Food

ರುಚಿಯಾದ ಫ್ರೆಂಚ್ ಫ್ರೈಸ್ ಮಾಡುವ ವಿಧಾನ

ಕಳೆದ ನಾಕ್ಲೈದು ವರ್ಷಗಳಿಂದ ಎಲ್ಲರ ಫೇವರೆಟ್ ಆಗಿರುವ ಸ್ನ್ಯಾಕ್ ಫ್ರೆಂಚ್ ಫ್ರೈಸ್. ಎಲ್ಲಾ ಮಕ್ಕಳಿಗೂ ಹಾಗೂ ದೊಡ್ಡವರೂ ಇಷ್ಟಪಡುವ ಈ ಫ್ರೆಂಚ್ ಫ್ರೈಸ್ ಅನ್ನು ಮಾಡುವ ವಿಧಾನವನ್ನು ತಿಳಿಯೋಣ…

ಬೇಕಾಗುವ ಪದಾರ್ಥಗಳು..
1. ಆಲೂಗಡ್ಡೆ 4-5 ( ದೊಡ್ಡದು )
2. ಕೆಂಪು ಮೆಣಸಿನ ಪುಡಿ ಮತ್ತು ಉಪ್ಪು
3. ತೈಲ

ಮಾಡುವ ವಿಧಾನ
ಆಲೂಗಡ್ಡೆಯ ಸಿಪ್ಪೆ ತೆಗೆದು ಉದ್ದನೆಯ ತುಂಡುಗಳಾಗಿ ಕತ್ತರಿಸಿ. ನಂತರ ಅವುಗಳನ್ನು ಚೆನ್ನಾಗಿ ತೊಳೆದು 15 ನಿಮಿಷಗಳ ಕಾಲ ಕುದಿಸಿ ನಂತರ ಅವುಗಳನ್ನು ತೆಗೆದು ಸ್ವಲ್ಪ ಸಮಯದವರೆಗೆ ಬಟ್ಟೆಯ ಮೇಲೆ ಒಣಗಿಸಿ.

ಅದು ಒಣಗಿದ ನಂತರ, 3 ರಿಂದ 4 ನಿಮಿಷಗಳ ಕಾಲ ಡೀಪ್ ಫ್ರೈ ಮಾಡಿ (ಕಅರ್ಧ ಫ್ರೈ ಮಾತ್ರ ಮಾಡಬೇಕು).

ನಂತರ ಅರ್ಧ ಕರಿದ ಆಲೂಗಡ್ಡೆಯನ್ನು ಫ್ರಿಜ್ ನಲ್ಲಿ 15-20 ನಿಮಿಷ (ಫ್ರೀಜರ್) ಇಡಬೇಕು. ನಂತರ ತೆಗೆದು ಮತ್ತೆ ಆಲೂಗಡ್ಡೆಯನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವ ವರೆಗೂ ಡೀಪ್ ಫ್ರೈ ಮಾಡಿ. ಇದಕ್ಕೆ ಕೆಂಪು ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ.. ಸವಿಯಿರಿ..

ರೆಸಿಪಿ ಕ್ರೆಡಿಟ್ಸ್ : ಡಾ.ನೇತ್ರ ಎನ್.ಎಸ್

Trending

To Top