Film News

ರಕ್ಷಿತ್ ಶೆಟ್ಟಿ ಜೊತೆ ಮದುವೆ ಆಗ್ತಾರಾ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ?

ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ಇದೀಗ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.ಯಾವಾಗಲೂ ಒಂದಿಲ್ಲೊಂದು ವಿಷಯಕ್ಕೆ ಸುದ್ದಿ ಇರುತ್ತಿದ್ದ ರಮ್ಯಾ ಕೆಲದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಸುಮ್ಮನಾಗುತ್ತಿದ್ದರು.ಆದರೆ ಈಗ ಅಭಿಮಾನಿಗಳಿಗೆ ಶಾಕ್ ಒಂದನ್ನು ನೀಡಿದ್ದಾರೆ.

ರಮ್ಯಾ ಅವರು ರಾಜಕೀಯ ಹಾಗೂ ಚಿತ್ರರಂಗಕ್ಕೆ ಗುಡ ಬೈ ಹೇಳಿರುವ ಬಗ್ಗೆ ಹೇಳಿಕೊಂಡಿದ್ದಾರೆ.ಇತ್ತೀಚೆಗೆ ಅಭಿ ಸಿನಿಮಾದ 18 ನೇ ವರ್ಷದ ಪ್ರಯುಕ್ತ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಸಂವಾದನೆ ನಡೆಸುವ ವೇಳೆ ಅಭಿಮಾನಿಗಳಿಗೆ ಈ ಶಾಕಿಂಗ್ ಸುದ್ದಿಯನ್ನು ನೀಡಿದ್ದಾರೆ.

ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಮಾತನಾಡಿದ ರಮ್ಯಾ ನಟನೆಯಲ್ಲಿ ನನ್ನ ಅಡಗು ಮುಳುಗಿ ಬಹಳ ವರ್ಷವಾಗಿದೆ ನನಗೆ ನಟಿಸಲು ಆಸಕ್ತಿಯೂ ಇಲ್ಲ, ರಾಜಕೀಯದಲ್ಲೂ ನನ್ನ ಟೈಂ ಮುಗೀತು ಎಂದು ಹೇಳಿಕೊಂಡಿದ್ದಾರೆ.ಸದ್ಯ ರಮ್ಯಾ ಚಿತ್ರರಂಗದಿಂದ ದೂರವಾದರು ರಾಜಕೀಯದಲ್ಲಿ ಜನರ ಮದ್ಯೆ ಇರುತ್ತಾರೆ ಎಂದು ಹೇಳಲಾಗುತ್ತಿತ್ತು, ಆದರೆ ಲೋಕಸಭಾ ಚುನಾವಣೆಯ ನಂತರ ರಮ್ಯಾ ಅವರು ಎಲ್ಲಿ ಹೋದರು ಅಲ್ಲಿ ಪ್ರಶ್ನೆಗಳು ಸಹ ಮೂಡಿತ್ತು, ಆದರೆ ಇದೀಗ ಸೋಷಿಯಲ್ ಮೆಡಿಯಾದಲ್ಲಿ ತಮ್ಮ ಸಿನಿ ಜೀವನ ಮತ್ತು ರಾಜಕೀಯಕ್ಕೆ ಗುಡ್ ಬೈ ಹೇಳಿರುವ ಬಗ್ಗೆ ತಿಳಿಸಿ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಇನ್ನು ಇದೇ ವೇಳೆ ಅಭಿಮಾನಿಗಳು ನಿಮ್ಮ ಮದುವೆ ಯಾವಾಗ ಅಂತ ಕೇಳಿದ್ದು, ಅದರಲ್ಲಿ ಒಬ್ಬ ಅಭಿಮಾನಿ ನೀವು ರಕ್ಷಿತ್ ಶೆಟ್ಟಿ ಜೊತೆಯಲ್ಲಿ ಮದುವೆಯಾಗಿ ಅಂತ ಹೇಳಿದ್ದಾರೆ.ಇದಕ್ಕೆ ಕೂಲ್ ಆಗಿ ರೇಪ್ಲ ಮಾಡಿರುವ ರಮ್ಯಾ ಇನ್ಸ್ಟಗ್ರಾಮ್ ನಲ್ಲಿ ರಕ್ಷಿತ್ ಶೆಟ್ಟಿ ಅವರನ್ನ ಟ್ಯಾಗ್ ಮಾಡಿ ನಗುವಿನ ಸಿಂಬಲ್ ಅಕಿದ್ದಾರೆ.ಇದಕ್ಕೆ ರಕ್ಷಿತ್ ಶೆಟ್ಟಿ ಅವರ ಉತರಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ.

Trending

To Top