Film News

‘ರಾಬರ್ಟ್’ ಚಿತ್ರಸ ದೋಸ್ತಿ ಹಾಡು ಮಾರ್ಚ್ 21ರಂದು ಬಿಡುಗಡೆಯಾಗಲಿದೆ!

ಈ ವರ್ಷದ ಬಹು ನಿರೀಕ್ಷಿತ ಚಿತ್ರ ಎಂದರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್‌. ಏಪ್ರಿಲ್‌ನಲ್ಲಿ ಚಿತ್ರ ರಿಲೀಸ್‌ ಮಾಡಲು ಪ್ಲಾನ್ ಮಾಡಿರೋ ಚಿತ್ರತಂಡ ಈಗಾಗಲೇ ಎರಡು ಹಾಡುಗಳನ್ನ ರಿಲೀಸ್ ಮಾಡಿದೆ. ಬಾ.. ಬಾ.. ನಾ ರೆಡಿ.. ಮತ್ತು ಜೈ ಶ್ರೀರಾಮ್‌ ಹಾಡುಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈಗ ಮತ್ತೊಂದು ಹಾಡು ರಿಲೀಸ್ ಮಾಡಲು ಡೈರೆಕ್ಟರ್‌ ತರುಣ್‌ ಸುಧೀರ್‌ ಟೀಮ್‌ ನಿರ್ಧರಿಸಿದೆ.

ಮಾರ್ಚ್ 21ರಂದು ದೋಸ್ತಾ ಕಣೋ ಹಾಡು, ಆನಂದ್ ಆಡಿಯೋ ಯೂಟ್ಯೂಬ್‌ ಚಾನಲ್‌ನಲ್ಲಿ ಬೆಳಗ್ಗೆ 11.04ಕ್ಕೆ ರಿಲೀಸ್ ಆಗಲಿದೆ. ಈ ಹಾಡು ಹೇಗಿರಲಿದೆ ಅನ್ನೋದರ ಬಗ್ಗೆ ಚರ್ಚೆ ಶುರುವಾಗಿದೆ. ಎರಡು ಹಾಡುಗಳು ಹಿಟ್ ಆಗಿರುವುದರಿಂದ ಈ ಹಾಡಿನ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಿದೆ. ಅರ್ಜುನ್ ಜನ್ಯಾ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

Trending

To Top