Karnataka

ಮೈಸೂರಿನ ಮೊದಲ ಕರೊನಾ ಸೋಂಕಿತ ವ್ಯಕ್ತಿ ಗುಣಮುಖರಾದದ್ದು ಹೇಗೆ ಎಂದು ತಿಳಿಸಿದ್ದಾರೆ ಡಾ.ವೆಂಕಟೇಶ್

ದುಬೈನಿಂದ ವಾಪಸ್ಸಾಗಿದ್ದ ಜಿಲ್ಲೆಯಲ್ಲಿ ಪಾಸಿಟಿವ್ ಬಂದ ಮೊದಲ ವ್ಯಕ್ತಿ ಚೇತರಿಸಿಕೊಂಡು ನಿನ್ನೆ ಮನೆಗೆ ವಾಪಸ್ಸಾಗಿದ್ದಾರೆ. ಸೋಂಕಿತ ವ್ಯಕ್ತಿಯ ಕುರಿತು ಮೈಸೂರು ಡಿಹೆಚ್‌ಓ‌ ಡಾ.ವೆಂಕಟೇಶ್ ಕೆಲವೊಂದು ಮಾಹಿತಿಯನ್ನ ಹಂಚಿಕೊಂಡಿದ್ದಾರೆ.

ಕೊರೊನಾ ಸೋಂಕಿತ ವ್ಯಕ್ತಿ ದುಬೈಗೆ ಹೋಗಿ ವಾಪಾಸ್ಸಾಗಿದ್ದರು. ಮಾರ್ಚ್ 20 ರಂದು ಕೆಆರ್ ಆಸ್ಪತ್ರೆಗೆ ದಾಖಲಾಗಿದ್ದ ಅವರು, ನಿನ್ನೆ ಡಿಸ್ಚಾರ್ಜ್ ಆಗಿದ್ದಾರೆ. ಟ್ರೀಟ್‌ಮೆಂಟ್ ಸರಿಯಾಗಿ ಪಡೆದಿರೋದ್ರಿಂದ ಅವರು ಬೇಗ ಹುಷಾರಾಗಿದ್ದಾರೆ. ಇನ್ನು ಅವರಲ್ಲಿ ಜ್ವರ ಕೆಮ್ಮು ಇತ್ತು, ಪಾಸಿಟಿವ್ ಬಂದಮೇಲೆ ಟ್ರೀಟ್‌ಮೆಂಟ್ ಶುರುಮಾಡಿದ್ದೆವು. ಆಯಂಟಿಬಯೋಟಿಕ್ ಮತ್ತು ಪ್ಯಾರಸಿಟಮ್ ಅಷ್ಟನ್ನೇ ನೀಡಿ ಟ್ರೀಟ್‌ಮೆಂಟ್ ಕೊಡ್ತಿದ್ವಿ. ಆತನಿಗೆ ಉಸಿರಾಟದ ತೊಂದರೆ ಇರಲಿಲ್ಲ ಹೀಗಾಗಿ ಬೇಗ ಗುಣಮುಖನಾಗಿದ್ದಾನೆ.

ಇವರ ಟ್ರಾವೆಲ್ ಹಿಸ್ಟರಿ ನೋಡಿ ಜ್ವರ ಕೆಮ್ಮು, ನೆಗಡಿ ಇದ್ದವರಿಗೆ ಶಂಕಿತರೆಂದು ಗುರುತಿಸಿ ಪರೀಕ್ಷೆ ಮಾಡ್ತಿದ್ದೀವಿ. ಪಾಸಿಟಿವ್ ಬಂದರೆ ಐಸೋಲೇಷನ್‌ನಲ್ಲಿಟ್ಟು ಚಿಕಿತ್ಸೆ ಕೊಡ್ತೀವಿ. ಮೈಸೂರಲ್ಲೇ ಕೊರೊನ ಪರೀಕ್ಷಾ ಲ್ಯಾಬ್ ಇರೋದ್ರಿಂದ, ಮೈಕ್ರೋ ಬಯಲಾಜಿಸ್ಟ್ ಪಿಸಿಆರ್‌ ಟೆಸ್ಟ್ ಮಾಡ್ತಾರೆ. ಹಂತಹಂತವಾಗಿ ಎಲ್ಲರೂ ಗುಣಮುಖರಾಗ್ತಾರೆ.

ಇನ್ನು ಜ್ಯುಬಿಲೆಂಟ್ ಕಾರ್ಖಾನೆಯ 19 ಮಂದಿ ಕೊರೊನ ಪೀಡಿತರು ಇದ್ದಾರೆ. ಅವರ ಕುಟುಂಬವನ್ನ ಕ್ವಾರಂಟೈನ್‌ನಲ್ಲಿಟ್ಟಿದ್ದೀವಿ. ಕ್ವಾರಂಟೈನ್‌ ಟೈಮಲ್ಲಿ ಮನೆಯಿಂದ ಹೊರ ಬರದೆ ಶುಚಿತ್ವ ಕಾಪಾಡಿಕೊಳ್ಳುವಂತೆ ಹೇಳಿದ್ದೇವೆ. ಆತಂಕಬೇಡ, ಇದು ಟ್ರೀಟೆಬಲ್ ಹಂತವಾಗಿದೆ. ಎಲ್ಲರೂ ಗುಣಮುಖರಾಗ್ತಾರೆ. ಜಿಲ್ಲೆಯ ಎಲ್ಲಾ ವೈದ್ಯಕೀಯ ಸಿಬ್ಬಂದಿಗೂ ರೊಟೇಷನ್ ಆಧಾರದ ಮೇಲೆ ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದೇವೆ. ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ.

Trending

To Top