BBK8

ಯುಗಾದಿ ಹಬ್ಬದ ದಿನ ಸರ್ಪ್ರೈಸ್ ಕೊಟ್ಟ ಮೇಘನಾ ರಾಜ್ !

ಇಂದು ಪ್ರತಿ ಮನೆಯಲ್ಲೂ ಉಗಾದಿ ಹಬ್ಬದ ಸಂಭ್ರಮ ಸಡಗರ ಮೇಘನಾ ರಾಜ್ ಕೂಡ ಚಿರು ಇಲ್ಲದ ಈ ವರ್ಷದ ಉಗಾದಿ ಹಬ್ಬವನ್ನ ತಮ್ಮ ಪುಟ್ಟ ಕಂದ ಚಿಂಟು ಜೊತೆ ಆಚರಿಸುತ್ತಿದ್ದಾರೆ.ಇದೀಗ ಹಬ್ಬದ ಜೊತೆ ಚಿರು ಮನೆಯಲ್ಲಿ ಮತ್ತೊಂದು ಸಂಭ್ರಮ ಮನೆಮಾಡಿದೆ.

ಕಳೆದ ಎರಡು ವರ್ಷ ಚಿರು ಅವರ ಜೊತೆ ಉಗಾದಿ ಹಬ್ಬ ಆಚರಿಸಿದ ಮೇಘನಾ ಅವರಿಗೆ ಈ ಬಾರಿ ಚಿರು ಅವರ ಜೊತೆ ಇಲ್ಲವಲ್ಲ ಎನ್ನುವ ನೋವು ಕಾಡುತ್ತಿದೆ.ಆದರೂ ಕೂಡ ಮಗುವಿನ ಭವಿಷ್ಯಕ್ಕಾಗಿ ನಗುತ್ತಾ ಖುಷಿಯಿಂದ ಹಬ್ಬವನ್ನು ಆಚರಿಸಿದ್ದಾರೆ.

ಚಿರು ಅವರಿಗೆ ಅವರ ಅಜ್ಜಿ ಎಂದರೆ ತುಂಬಾ ಇಷ್ಟ, ಅಜ್ಜಿಗೂ ಕೂಡ ಚಿರು ಅಂದರೆ ಪಂಚಪ್ರಾಣ.ಪ್ರತಿ ವರ್ಷ ತನ್ನ ಅಜ್ಜಿಯ ಹುಟ್ಟುಹಬ್ಬವನ್ನು ಚಿರು ತುಂಬಾ ಅದ್ದೂರಿಯಾಗಿ ಆಚರಿಸುತ್ತಿದ್ದರು.ಆದರೆ ಈ ಬಾರಿ ಚಿರು ಇಲ್ಲ ಎನ್ನುವುದನ್ನು ನೆನೆದು ಅಜ್ಜಿ ಕಣ್ಣೀರು ಹಾಕಿದ್ದಾರೆ.ಚಿರು ನನ್ನ ಹುಟ್ಟುಹಬ್ಬಕ್ಕೆ ಕೇಕ್ ತಂದು ಎಲ್ಲರನ್ನು ನಾಗಿಸುತ್ತಾ ಖುಷಿಯಿಂದ ನನ್ನ ಹುಟ್ಟುಹಬ್ಬವನ್ನ ಆಚರಿಸುತ್ತಿದ್ದ, ನಾನು ಅವನನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀನಿ ಎಂದು ಕಣ್ಣೀರು ಹಾಕಿದ್ದಾರೆ.ಇದೇ ವೇಳೆ ಮೇಘನಾ ರಾಜ್ ಅವರು ಚಿರು ಹಾಗೂ ಅಜ್ಜಿ ಜೊತೆಗಿನ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಅಜ್ಜಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

Trending

To Top