Film News

ರಾಜವೀರ ಮದಕರಿ ನಾಯಕ ಚಿತ್ರೀಕರಣಕ್ಕಾಗಿ ಕೇರಳಾಗೆ ಹೊರಟ ದರ್ಶನ್!

ಡಿಬಾಸ್​ ದರ್ಶನ್​ ‘ರಾಬರ್ಟ್​’ ಚಿತ್ರೀಕರಣ ಮುಗಿದ ನಂತರ ಸ್ವಲ್ಪ ಬ್ರೇಕ್​ ಪಡೆದು ಪಕ್ಷಿಗಳ ಛಾಯಾಗ್ರಹಣಕ್ಕೆಂದು ಹೋಗಿದ್ದರು. ಇದಾದ ನಂತರ ಈಗ ಅವರು ತಮ್ಮ ಹೊಸ ಸಿನಿಮಾ ‘ರಾಜವೀರ ಮದಕರಿ ನಾಯಕ’ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ.

ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ಸಿನಿಮಾ . ಈ ಚಿತ್ರದ ಚಿತ್ರೀಕರಣಕ್ಕೆ ಕಿಕ್​ ಸ್ಟಾರ್ಟ್​ ಸಿಕ್ಕಿದೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾ ವೀರ ಮದಕರಿನಾಯಕ ಶೂಟಿಂಗ್ ಕೇರಳದ ಕೊಚ್ಚಿಯಲ್ಲಿ ನಡೆಯುತ್ತಿದೆ. ಅದಕ್ಕಾಗಿ ನಿನ್ನೆ ದರ್ಶನ್​ ಕೊಚ್ಚಿಗೆ ಹಾರಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಅಭಿಮಾನಿಯೊಬ್ಬರ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ.

ನಮ್ಮ ಪ್ರೀತಿಯ ಯಜಮಾನ ಚಾಲೆಂಜಿಂಗ್ ಸ್ಟಾರ್ ಬಾಸ್ ಅವರು ಹುಟ್ಟುಹಬ್ಬದ ಮುಂಚಿತವಾಗಿ ರಾಜವೀರ ಮದಕರಿ ನಾಯಕ ಚಿತ್ರದ ಮೊದಲ ಚಿತ್ರಿಕರಣಕ್ಕೆ ಕೊಚ್ಚಿಗೆ ಪಯಣಿಸಿರುತ್ತಿರುವಾಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗೆ ಫೋಟೊ ಕೊಟ್ಟ ಅದ್ಬುತ ಕ್ಷಣ ಎಂದು ಬರೆದಿದ್ದಾರೆ

ಈ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ನು ದರ್ಶನ್ ಅವರ ಏರ್ ಟಿಕೆಟ್ನ ಫೋಟೋ ಸಹ ಅಭಿಮಾನಿಗಳು ಟ್ವಿಟರ್ನಲ್ಲಿ ಹಂಚಿಕೊಳ್ಳುತ್ತಿದ್ದಾರೆ

https://twitter.com/FansMaski/status/1226743583241203713?s=19

Trending

To Top