Film News

ರಿವೀಲ್ ಆಯ್ತು ಕಿಚ್ಚನ ಸ್ಟನ್ನಿಂಗ್ ಲುಕ್ !

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಲಾಕ್ಡೌನ್ನಿಂದಾಗಿ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಲಾಕ್ಡೌನ್ನಲ್ಲಿ ಮನೆಯಲ್ಲೇ ಇರುವ ಸುದೀಪ್ ತಮ್ಮ ಹೊಸ ಸಿನಿಮಾಗಾಗಿ ಮನೆಯಲ್ಲೇ ತಯಾರಿ ಶುರು ಮಾಡಿದ್ದಾರೆ.

ಮಾರ್ಚ್ ತಿಂಗಳಿನಲ್ಲೇ ಫ್ಯಾಂಟಮ್ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿತ್ತು. ಈ ಸಿನಿಮಾದಲ್ಲಿ ಸುದೀಪ್ ವಿಕ್ರಾಂತ್ ರೋಣ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಕ್ರಾಂತ್ ರೋಣ ಪಾತ್ರಕ್ಕಾಗಿ ಸುದೀಪ್ ಜಿಮ್ನಲ್ಲಿ ಸಿಕ್ಕಾಪಟ್ಟೆ ವರ್ಕ್ಔಟ್ ಮಾಡುತ್ತಿದ್ದಾರೆ. ಶ್ರಮ ಪಟ್ಟರೆ ಫಲ ಉತ್ತಮವಾಗಿರುತ್ತದೆ ಎಂದು ಕಿಚ್ಚ ತಮ್ಮ ಇನ್ಸ್ಟಾಗ್ರಾಂನಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

https://www.instagram.com/p/B_2Q_vojgw7/?igshid=t3xf80tk4xa6

Trending

To Top