Film News

ಯುವರತ್ನದಲ್ಲಿ ಡಾಲಿ ಧನಂಜಯ್ ಲುಕ್ ಔಟ್

ಭರವಸೆಯ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ನಿರ್ದೇಶಿಸುತ್ತಿರುವ, ಹೊಂಬಾಳೆ ಬ್ಯಾನರ್ ನ ಯುವ ರತ್ನ ಸಿನಿಮಾದಲ್ಲಿ ಧನಂಜಯ್ ಲುಕ್ ಹೊರಬಿದ್ದಿದೆ.

ಇನ್ಸ್ಟಾಗ್ರಾಂನಲ್ಲಿ ಧನಂಜಯ್ ಅವರು ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ.

ವಿಲನ್ ಲುಕ್ ನಲ್ಲಿರುವ ಧನಂಜಯ್ ಅವರು ಸೂಟ್ ಧರಿಸಿ ಕೈನಲ್ಲಿ ಗನ್ ಹಿಡಿದಿದ್ದಾರೆ. ಈ ಸಿನಿಮಾದಲ್ಲೂ ಮಾಸ್ ಲುಕ್ ಹೊಂದಿರುವ ಧನಂಜಯ್ ಮತ್ತಷ್ಟು ಎತ್ತರಕ್ಕೆ ಹೋಗಲಿದ್ದಾರೆ ಎಂಬುದು ಅಭಿಮಾನಿಗಳ ನಂಬಿಕೆ.

ಅದೇ ಪೋಸ್ಟರ್ ನಲ್ಲಿ ಸೂಟ್ ಧರಿಸಿ ಪುನೀತ್ ರಾಜ್ ಕುಮಾರ್ ಅವರು ಹಿಂಬದಿಯಲ್ಲಿ ಕುಳಿತಿದ್ದಾರೆ.

Trending

To Top