Karnataka

ಯುಗಾದಿ ಹಬ್ಬಕ್ಕೆ ಯಾರು ಊರಿಗೆ ಹೋಗಬೇಡಿ, ವೈದ್ಯರ ಸಲಹೆ ಪಾಲಿಸಿ : ಡಾಲಿ ಧನಂಜಯ್!

ಬುಧವಾರ ಯುಗಾದಿ ಹಬ್ಬ. ಯುಗಾದಿ ಅಂದ್ರೆ ಹೊಸವರ್ಷಾಚರಣೆ. ಹೀಗಾಗಿ ಎಲ್ಲರೂ ತಮ್ಮ ತಮ್ಮ ಹುಟ್ಟೂರಿಗೆ ಹೋಗ್ತಿದ್ದಾರೆ. ಆದ್ರೆ ಕೊರೊನಾ ಮಹಾಮಾರಿ ಹಾವಳಿ ಹೆಚ್ಚಾಗಿರೋ ಈ ಟೈಮ್‌ನಲ್ಲಿ ಸೆಲ್ಫ್‌ ಕ್ವಾರಂಟೈನ್‌ ಆಗಿ ಇರಬೇಕು. ನಾವು ಇದ್ದಲ್ಲಿಯೇ ಇದ್ದರೆ ಹೆಚ್ಚು ಒಳಿತು. ಆದ್ರೆ, ಹಲವರು ತಮ್ಮ ಊರುಗಳಿಗೆ ಅದಾಗಲೇ ಪ್ರಯಾಣ ಬೆಳೆಸ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾರೂ ಊರಿಗೆ ಹೋಗದಿರಲಿ ಎಂದು ನಟ ಡಾಲಿ ಧನಂಜಯ್‌ ಕರೆ ಕೊಟ್ಟಿದ್ದಾರೆ.

https://www.instagram.com/tv/B-FBBojFpm0/?igshid=dim2vph5dk6u

‘ಕೊರೊನಾ ರೋಗ ಲಕ್ಷಣಗಳು ನಿಧಾನವಾಗಿ ಅರಿವಿಗೆ ಬರುತ್ತವೆ. ಕೊರೊನಾ ಸೋಂಕಿದ್ದರೂ ನಮಗೆ ಗೊತ್ತಾಗುವುದಿಲ್ಲ. ಹೀಗಾಗಿ ಊರಿಗೆ ಹೋಗಿ ಸೋಂಕು ಹರಡದಿರುವುದೇ ಒಳಿತು. ನಾನು ಕೂಡ ಯುಗಾದಿ ಆಚರಣೆಗೆ ಊರಿಗೆ ಹೋಗುತ್ತಿಲ್ಲ. ನಮ್ಮಿಂದ ನಮ್ಮವರಿಗೆ ತೊಂದರೆಯಾಗೋದು ಬೇಡ. ದಯವಿಟ್ಟು ಸರ್ಕಾರ ಹಾಗೂ ತಜ್ಞ ವೈದ್ಯರ ಸಲಹೆಗಳನ್ನ ಪಾಲಿಸಿ.

ಕೊರೊನಾ ನಿರ್ಮೂಲನೆ ಆಗೋವರೆಗೂ ಊರಿಗೆ ಹೋಗಬೇಡಿ’ ಎಂದು ನಟ ಡಾಲಿ ಧನಂಜಯ್‌ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

Trending

To Top