Film News

ಲವ್ ಮಾಕ್ಟೇಲ್-2 ಬಗ್ಗೆ ಇಂಟೆರೆಸ್ಟಿಂಗ್ ವಿಷಯ ಹಂಚಿಕೊಂಡಿದ್ದಾರೆ ನಟಿ ಮಿಲನ ನಾಗರಾಜ್

ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸಿ, ನಿರ್ಮಿಸಿದ ಕನಸಿನ ಕೂಸು ಲವ್ ಮಾಕ್ಟೇಲ್ ಚಿತ್ರ. ಈ ಚಿತ್ರದಲ್ಲಿ ನಾಯಕಿಯ ಪಾತ್ರ ನಿರ್ವಹಿಸಿದ್ದು ನಟಿ ಮಿಲನ ನಾಗರಾಜ್. ಕೃಷ್ಣ ಮತ್ತು ಮಿಲನ ನಿಜ ಜೀವನದಲ್ಲೂ ಸಹ ಪ್ರೇಮಪಕ್ಷಿಗಳು ಎಂಬುದು ವಿಶೇಷ.
ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದ ಲವ್ ಮಾಕ್ಟೇಲ್ ಚಿತ್ರ ಎಲ್ಲರ ಮೆಚ್ಚುಗೆ ಗಳಿಸಿತು. ಜನರಂತೂ ಕೃಷ್ಣ ಮತ್ತು ಮಿಲನ ಅವರನ್ನು ಆದಿ ನಿಧಿ ಎಂದೇ ಸಂಭೋದಿಸುತ್ತಾರೆ. ಅಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿತು ಲವ್ ಮಾಕ್ಟೇಲ್.

ಕೆಲ ದಿನಗಳ ಹಿಂದೆ ಲವ್ ಮಾಕ್ಟೇಲ್2 ಸ್ಕ್ರಿಪ್ಟ್ ಕೆಲಸ ಶುರುವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಡೇಟ್ ಮಾಡಿದ್ದರು ಡಾರ್ಲಿಂಗ್ ಕೃಷ್ಣ. ಇದೀಗ ಮಿಲನ ಸಹ ಲವ್ ಮಾಕ್ಟೇಲ್2 ಚಿತ್ರದ ಬಗ್ಗೆ ಹೊಸ ಅಪ್ಡೇಟ್ ನೀಡಿದ್ದಾರೆ. ಏಪ್ರಿಲ್ 25ರಂದು ಮಿಲನ ನಾಗರಾಜ್ ಅವರ ಹುಟ್ಟುಹಬ್ಬ ಇತ್ತು, ತಮ್ಮ ಹುಟ್ಟುಬ್ಬಕ್ಕೆ ಶುಭಕೋರಿದ ಎಲ್ಲರಿಗೂ ಒಂದು ವೀಡಿಯೊ ಮೂಲಕ ಧನ್ಯವಾದ ತಿಳಿಸಿರುವ ಮಿಲನ, ಅದರ ಜೊತೆಗೆ ಲವ್ ಮಾಕ್ಟೇಲ್2 ಬಗ್ಗೆ ಸಹ ಹೇಳಿದ್ದಾರೆ.

“ಎಲ್ಲರಿಗೂ ನಮಸ್ಕಾರ , ನನ್ನ ಹುಟ್ಟುಹಬ್ಬಕ್ಕೆ ನೀವೆಲ್ಲರೂ ಮೆಸೇಜ್, ವೀಡಿಯೊ , ಸ್ಕೆಚ್ ಮೂಲಕ ಶುಭಾಶಯ ತಿಳಿಸಿದ್ದೀರಾ, ಅದರಿಂದ ನನಗೆ ತುಂಬ ಸ್ಪೆಷಲ್ ಫೀಲ್ ಆಯ್ತು. ಎಲ್ಲರಿಗೂ ಧನ್ಯವಾದಗಳು. ನೀವೆಲ್ಲರೂ ಲವ್ ಮಾಕ್ಟೇಲ್-2 ಚಿತ್ರಕ್ಕೋಸ್ಕರ ಕಾಯುತ್ತಾ ಇದ್ದೀರಾ, ಲವ್ ಮಾಕ್ಟೇಲ್2 ಚಿತ್ರದ ಸ್ಕ್ರಿಪ್ಟ್ ಕೆಲಸ ನಡೀತಾ ಇದೆ , ಕಥೆ ಚೆನ್ನಾಗಿ ಡೆವೆಲಪ್ ಆಗ್ತಾ ಇದೆ. ಒಳ್ಳೆಯ ಔಟ್ ಪುಟ್ ಕೊಡ್ತೀವಿ, ಮತ್ತೊಮ್ಮೆ ಎಲ್ಲರಿಗೂ ಥ್ಯಾಂಕ್ ಯೂ” ಎಂದು ಹೇಳಿದ್ದಾರೆ ಮಿಲನ.

Trending

To Top