್ ಸ್ಟಾರ್ ಶ್ರೀಮುರಳಿ ಮನೆಯಲ್ಲಿ ಯಾವ ಕೆಲಸ ಮಾಡ್ತಿದ್ದಾರೆ ನೋಡಿ…

ಸದಾ ಸಿನಿಮಾ ಕೆಲಸಗಳು… ಚಿತ್ರೀಕರಣ ಅಂತೆಲ್ಲ ಬ್ಯುಸಿಯಾಗಿರುತ್ತಿದ್ದ ನಟ ಶ್ರೀಮುರಳಿ ಈಗ ಮನೆಯಲ್ಲಿ ಬೇರೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಈ ಬೇಸಿಗೆಯಲ್ಲಿ ಬೆವರು ಸುರಿಸಿ ದುಡಿಯುತ್ತಿದ್ದಾರೆ. ಲಾಕ್ ಡೌನ್ ಇಂದಾಗಿ ಮನೆಯಲ್ಲಿ ಈ ರೂಲ್ಸ್ ಇದೆ. ಶ್ರೀಮುರಳಿ ಮನೆಯಲ್ಲಿ ಊಟ ಮಾಡಬೇಕು ಅಂದ್ರೆ ಪಾತ್ರೆ ತೊಳೆಯಲೇಬೇಕಂತೆ. ಇಲ್ಲ ಅಂದ್ರೆ ಹೆಂಡತಿ ವಿದ್ಯಾ ಗುರ್ ಅಂತಾರಂತೆ. ಈ ಕೆಲಸ ಮಾಡಿದ್ರೆ ಬೆವರು ಕಿತ್ಕೊಂಡ್ ಬರುತ್ತಂತೆ. ಹೀಗೆಂದು ಶ್ರೀಮುರಳಿ ಪಾತ್ರೆ ತೊಳೆಯುತ್ತಿರುವ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

https://www.instagram.com/p/B_chIianftq/?igshid=h1n4yz61ovqv

Trending

To Top