Film News

ರಾಮು ಅವರ ಸಾವಿನ ಬಗ್ಗೆ ಮಾಲಾಶ್ರೀ ಅವರು ಹೇಳಿದ್ದೇನು ನೋಡಿ..

ಕನ್ನಡದಲ್ಲಿ ಕೋಟಿ ನಿರ್ಮಾಪಕ ಎಂದೇ ಹೆಸರು ಮಾಡಿದ ಕನ್ನಡದ ಬಿಗ್ ಬಡ್ಜೆಟ್ ಪ್ರೊಡ್ಯೂಸರ್ ರಾಮು ಹುಟ್ಟೂರಾದ ಕುಣಿಗಲ್ ನ ಕೊಡಿಗೆಹಳ್ಳಿಯಲ್ಲಿ ಸರ್ಕಾರದ ನಿಯಮಗಳೊಂದಿಗೆ ಪಂಚಬೂತಗಳಲ್ಲಿ ಲೀನರಾಗಿದ್ದಾರೆ.ರಾಮು ಅವರ ಅಂತಕ್ರಿಯೆಯನ್ನ ಇಡೀ ಕುಟುಂಬವೇ ನೆರವೇರಿಸಿದ್ದು, ಪ್ರೀತಿಯ ಗಂಡ ಮತ್ತು ತಂದೆಯನ್ನ ಕೊನೆಯ ಬಾರಿ ಕಣ್ತುಂಬಿಕೊಂಡು ಗಳಗಳನೆ ಕಣ್ಣೀರು ಹಾಕಿದ್ದಾರೆ.ಗಂಡನ ಅಂತಕ್ರಿಯೆಗಳನ್ನ ಮುಗಿಸಿದ ಮಾಲಾಶ್ರೀ ಅವರು ಮೊದಲ ಬಾರಿಗೆ ಮಾತನಾಡಿದ್ದು ಗಂಡನ ಸಾವಿಗೆ ಅಸಲಿ ಕಾರಣವನ್ನ ಬಿಚ್ಚಿಟ್ಟಿದ್ದಾರೆ.

ರಾಮು ಅವರು ಸತ್ತಿದ್ದು ಕಾರೋನದಿಂದಲ್ಲ ಈ ವಿಷಯವನ್ನ ಕುಟುಂಬವೇ ಹೇಳಿದೆ.ಒಂದು ವಾರದ ಹಿಂದೆ ರಾಮು ಅವರಿಗೆ ಕೊರೋನ ಸೋಂಕು ದೃಢ ಪಟ್ಟಿತ್ತು, ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಸೇರಿಸಲಾಗಿತ್ತು, ಕೊರೋನಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಸಹ ಕೊಡುತ್ತಿದ್ದರು.ಆದರೆ ಮೊನ್ನೆಯ ದಿನ ಫುಡ್ ಪಾಯಿಸನ್ ನಿಂದಾಗಿ ರಾಮು ಅವರು ಮೃತಪಟ್ಟಿದ್ದಾರಂತೆ, ಹೌದು ಆರಂಭದಲ್ಲಿ ಕೊರೋನ ಸೋಂಕಿನಿಂದ ರಾಮು ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ಎಲ್ಲಡೆ ಅರಡಿತ್ತು.ಆದರೆ ಅದಕ್ಕೆ ಅಸ್ಪತ್ರೆಯ ವೈದ್ಯರು ಸಾವಿನ ವಿಷಯ ತಿಳಿಸಿದ್ದು ಮಾಲಾಶ್ರೀ ಅವರು ಕೂಡ ವೈದ್ಯರ ಮಾತನ್ನೆ ಹೇಳಿದ್ದಾರೆ.”ರಾಮು ಅವರಿಗೆ ಕೊರೋನ ಬಂದು ಮನೆಯಲ್ಲೇ ಚಿಕಿತ್ಸೆ ಪಡೆದುಕೊಂಡರು ಬಳಿಕ ಅತಿಯಾದ ಉಸಿರಾಟದ ತೊಂದರೆ ಕಾಣಿಸಿಕೊಂಡ ಬಳಿಕ ಆಸ್ಪತ್ರೆಗೆ ಸೇರಿಸಿದೆವು, ಆದರೆ ಮೊನ್ನೆ ದಿನ ಏಕಾಏಕಿ ಫುಡ್ ಪಾಯಿಸನ್ ಆಯಿತು ನೋಡುನೋಡುತ್ತಿದಂತೆ ಪೂರ್ತಿ ಸ್ವಾದಿನವನ್ನ ಕಳೆದುಕೊಂಡು ವಿಧಿವಶರಾದರು ಎಂದು ಹೇಳಿದ್ದಾರೆ.

Trending

To Top