Film News

ರಾಬರ್ಟ್ ಚಿತ್ರದ ಬಿಡುಗಡೆ ಬಗ್ಗೆ ಸುಳಿವು ಕೊಟ್ರು ನಿರ್ಮಾಪಕ ಉಮಾಪತಿ

ರಾಬರ್ಟ್ ಸಿನಿಮಾದ ಎಲ್ಲಾ ಕೆಲಸ ಮುಗಿದಿದೆ. ಲಾಕ್ ಡೌನ್ ತೆರವಾದ ನಂತರ ಒಂದಷ್ಟು ಪ್ರಮೋಷನ್ ಪ್ಲಾನ್ಸ್ ಮಾಡಿಕೊಂಡಿದ್ದೀವಿ. ಜೊತೆಗೆ ಅಭಿಮಾನಿಗಳಿಗಾಗಿ ಹಾಗೂ ಚಿತ್ರದ ಪ್ರಚಾರಕ್ಕಾಗಿ ಒಂದಷ್ಟು ಕಂಟೆಂಟ್ ಸಿದ್ಧವಾಗ್ತಿದೆ. ಕೊರೊನಾ ಭೀತಿ ಕಡಿಮೆ ಆದ್ಮೇಲೆ ಖಂಡಿತಾ ಸಿನಿಮಾ ರಿಲೀಸ್ ಆಗಲಿದೆ ಅಂತಾ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ತಿಳಿಸಿದ್ದಾರೆ.

ಕೊರೊನಾದಿಂದ ಒಂದಷ್ಟು ಸಿನಿಮಾಗಳು ರಿಲೀಸ್ ದಿನಾಂಕದ ಬಗ್ಗೆ ಇನ್ನೂ ಚಿಂತಿಸಿಲ್ಲ. ಅಭಿಮಾನಿಗಳಲ್ಲಿ ಲಾಕ್ ಡೌನ್ ಮುಗಿದ್ಮೇಲೆ ರಾಬರ್ಟ್ ಸಿನಿಮಾ ರಿಲೀಸ್ ಆಗಲಿದೆಯಾ ಅನ್ನೋ ಕುತೂಹಲವಿದೆ. ಈ ಬಗ್ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಮಾತನಾಡಿ, ಒಂದಷ್ಟು ಜನ ವರ್ಷದ ಕೊನೆಗೆ ಸಿನಿಮಾ ರಿಲೀಸ್ ಮಾಡ್ಬೇಕು ಅಂತೆಲ್ಲ ನಿರ್ಧರಿಸಿದ್ದಾರೆ. ನಾವು ಬರೋ ಟೈಮಿಗೆ ಖಂಡಿತಾ ಬರ್ತೀವಿ. ಎಲ್ಲಾ ಬೆಳವಣಿಗೆ ನೋಡಿಕೊಂಡು ದಿನಾಂಕ ನಿಗದಿ ಮಾಡ್ತೀವಿ. ಈಗಲೇ ಫಿಲ್ಮ ರಿಲೀಸ್ ಡೇಟ್ ಹೇಳಿ ಬಿಟ್ರೆ, ಮತ್ತೇನಾದರೂ ಸಮಸ್ಯೆಯಾಗಿ ಮುಂದೆ ಹೋದರೆ‌, ಮತ್ತೊಂದು ಡೇಟ್ ಹೇಳಬೇಕಾಗುತ್ತೆ.

ಹಾಗಾಗಿ ಕೊರೊನಾ ಸಮಸ್ಯೆ ಮುಗಿದ ನಂತರ ಡೇಟ್ ಅನೌನ್ಸ್ ಮಾಡ್ತೀವಿ. ಸದ್ಯ ದರ್ಶನ್ ಅವರು ಬೆಂಗಳೂರಿನಲ್ಲೇ ಇದ್ದಾರೆ ಅಂತಾ ತಿಳಿಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಆಯಕ್ಷನ್ ಥ್ರಿಲ್ಲರ್ ‘ರಾಬರ್ಟ್’ ಸಿನಿಮಾ ಏಪ್ರಿಲ್ 9 ರಂದು ರಿಲೀಸ್ ಆಗಬೇಕಿತ್ತು. ಆದ್ರೆ ಕೊರೊನಾ ಲಾಕ್ಡೌನ್ನಿಂದ ಚಿತ್ರದ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗಿದೆ. ಈ ಚಿತ್ರದ ರಿಲೀಸ್ ಡೇಟ್ ಬಗ್ಗೆ ಅಭಿಮಾನಿಗಳಲ್ಲಿ ಕೂತೂಹಲ ಮೂಡಿಸುತ್ತಿದೆ.

Trending

To Top