Karnataka

ರೋಚಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲ್ಲ ಆದರೆ ನನ್ನ ಪಾತ್ರಗಳು ರೋಮಾಂಚನಕಾರಿಯಾಗಿರಬೇಕು: ಕಿಚ್ಚ ಸುದೀಪ್

ಈ ಶುಕ್ರವಾರ ಬಿಡುಗಡೆಯಾಗಲಿರುವ ದಬಾಂಗ್ ಚಿತ್ರಸರಣಿಯ ದಬಾಂಗ್ 3ನಲ್ಲಿ ಬಾಲಿವುಡ್ ನಟ ಸಲ್ಮಾನ್ ಕಾನ್ ಚುಲ್ಬುಲ್ ಪಾಂಡೆ ಆಗಿ ಮತ್ತೆ ತೆರೆ ಮೇಲೆ ಮಿಂಚಲಿದ್ದಾರೆ. ಭುದೇವ ನಿರ್ದೇಶನದ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ನ ಕಿಚ್ಚ ಸುದೀಪ್ ಸಲ್ಮಾನ್ ಗೆ ಎದುರಾಳಿಯಾಗಿದ್ದು ಬಾಲಿ ಸಿಂಗ್ ಆಗಿ ಕಾಣಿಸಿಕೊಂಡಿದ್ದಾರೆ. ‘ಈ ಚಿತ್ರದಲ್ಲಿ ಬಾಲಿ ಸಿಂಗ್ ಪಾತ್ರಕ್ಕೆ ಅತ್ಯಂತ ಮುಖ್ಯಸ್ಥಾನವಿದೆ.ಆ ಪಾತ್ರ ತನ್ನ ಆಲೋಚನೆಗಳಲ್ಲಿ ಸ್ಪಷ್ಟವಾಗಿದ್ದು ಅವನಿಗೆ ಏನು ಬೇಕು ಎಂದು ತಿಳಿದಿದೆಯ;;ಅದೆ ಚುಲ್ಬುಲ್ ಪಾಂಡೆ ಅವನನ್ನೇಕೆ ವಿರೋಧಿಸುತ್ತಾನೆ ಎನ್ನುವುದು ಸಹ ಗೊತ್ತಿದೆ”ಸುದೀಪ್ ಹೇಳಿದ್ದಾರೆ.

“ಬಾಲಿ ಸಿಂಗ್ ನಂತಹಾ ಪಾತ್ರವನ್ನು ನಿರ್ವಹಿಸಿದ ನಂತರ ಮತ್ತು ಚಿತ್ರತಂಡ ಈ ಪಾತ್ರವನ್ನು ದೊಡ್ಡ ಪರದೆಯ ಮೇಲೆ ಎಷ್ಟು ಚೆನ್ನಾಗಿ ತೋರಿಸಿದ್ದಾರೆ ಎನ್ನುವುದನ್ನು ನೋಡಿದ ನಂತರ, ಈ ಚಿತ್ರ ಜನರಿಗೆ ಮೋಡಿ ಮಾಡುವ ಬಗೆಗೆ ನನಗೆ ಇನ್ನೂ ಉತ್ತಮ ಭರವಸೆಯನ್ನು ತಂದಿದೆ”

ಖಳನಾಯಕನಾಗಿ ಮೊದಲ ಬಾರಿಗೆ ಎಸ್.ಎಸ್. ರಾಜಮೌಳಿ ಅವರ ಈಗ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಸುದೀಪ್ ವಿಜಯ್ ಅಭಿನಯದ 2015 ರ ತಮಿಳು ಚಿತ್ರ ಪುಲಿಯ ಬಳಿಕ ದಬಾಂಗ್ 3ನಲ್ಲಿ ಮತ್ತೆ ಖಳನಟನಾಗಿ ತೆರೆಗೆ ಬರಲಿದ್ದಾರೆ. ಈ ಮೂಲಕ ಸುದೀಪ್ ಬಾಲಿವುಡ್ ಗೆ ಪುನರಾಗಮನ ಮಾಡುತ್ತಿದ್ದಾರೆ. ದಬಾಂಗ್ 3 ಅನ್ನು ಅವರು ಏಕೆ ಆಯ್ಕೆ ಮಾಡಿಕೊಂಡರೆಂದು ಕೇಳಿದಾಗ ನಟ “ನನ್ನ 24 ವರ್ಷಗಳ ಕೆರಿಯರ್ ನಲ್ಲಿ ನನ್ನ ವೃತ್ತಿಜೀವನದ ಈ ಹಂತದಲ್ಲಿ, ನಾನು ಈ ವಿಷಯಗಳ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ” ಎಂದರು.

“ನನ್ನ ಕೈತುಂಬಾ ಕೆಲಸಗಳಿದೆ” ಎನ್ನುವ ಸುದೀಪ್ “ಸಲ್ಮಾನ್ ಖಾನ್ ಅವರಂತಹ ನಟನೊಂದಿಗೆ ಸಹನಟನಾಗಿ ಕಾಣಿಸಿಕೊಳ್ಳುವ ಅವಕಾಸ ಸಿಕ್ಕಾಗ ಅದರ ಬಗ್ಗೆ ಹೆಚ್ಚು ಯೋಚಿಸದೆ ಹೋಗಿ ಕೆಲಸ ಮಾಡುವುದು ಒಳಿತು.ಸಲ್ಮಾನ್ ಖಾನ್ ಅವರಂತಹ ಸಾಧಕನೊಂದಿಗೆ ಕೆಲಸ ಮಾಡುವುದು ಯಾರೂ ತಪ್ಪಿಸಿಕೊಳ್ಳಬಾರದ ಒಂದು ಅವಕಾಶ. ಸಲ್ಮಾನ್ ಖಾನ್ ಮತ್ತು ಉಳಿದ ಪಾತ್ರವರ್ಗ ಮತ್ತು ಸಿಬ್ಬಂದಿಯಿಂದ ನಾನು ಪಡೆದ ಗೌರವ, ಪ್ರೀತಿ ಮತ್ತು ಕಾಳಜಿ ನನ್ನ ನಿರ್ಧಾರವನ್ನು ನಾನು ಎಂದಿಗೂ ಪ್ರಶ್ನಿಸಲು ಸಾಧ್ಯವಾಗದ್ದಾಗಿ ಮಾಡಿದೆ. ಬಾಲಿ ಸಿಂಗ್ ಪಾತ್ರವನ್ನು ಮಾಡಲು ಸಲ್ಮಾನ್ ಅವರೇ ನನಗೆ ಹೆಚ್ಚುವರಿ ಸಂಭಾಷಣೆಗಳನ್ನು ಬರೆದ ಉದಾಹರಣೆಗಳಿವೆ. ದಬಾಂಗ್ 3 ಸುಂದರವಾದ ಕ್ಷಣಗಳನ್ನು ಹೊಂದಿದೆ, ಮತ್ತು ಚಿತ್ರವು ಉತ್ತಮವಾಗಿ ಹೆಸರು ಗಳಿಸಲಿದೆ ಎಂದು ನಾನು ಭಾವಿಸುತ್ತೇನೆ. ‘

ಭವಿಷ್ಯದಲ್ಲಿ ಯಾವ ರೀತಿಯ ಪಾತ್ರಗಳನ್ನು ಮಾಡಲಿದ್ದೀರಿ ಎಂದು ಕೇಳಲಾಗಿ ಸುದೀಪ್ “ನಾನು ಪಾತ್ರಕ್ಕಾಗಿ ನನ್ನನ್ನು ಯಾರಾದರೂ ಸಂಪರ್ಕಿಸಿದ ಬಳಿಕ ಅದರ ಬಗ್ಗೆ ಯೋಚಿಸುತ್ತೇನೆ. ನಾನು ಏನು ಮಾಡಬೇಕೆಂಬುದರ ಬಗ್ಗೆ ನನಗೆ ಕಲ್ಪನೆಗಳಿದೆ. ನಾನೀಗ ಕಾಯುವ ಕೆಲಸವನ್ನಷ್ಟೇ ಬಯಸುತ್ತೇನೆ. ನಟನಾಗಿ, ನನ್ನ ಪಾತ್ರವನ್ನು ಪ್ರೇಕ್ಷಕರಿಗೆ ರೋಮಾಂಚನ ನೀಡುವಂತೆ ಅಭಿನಯಿಸುವುದು ನನ್ನ ಗುರಿಯಾಗಿದೆ. ಯಾರಾದರೂ ರೋಚಕ ಪಾತ್ರವನ್ನು ಮಾಡಬಹುದು. ಮತ್ತೊಂದೆಡೆ, ಪಾತ್ರವನ್ನು ರೋಮಾಂಚನವಾಗುವಂತೆ ಅಭಿನಯಿಸಲು ನಾನು ಬಯಸುತ್ತೇನೆ. ನಮ್ಮಲ್ಲಿ ಕೆಲವು ಸುಂದರ ನಿರ್ದೇಶಕರು ಇದ್ದಾರೆ, ಅವರು ಸ್ಪಷ್ಟತೆಯನ್ನು ಹೊಂದಿದ್ದಾರೆ ಮತ್ತು ಅವರ ಆಲೋಚನೆಗಳನ್ನು ತಲುಪಿಸಲು ಸರಿಯಾದ ವೇದಿಕೆಯನ್ನು ಬಳಸುತ್ತಾರೆ. ‘

ಚುಲ್ಬುಲ್ ಪಾಂಡೆ ಮತ್ತು ಬಾಲಿ ಸಿಂಗ್ ನಡುವಿನ ಮುಖಾಮುಖಿ, ‘ಮರೆಯಲಾಗದ ಕ್ಲೈಮ್ಯಾಕ್ಸ್’ ಎಂದು ಹೇಳಲಾಗುತ್ತದೆ, ಇದು ದಬಾಂಗ್ 3 ರ ಅತಿದೊಡ್ಡ ಪ್ಲಸ್ ಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಈ ದೃಶ್ಯವನ್ನು 23 ದಿನಗಳ ಅವಧಿಯಲ್ಲಿ ಚಿತ್ರೀಕರಿಸಲಾಯಿತು ಮತ್ತು 500 ಜನರನ್ನು ಒಳಗೊಂಡಿತ್ತು, ಮತ್ತು ಕನಿಷ್ಠ 100 ಕಾರುಗಳನ್ನು ಸ್ಫೋಟಿಸುವ ದೃಶ್ಯವನ್ನು ಇಲ್ಲಿ ಸೇರಿಸಲಾಗಿದೆ.

ಇದು ಸಾಮಾನ್ಯ ಕ್ಲೈಮ್ಯಾಕ್ಸ್ ನಂತಲ್ಲ , ಅಲ್ಲಿ ನಾಯಕ ಮತ್ತು ಖಳನಾಯಕ ಪರಸ್ಪರರ ವಿರುದ್ಧ ಹೋರಾಡುತ್ತಾರೆ. ಈ ಆಕ್ಷನ್-ಪ್ಯಾಕ್ಡ್ ಕ್ಲೈಮ್ಯಾಕ್ಸ್ ಚುಲ್ಬುಲ್ ಪಾಂಡೆ ಮತ್ತು ಬಾಲಿ ಹ್ಯಾಂಡ್ ಟು ಹ್ಯಾಂಡ್ ಹೋರಾಟವಿದೆ. ಕ್ಲೈಮ್ಯಾಕ್ಸ್ನ ಕೆಲವು ದೃಶ್ಯಾವಳಿಗಳನ್ನು ಬೃಹತ್ ಸೆಟ್ ನಲ್ಲಿ ಚಿತ್ರೀಕರಿಸಲಾಗಿದೆ, ಮತ್ತು ಸಲ್ಮಾನ್ ಸರ್ ಇದಕ್ಕಾಗಿ ನಿಜವಾಗಿಯೂ ಶ್ರಮಿಸಿದರು, “ಎಂದು ಸುದೀಪ್ ಹೇಳಿದ್ದಾರೆ. ಬಾಲಿ ಸಿಂಗ್ ಪಾತ್ರಕ್ಕೆ ರೋಮ್ಯಾಂಟಿಕ್ ಕೋನವಿದೆ ಎಂದು ಸುದೀಪ್ ಬಹಿರಂಗಪಡಿಸುತ್ತಾರೆ.

ಇನ್ನು ಈ ಹಿಂದಿನ ದಬಂಗ್ ಸೀರೀಸ್ ಗಳನ್ನು ವೀಕ್ಷಿಸಿದ ಸುದೀಪ್ ಚುಲ್ಬುಲ್ ಪಾಂಡೆ ಇರುವವರೆಗೂ ಈ ಸರಣಿಯು ಜೀವಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. “ಖಳನಾಯಕರು ಬರುತ್ತಾರೆ, ಹೋಗುತ್ತಾರೆ. ಆದರೆ ಸಲ್ಮಾನ್ ಹಾಸ್ಯ ಮತ್ತು ಆಕ್ಷನ್ ಯಾವಾಗಲೂ ಇಷ್ತವಾಗುತ್ತದ ಎಂದು ಸುದೀಪ್ ಹೇಳುತ್ತಾರೆ. “ಅವರಿಗೆ ದೊಡ್ಡ ಹಾಸ್ಯ ಪ್ರಜ್ಞೆ ಇದೆ. ಸಹಜವಾಗಿ, ಅವರು ಲವ್ ಸೀನ್ ಗಳಲ್ಲಿ ಸಹ ಚೆನ್ನಾಗಿ ಕಾಣಿಸುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಒಬ್ಬ ವ್ಯಕ್ತಿಯಾಗಿ ತೆ ನಾನು ಅವನನ್ನು ಇಷ್ಟಪಡುತ್ತೇನೆ. 1 ರಿಂದ 10 ರ ಪ್ರಮಾಣದಲ್ಲಿ, ನಾನು ಸಲ್ಮಾನ್ ಎಂಬ ಸ್ಟಾರ್ ಅನ್ನು 8 ಅಥವಾ 9 ನೇ ಸ್ಥಾನದಲ್ಲಿ ಕಾಣುತ್ತೇನೆ. ಆದರೆ ಮಾನವನಾಗಿ ಅವರು 10ನೇ ಸ್ಥಾನ ಮೀರಿ ಹೋಗುತ್ತಾರೆ” ಅವರು ವಿವರಿಸಿದ್ದಾರೆ.

Trending

To Top