Kannada Cinema News

ಯಶ್ ಬರ್ತಡೆಗೆ ದರ್ಶನ್ ಕಳಿಸಿದ ಕಾಸ್ಟ್ಲಿ ಗಿಫ್ಟ್ ನೋಡಿ ಶಾಕ್ ಆದ ಯಶ್ ರಾಧಿಕಾ! ಅಷ್ಟಕ್ಕೂ ದರ್ಶನ್ ಕೊಟ್ಟ ಗಿಫ್ಟ್ ಏನು ಗೊತ್ತಾ?

ರಾಕಿಂಗ್ ಸ್ಟಾರ್ ಯಶ್ ಅವರ ಸಿನಿಮಾಗಳು ಮಾತ್ರವಲ್ಲದೆ ಅವರ ಹುಟ್ಟುಹಬ್ಬ ಕೂಡ ದಾಖಲೆ ಬರೆದಿವೆ, ಬರೋಬ್ಬರಿ ಐದು ಸಾವಿರ ಕೆಜಿ ತೂಕದ ಕೇಕ್ ಕತ್ತರಿಸುವ ಮೂಲಕ ರಾಕಿಂಗ್ ಸ್ಟಾರ್ ಯಶ್ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ರಾಕಿಂಗ್ ಹಬ್ಬ ಎಂಬ ಹೆಸರಿನಲ್ಲಿ ಇಡೀ ಕಾರ್ಯಕ್ರಮ ನಡೆದಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ದೊಡ್ಡ ದಾಖಲೇನೆ ಸರಿ. ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು. ನಾಯಂಡನ್ ಹಳ್ಳಿ ನಂದಿ ಗ್ರೌಂಡ್ನಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆದಿದ್ದು, ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಿಂದ ಕೂಡ ಅಭಿಮಾನಿಗಳು ಬಂದಿದ್ದರು. ಯಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದ್ದರೆ, ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಯಶ್ ಹುಟ್ಟು ಹಬ್ಬಕ್ಕೆ ಉಡುಗೊರೆ ಕಳಿಸಿಕೊಟ್ಟಿದ್ದು, ಉಡುಗೊರೆಯನ್ನು ನೋಡಿ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಫುಲ್ ಶಾಕ್ ಆಗಿದ್ದಾರೆ, ಅಷ್ಟಕ್ಕೂ ದರ್ಶನ್ ಅವರು ಕೊಟ್ಟ ಗಿಫ್ಟ್ ಏನು ಎಂದು ನೋಡೋಣ ಬನ್ನಿ….
ಇಡೀ ಕನ್ನಡ ಚಿತ್ರರಂಗ ಯಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರೆ, ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಶುಭಾಶಯದ ಜೊತೆಗೆ ಒಂದು ದೊಡ್ಡ ಗಿಫ್ಟ್ ಕೊಟ್ಟಿದ್ದಾರೆ. ಹೌದು ಇತ್ತೀಚೆಗೆ ದರ್ಶನ್ ಮತ್ತು ಯಶ್ ಆತ್ಮೀಯ ಗೆಳೆಯರು. ಜೋಡೆತ್ತು ಅಂತ ಸಖತ್ ಫೇಮಸ್ ಆಗಿದ್ದಾರೆ. ಮೊನ್ನೆ ಮೊನ್ನೆ ನಡೆದ ಯಶ್ ಮಗಳ ಬರ್ತಡೆಗೆ ಕೂಡ ಯಾವುದೇ ಕಾರ್ಯಕ್ರಮಕ್ಕೂ ಹೋಗದ ದರ್ಶನ್ ಅವರು ಯಶ್ ಮಗಳ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಹೋಗಿದ್ದು ವಿಶೇಷವಾಗಿತ್ತು ಈ ಘಟನೆಯಿಂದಲೇ ದರ್ಶನ್ ಮತ್ತು ಯಶ್ ಎಷ್ಟು ಆತ್ಮೀಯ ಗೆಳೆಯರು ಅಂತ ಕನ್ನಡ ಚಿತ್ರರಂಗಕ್ಕೆ ಗೊತ್ತಾಗಿದೆ. ಇದೀಗ ದರ್ಶನ್ ಮತ್ತೆ ಯಶ್ ಬರ್ತಡೆಗೆ ಗಿಫ್ಟ್ ಕೊಡುವ ಮೂಲಕ ತಮ್ಮ ಗೆಳೆತನವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಹೌದು ಈಗಾಗಲೇ ಯಶ್ ಮನೆಗೆ ಬರ್ತಡೆ ಗಿಫ್ಟ್ ಅನ್ನು ಕಳುಹಿಸಿ ದರ್ಶನ್ ಅವರು ಅತಿ ಹೆಚ್ಚು ಬೆಲೆ ಬಾಳುವ ಡೈಮಂಡ ರಿಂಗ್ ಅನ್ನು ಯಶ್ ಹುಟ್ಟುಹಬ್ಬಕ್ಕೆ ದರ್ಶನ್ ಗಿಫ್ಟ್ ಮಾಡಿದ್ದಾರೆ. ದರ್ಶನ್ ಅವರು ಕಳುಹಿಸಿದ ಗಿಫ್ಟ್ ನೋಡಿ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗಳು ಸಿಕ್ಕಾಪಟ್ಟೆ ಖುಷಿಯಾಗುವುದಲ್ಲದೆ, ದರ್ಶನ್ ಅವರು ಗೆಳೆತನಕ್ಕೆ ಬೆಲೆ ಕೊಟ್ಟಿದ್ದನ್ನು ನೋಡಿ ಯಶ್ ಅವರು ಕಣ್ಣೀರು ಹಾಕಿದ್ದಾರೆ. ಈ ಸುದ್ದಿ ಇದೀಗ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಎಲ್ಲರೂ ಕೂಡ ದರ್ಶನ್ ಕೊಟ್ಟ ಗಿಫ್ಟ್ ಬಗ್ಗೆ ಮಾತನಾಡುತ್ತಿದ್ದಾರೆ. ಈ ಬಗ್ಗೆ ನೀವೇನಂತೀರಿ? ಯಶ್ ಮತ್ತು ದರ್ಶನ್ ಅವರ ಗೆಳೆತನ ಇದೇ ರೀತಿ ಮುಂದುವರಿಯಲಿ ಇದು ಕನ್ನಡ ಚಿತ್ರರಂಗಕ್ಕೆ ಬಹಳ ಒಳ್ಳೆಯದು ಅಲ್ಲವೇ?

Trending

To Top