ದರ್ಶನ್ ಅಭಿಮಾನಿಗಳಿಗೆ ಹೊಸ ಸುದ್ದಿಯೊಂದಿದೆ. ಅದೇನಂದ್ರೆ, ರಾಬರ್ಟ್ ನಂತರ ದರ್ಶನ್ ಮತ್ತು ತರುಣ್ ಸುಧೀರ್ ಮತ್ತೊಂದು ಸಿನಿಮಾ ಮಾಡಲಿದ್ದಾರೆ. ಈ ಚಿತ್ರಕ್ಕೆ ಬಂಡವಾಳ ಹಾಕ್ತಿರೋದು ರಾಬರ್ಟ್ ಚಿತ್ರ ನಿರ್ಮಿಸಿರೋ ಡಿ. ಉಮಾಪತಿ.
ಹೌದು, ದರ್ಶನ್, ತರುಣ್ ಮತ್ತು ಉಮಾಪತಿ ಕಾಂಬಿನೇಶನ್ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೆರೋದು ಬಹುತೇಕ ಖಚಿತವಾಗಿದೆ. ವಿಶೇಷ ಅಂದ್ರೆ, ಚರ್ಚೆಯ ಹಂತದಲ್ಲಿರುವ ಸಿನಿಮಾದಲ್ಲಿ ದರ್ಶನ್ ರಾಬಿನ್ಹುಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ವೀರ ಮದಕರಿ ನಾಯಕ ಚಿತ್ರದ ನಂತರ ತರುಣ್ ನಿರ್ದೇಶನದ ಹೊಸ ಚಿತ್ರದ ಚಿತ್ರೀಕರಣ ಶುರುವಾಗುವ ಸಾಧ್ಯತೆ ಇದೆ. ಈಗಾಗಲೇ ಈ ಚಿತ್ರದ ಬಗ್ಗೆ ಮಾತುಕತೆ ನಡೆದಿದ್ದು, ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಕಥೆಯಾಧರಿಸಿದ ಚಿತ್ರ ಇದಾಗಿದೆ ಎಂದು ತಿಳಿದು ಬಂದಿದೆ.
