Kollywood

ಲಂಡನ್ ನಿಂದ ವಾಪಸ್ ಆದ ನಂತರ ಸ್ವಯಂ ಗೃಹ ಬಂಧನದಲ್ಲಿರುವ ನಟಿ ಸುಹಾಸಿನಿ ಅವರ ಮಗ ನಂದನ್!

ಪ್ರಪಂಚಾದ್ಯಂತ ಕೊರೊನಾ ವೈರಸ್ ಹೆಚ್ಚಾಗುತ್ತಲೇ ಇದೆ . ಭಾರತದಲ್ಲಿಯೂ ಸಹ ಕೊರೊನಾ ಭೀತಿ ಹೆಚ್ಚಾಗಿದ್ದು ಮಾರ್ಚ್ 31ರ ವರೆಗೂ ಲಾಕ್ ಡೌನ್ ಮಾಡಲಾಗಿದೆ. ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ವಿದೇಶದಲ್ಲಿ ನೆಲೆಸಿರುವ ಭಾರತೀಯರನ್ನು ಮರಳಿ ಕರೆತರಲಾಗುತ್ತಿದೆ .

ಲಂಡನ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ನಟಿ ಸುಹಾಸಿನಿ ಮಣಿರತ್ನಂ ಅವರ ಮಗ ನಂದನ್ ಸಹ ಭಾರತಕ್ಕೆ ವಾಪಸ್ ಬಂದಿದ್ದಾರೆ. ಸಧ್ಯಕ್ಕೆ ಅವರು ಸ್ವಯಂ ನಿರ್ಬಂಧದಲ್ಲಿ ಇದ್ದಾರೆ.

ವಿದೇಶದಿಂದ ಬರುತ್ತಿರುವ ಎಲ್ಲರಿಗೂ ‘Home Quarantined’ stamp ಹಾಕುತ್ತಿದ್ದು ಅವರು ಎಲ್ಲಿಯ ವರೆಗೂ ಗೃಹ ಬಂಧನದಲ್ಲಿ ಇರಬೇಕು ಎಂದು ಆ stamp ನಲ್ಲಿ ಇರುತ್ತದೆ.

ನಟಿ ಸುಹಾಸಿನಿ ಪುತ್ರ ನಂದನ್ ಕೂಡ ಈಗ ಗೃಹ ಬಂಧನದಲ್ಲಿ ಇದ್ದಾರೆ. ಮನೆಯ ಒಂದು ಕೋಣೆಯಲ್ಲಿಯೆ ನಂದನ್ ನೆಲೆಸಿದ್ದಾರೆ. ಈಗಾಗಲೆ 5 ದಿನಗಳಾಗಿದ್ದು, ಇನ್ನೂ 9 ದಿನಗಳು ಯಾರೊಂದಿಗೂ ಸಂಪರ್ಕ ಸಾದಿಸದಂತೆ ಮುಂಜಾಗೃತಿ ವಹಿಸಲಾಗಿದೆ. ಮಗ ಆರೋಗ್ಯವಾಗಿರುವ ಬಗ್ಗೆ ಸುಹಾಸಿನಿ ಬಹಿರಂಗ ಪಡಿಸಿದ್ದಾರೆ. ನಂದನ್ ಗೆ ಕೋಣೆಯಲ್ಲಿಯೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಕೋಣೆಯೊಳಗೆ ಊಟ ಇಡುವಾಗ ಮತ್ತು ನಂತರ ಆ ಜಾಗಕ್ಕೆ ಸ್ಪ್ರೇ ಮಾಡಲಾಗುತ್ತಿದೆ.
ಈ ಬಗ್ಗೆ ನಟಿ ಸುಹಾಸಿನಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಮಗನ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ನಂದನ್ ಕೂಡ ಮಾತನಾಡಿದ್ದು, ಇದು ದೊಡ್ಡ ವಿಚಾರವಲ್ಲ. ಯಾರೂ ಗಾಭರಿಯಾಗಬೇಕಿಲ್ಲ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಹೇಳಿದ್ದಾರೆ.

https://www.instagram.com/p/B-BPrd2DiEz/?igshid=o11xw8dc6ry5

https://www.instagram.com/tv/B-BNscOjhFx/?igshid=6vkswm08zf7l

Trending

To Top