ದೇಶದಲ್ಲಿ 21 ದಿನಗಳ ಲಾಕ್ಡೌನ್ ಹೇರಲಾಗಿದ್ದು, ಜನರು ಮನೆಯಿಂದ ಹೊರಬರದಂತೆ ನಿರ್ಬಂಧ ಹೇರಲಾಗಿದೆ. ಈ ವೇಳೆ ಡಿಡಿ ನ್ಯಾಷನಲ್ನಲ್ಲಿ ವಿವಿಧ ಪ್ರಮುಖ ಶೋಗಳು ಬಿತ್ತರಗೊಳ್ಳುತ್ತಿದ್ದು, ಅದರ ಸಾಲಿಗೆ ಇದೀಗ ಶಕ್ತಿಮಾನ್ ಸಹ ಸೇರ್ಪಡೆಯಾಗಿದೆ. ಲಾಕ್ಡೌನ್ ಆದೇಶ ಹೊರಬೀಳುತ್ತಿದ್ದಂತೆ ದಶಕದ ಹಿಂದಿನ ಶೋಗಳಾಗಿರುವ ರಾಮಾಯಣ, ಮಹಾಭಾರತ ಸೇರಿದಂತೆ ವಿವಿಧ ಶೋ ಡಿಡಿ ನ್ಯಾಷನಲ್ನಲ್ಲಿ ಮರು ಪ್ರಸಾರಗೊಳ್ಳುತ್ತಿವೆ.
ಅದೇ ರೀತಿ ಪ್ರಸಿದ್ಧ ಶೋಗಳಲ್ಲಿ ಒಂದಾಗಿರುವ ಶಕ್ತಿಮಾನ್ ಕೂಡ ಮರುಪ್ರಸಾರವಾಗುತ್ತಿದ್ದು, ಏಪ್ರಿಲ್ ತಿಂಗಳಿಂದ ಪ್ರತಿದಿನ ಮಧ್ಯಾಹ್ನ 1ಗಂಟೆಗೆ ಪ್ರಸಾರವಾಗಲಿದೆ. ಇದರ ಜತೆಗೆ ಚಾಣಕ್ಯ, ಉಪನಿಷದ್ಧ ಗಂಗಾ, ಶ್ರೀಮನ್ ಶ್ರೀಮಂತಿ ಹಾಗೂ ಕೃಷ್ಣ ಕಾಲಿ ಮರುಪ್ರಸಾರಗೊಳ್ಳಲಿವೆ ಎಂದು ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಇಲಾಖೆ ಮಾಹಿತಿ ನೀಡಿದೆ. ಈ ಹಿಂದೆ ಪ್ರಸಾರಗೊಳ್ಳುತ್ತಿದ್ದ ಶಕ್ತಿಮಾನ್ ನೋಡಲು ಸಾವಿರಾರು ಜನರು ದೂರದರ್ಶನದ ಮುಂದೆ ಕುಳಿತುಕೊಳ್ಳುತ್ತಿದ್ದರು. ಹೀಗಾಗಿ ಮತ್ತೊಮ್ಮೆ ಅದರ ಮರುಪ್ರಸಾರ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
