Karnataka

ರಾಜ್ಯದಲ್ಲಿ ಹಾಟ್ ಸ್ಪಾಟ್ ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಸಾರಿಗೆ ಸಂಚಾರ ಆರಂಭವಾಗುವ ಸಾಧ್ಯತೆ ?

ರಾಜ್ಯದಲ್ಲಿ ಕೊರೊನಾ ಹಾಟ್ಸ್ಪಾಟ್ ಜಿಲ್ಲೆಗಳನ್ನ ಹೊರತುಪಡಿಸಿ ಉಳಿದ ಕಡೆ ಸಾರಿಗೆ ಸಂಚಾರ‌ ಆರಂಭವಾಗುವ ಸಾಧ್ಯತೆ ಇದೆ. ಸರ್ಕಾರ ಅನುಮತಿ ಕೊಟ್ರೆ ಸಂಚಾರ ಆರಂಭಿಸಲು ಕೆಎಸ್‌ಆರ್ಟಿಸಿ ಈಗಾಗಲೇ ಮುಂಜಾಗ್ರತಾ ಕ್ರಮ ವಹಿಸುತ್ತಿದೆ.

ರಾಜ್ಯದಲ್ಲಿ ಅತ್ಯಗತ್ಯ ಸೇವೆ ಒದಗಿಸುತ್ತಿರುವ ಎಲ್ಲಾ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಬೇಕೆಂದು ಸರ್ಕಾರ ಆದೇಶಿಸಿದೆ. ಕೆಎಸ್ಆರ್ಟಿಸಿ ಕೂಡ ಅತ್ಯಗತ್ಯ ಸೇವೆ ಒದಗಿಸುತ್ತಿರುವುದರಿಂದ ಕೇಂದ್ರ ಕಚೇರಿ, ವಿಭಾಗೀಯ ಕಚೇರಿ, ಮುದ್ರಣಾಲಯ, ತರಬೇತಿ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ವರ್ಗದ ಸಿಬ್ಬಂದಿ ಹಾಗೂ ಅಧಿಕಾರಿಗಳು ಕೂಡಲೆ ಕರ್ತವ್ಯಕ್ಕೆ ಹಾಜರಾಗಬೇಕೆಂದು ಕೆಎಸ್ಆರ್ಟಿಸಿ ಸೂಚಿಸಿದೆ.

ಅವಶ್ಯಕತೆ ಕಂಡು ಬಂದಲ್ಲಿ ವಾಹನಗಳ ಸೇವೆ ಶುರು ಮಾಡಲು ಸರ್ವ ಸನ್ನದ್ಧರಾಗಿರುವಂತೆ ಕೆಎಸ್‌ಆರ್ಟಿಸಿ‌ ಹಾಗೂ ಎಲ್ಲಾ ನಿಗಮಗಳ ಅಧಿಕಾರಿಗಳಿಗೆ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಸಂದೇಶ ರವಾನಿಸಿದ್ದಾರೆ.

ನಿಗಮಗಳು ಬಸ್ ಸಂಚಾರ ಆರಂಭಿಸಲು ಸರ್ಕಾರದ ಸೂಚನೆಗೆ ಕಾದಿವೆ. ‌ಈಗಾಗಾಲೆ ರಾಜ್ಯ ಸರ್ಕಾರ ,ಎಲ್ಲಾ ಸರ್ಕಾರಿ ಇಲಾಖೆಗಳ ನೌಕರರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶ ಹೊರಡಿಸಿರೋದ್ರಿಂದ ಇವರಿಗೆಲ್ಲಾ ಸಾರಿಗೆ ವ್ಯವಸ್ಥೆ ಕಷ್ಟವಾಗಿದೆ. ಸರ್ಕಾರ ಅನುಮತಿ ಕೊಟ್ರೆ ಅವರಿಗೂ ಸೇವೆ ನೀಡಲು ನಿಗಮಗಳು ಸಿದ್ಧತೆ ನಡೆಸಿವೆ.

Trending

To Top