gossip

ಯಶ್ ರನ್ನು ಶೋ ಆಫ್ ಎಂದಿದ್ದ ರಶ್ಮಿಕಾ ಮಂದಣ್ಣ , ಬಳಿಕ ಬಹಿರಂಗವಾಗಿ ಕ್ಷಮೆ ಕೇಳಿದ್ದರು!

ರಾಕಿಂಗ್ ಸ್ಟಾರ್ ಯಶ್ ಮತ್ತು ಕೊಡಗಿನ ಹುಡುಗಿ ರಶ್ಮಿಕಾ ಮಂದಣ್ಣ ಇಬ್ಬರೂ ಸಹ ಇಂದು ಭಾರತದ ಎಲ್ಲೆಡೆ ಪರಿಚಿತ ನಟ ನಟಿ.. ಕೆ.ಜಿ.ಎಫ್ ಚಿತ್ರದ ಮೂಲಕ ಯಶ್ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಟಾಲಿವುಡ್ , ಕಾಲಿವುಡ್ , ಮಾಲಿವುಡ್ ಮತ್ತು ಬಾಲಿವುಡ್ ನಲ್ಲೂ ಸಹ ಬಹಳ ಪ್ರಸಿದ್ಧವಾದರು. ಇನ್ನು 2016ರಲ್ಲಿ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ರಶ್ಮಿಕಾ, ನಂತರ ಚಲೋ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟು , ಒಂದಾದ ಮೇಲೊಂದು ಹಿಟ್ ಸಿನಿಮಾ ಕೊಡುವ ಮೂಲಕ ಖ್ಯಾತಿಯಾದರು..

ಚಿತ್ರರಂಗಕ್ಕೆ ಕಾಲಿಟ್ಟ ಹೊಸದರಲ್ಲಿ ಯಶ್ ಬಗ್ಗೆ ರಶ್ಮಿಕಾ ಮಾಡಿದ ಒಂದು ಸ್ಟೇಟ್ಮೆಂಟ್ ಬಹಳ ಚರ್ಚೆಗೆ ಒಳಗಾಗಿತ್ತು ಜೊತೆಗೆ ಎಲ್ಲಾ ರಾಕಿಂಗ್ ಸ್ಟಾರ್ ಅಭಿಮಾನಿಗಳು ರಶ್ಮಿಕಾ ಮೇಲೆ ಕೋಪಗೊಳ್ಳುವ ಹಾಗೆ ಮಾಡಿತ್ತು.. ಆ ಘಟನೆ ನೆನಪಿದೆಯಾ..

ಕಿರಿಕ್ ಪಾರ್ಟಿ ಸಕ್ಸಸ್ ಸಮಯದಲ್ಲಿ ಬಹಳಷ್ಟು ಸಂದರ್ಶನಗಳಲ್ಲಿ ರಶ್ಮಿಕಾ ಪಾಲ್ಗೊಂಡಿದ್ದರು. ಅದೇ ರೀತಿಯ ಒಂದು ಸಂದರ್ಶನದಲ್ಲಿ ಉತ್ತರ ಕೊಡುವಾಗ , ಕನ್ನಡ ಚಿತ್ರರಂಗದಲ್ಲಿ ಶೋ ಆಫ್ ಮಾಡುವುದು ಯಾರು ಎಂಬ ಪ್ರಶ್ನೆಗೆ ಕೊಂಚ ಹೆದರುತ್ತಲೇ ಯಶ್ ಎಂದು ಉತ್ತರಿಸಿದ್ದರು ರಶ್ಮಿಕಾ.. ಈ ವೀಡಿಯೋ ಆ ಸಮಯದಲ್ಲಿ ಏನು ತೊಂದರೆ ನೀಡಲಿಲ್ಲವಾದರು, 7 ತಿಂಗಳ ಬಳಿಕ ಈ ವೀಡಿಯೋ ವೈರಲ್ ಆಗಿ, ಯಶ್ ಅಭಿಮಾನಿಗಳು ರಶ್ಮಿಕಾ ಮೇಲೆ ಆಕ್ರೋಶಗೊಂಡಿದ್ದರು. ಇದಕ್ಕಾಗಿ ರಶ್ಮಿಕಾ ಫೇಸ್ ಬುಕ್ ನಲ್ಲಿ ಬಹಿರಂಗವಾಗಿ ಕ್ಷಮೆ ಕೇಳಿ, ಯಶ್ ಮೇಲೆ ನನಗೇನು ದ್ವೇಷವಿಲ್ಲ ಎಂದು ಹೇಳಿದರು.

Trending

To Top