Kannada Updates
Film News

ಯಶ್ ಮತ್ತು ಸಂಜಯ್ ದತ್ ನಡುವೆ ನಡೆಯಲಿದೆ ಬಿಗ್ ಫೈಟ್!

ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಕನ್ನಡದ ಕಲಾವಿದರು ಮಾತ್ರವಲ್ಲದೆ, ಪರಭಾಷೆಯ ಸ್ಟಾರ್‌ ನಟ-ನಟಿಯರು ಬಣ್ಣ ಹಚ್ಚುತ್ತಿದ್ದಾರೆ. ಆ ಪೈಕಿ ರವೀನಾ ಟಂಡನ್‌, ಸಂಜಯ್‌ ದತ್‌ ಪ್ರಮುಖರು. ಯಶ್‌-ದತ್‌ ನಡುವೆ ದೊಡ್ಡ ಫೈಟ್‌ ನಡೆಯುವ ಸಾಧ್ಯತೆ ಇದೆಯಂತೆ

ಕೆಜಿಎಫ್‌ ಚಾಪ್ಟರ್‌ 2‘ ಚಿತ್ರದಲ್ಲಿ ಸಂಜಯ್‌ ದತ್‌ ನಟಿಸುತ್ತಾರೆ ಎಂಬ ಸುದ್ದಿ ಹೊರಬಿದ್ದಾಗಲೇ ಸಿನಿಪ್ರಿಯರ ಕುತೂಹಲ ಕೆರಳಿತ್ತು. ಚಿತ್ರದ ಮೇಲಿದ್ದ ನಿರೀಕ್ಷೆ ದುಪ್ಪಟ್ಟಾಯಿತು. ಅಧೀರ ಎಂಬ ಪವರ್‌ಫುಲ್‌ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಲುಕ್‌ ಹೇಗಿರಲಿದೆ ಎಂಬುದನ್ನು ಹಲವು ದಿನಗಳ ಹಿಂದೆಯೇ ಚಿತ್ರತಂಡ ಬಹಿರಂಗ ಪಡಿಸಿದೆ. ಮುಖ್ಯ ವಿಲನ್‌ ಆಗಿ ನಟಿಸುತ್ತಿರುವ ದತ್‌ ಅವರು ಯಶ್‌ ಜೊತೆ ಕ್ಲೈಮ್ಯಾಕ್ಸ್‌ನಲ್ಲಿ ಕೈ ಮಿಲಾಯಿಸಲಿದ್ದಾರಂತೆ.
ಹೀರೋ-ವಿಲನ್‌ ಪಾತ್ರಗಳು ಎಂದಮೇಲೆ ಮುಖಾಮುಖಿ ಸಹಜ. ಯಶ್‌ ಮತ್ತು ಸಂಜಯ್‌ ದತ್‌ ವಿಚಾರದಲ್ಲಿ ಅದು ಕೊಂಚ ಭಿನ್ನ ಆಗಿರಲಿದೆ. ಈ ಸಿನಿಮಾದಲ್ಲಿ ಬರುವ ಒಂದು ಕ್ಲೈಮ್ಯಾಕ್ಸ್‌ ಫೈಟ್‌ನಲ್ಲಿ ಇಬ್ಬರೂ ರೋಚಕವಾಗಿ ಕಾದಾಡಲಿದ್ದಾರಂತೆ. ವಿಶೇಷ ಏನೆಂದರೆ, ಈ ಸಾಹಸ ಸನ್ನಿವೇಶದಲ್ಲಿ ಯಶ್‌ ಮತ್ತು ಸಂಜಯ್‌ ದತ್‌ ಶರ್ಟ್‌ಲೆಸ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರ ಈ ಮಾಹಿತಿ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಈ ವಿಶೇಷ ಆ್ಯಕ್ಷನ್ ದೃಶ್ಯಕ್ಕಾಗಿ ಇಬ್ಬರೂ ದೇಹ ಹುರಿಗೊಳಿಸಿಕೊಳ್ಳುತ್ತಿದ್ದು, ಸಖತ್‌ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

Related posts

ಮನೆಯಲ್ಲಿ ಕುಳಿತು ಉತ್ತಮ ಚಿತ್ರ ನೋಡಬಯಸುವವರು ಯೂಟ್ಯೂಬ್ ನಲ್ಲಿ ‘ರಾಮ ರಾಮ ರೇ’ ಚಿತ್ರ ವೀಕ್ಷಿಸಬಹುದು..

Pooja Siddaraj

ಆಸ್ಕರ್ ಪ್ರಶಸ್ತಿ ವಿಜೇತರಾದ ಹಾಲಿವುಡ್ ನ ಖ್ಯಾತ ನಟ ಟಾಮ್ ಹ್ಯಾಂಕ್ಸ್ ಮತ್ತು ಅವರ ಪತ್ನಿ ಕೊರೊನಾ ವೈರಸ್ ಇಂದ ಗುಣಮುಖರಾಗಿದ್ದಾರೆ!

Pooja Siddaraj

ನಾಳೆ ನಿಖಿಲ್ ರೇವತಿ ನಿಶ್ಚಿತಾರ್ಥ, ಏಪ್ರಿಲ್ 17ಕ್ಕೆ ಮದುವೆ

Pooja Siddaraj

ಸೆಂಚುರಿ ಸ್ಟಾರ್ ಶಿವಣ್ಣ ಹಾಗೂ ಪವರ್ ಸ್ಟಾರ್ ಅಪ್ಪುವಿನ ಲಾಂಗ್ ಡ್ರೈವ್ ವೀಡಿಯೊ ವೈರಲ್ ಆಗಿದೆ!

Pooja Siddaraj

ಕೊರೊನಾ ಹಾಡಿಗಾಗಿ ಒಂದಾದ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು

Pooja Siddaraj

ಮದಗಜ ಚಿತ್ರದ ನಾಯಕಿ ಆಶಿಕಾ ರಂಗನಾಥ್

Pooja Siddaraj

‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರಕ್ಕೆ ಶುಭಹಾರೈಸಿದ ನಟ ವಿಕ್ಕಿ ವರುಣ್!

Pooja Siddaraj

ಓಂ ಸಿನಿಮಾಗೆ ಹೆಸರಿಟ್ಟವರು ಡಾ.ರಾಜ್ ಕುಮಾರ್

Pooja Siddaraj

‘ವರ್ಷದ ಕನ್ನಡಿಗ’ ಪ್ರಶಸ್ತಿ ಸ್ವೀಕರಿಸಿದ ಗೋಲ್ಡನ್ ಸ್ಟಾರ್ ಗಣೇಶ್!

Pooja Siddaraj

ಕೊರೊನಾ ಚಿಕಿತ್ಸೆಗಾಗಿ ತಮ್ಮ ಮನೆಯಲ್ಲಿ ಆಸ್ಪತ್ರೆಯನ್ನಾಗಿ ಬಳಸಿಕೊಳ್ಳಿ ಎಂದಿದ್ದಾರೆ ಉಲಗನಾಯಗನ್ ಕಮಲ್ ಹಾಸನ್

Pooja Siddaraj

ಸವೂ ಸಹ ಮೇಡ್ ಇನ್ ಚೈನಾ ಎಂದು ಗೊತ್ತಿರಲಿಲ್ಲ : ಹೀಗೆಂದು ಟ್ವೀಟ್ ಮಾಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ!

Pooja Siddaraj

ಹುಟ್ಟುಹಬ್ಬದಂದು ದರ್ಶನ್ ನೋಡಲು ಬಂದ ವಿಶೇಷ ಅಭಿಮಾನಿ

Pooja Siddaraj