gossip

ರಾಕಿ ಭಾಯ್ ಅಭಿಮಾನಿಗಳಿಗೆ ಭಾರೀ ನಿರಾಸೆ …!!

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿದ್ದು, ರಾಕಿ ಭಾಯ್ ಬರ್ತ್‌ಡೇಗೆ KGF 2 ಟೀಸರ್ ರಿಲೀಸ್ ಮಾಡಲಾಗುವುದಿಲ್ಲ ಎನ್ನಲಾಗಿದೆ.

ಶೂಟಿಂಗ್ ತಡವಾಗ್ತಿರೋ ಹಿನ್ನೆಲೆ ಟೀಸರ್ ಇಲ್ಲ ಎಂದು ಟ್ವೀಟ್ ಮಾಡುವ ಮೂಲಕ ಡೈರೆಕ್ಟರ್ ಪ್ರಶಾಂತ್ ನೀಲ್ ಸ್ಪಷ್ಟಪಡಿಸಿದ್ದಾರೆ. ಆದ್ರೆ ಟೀಸರ್ ಬದಲು ಮತ್ತೊಂದು ಸ್ಟಿಲ್ ಲುಕ್ ಬಿಡೋ ಭರವಸೆ ನೀಡಿದ್ದಾರೆ. ಟೀಸರ್‌ಗಾಗಿ ನಿರೀಕ್ಷೆಯ ಕಾಲಾವಕಾಶ ಇಲ್ಲದಿರೋದ್ರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಇನ್ನು ಪ್ರಶಾಂತ್ ನೀಲ್ ಟ್ವೀಟ್‌ಗೆ ಯಶ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದು, ನಾವು KGF ನೋಡಿ ಯಶ್ ಫ್ಯಾನ್ಸ್ ಆದವರಲ್ಲ. ಮೊದಲಿನಿಂದಲೂ ಅವ್ರ ಎಲ್ಲಾ ಸಿನಿಮಾಗಳನ್ನ ನೋಡ್ತಾ ಬಂದಿದ್ದೀವಿ. ನಿಮ್ಮ ಈ ನಿರ್ಧಾರ ಸರಿ ಇಲ್ಲ, ಕೇಳಿದ ಟೀಸರ್ ಬಿಡ್ತಿಲ್ಲ ಎಂದು ಯಶ್ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Trending

To Top