Food

ಮೃದುವಾದ ವೆನಿಲ್ಲಾ ಕೇಕ್ ತಯಾರಿಸುವ ವಿಧಾನ

ಕೇಕ್ ಅಂದರೆ ಯಾರಿಗೆ ಇಷ್ಟವಿಲ್ಲ? ಎಲ್ಲರೂ ಕೇಕ್ ಅನ್ನು ಇಷ್ಟಪಡುತ್ತಾರೆ. ಯಾವುದೇ ಒಳ್ಳೆಯ ಸಂದರ್ಭವಾದರೂ, ಅದನ್ನು ಆಚರಿಸಲು ನಮಗೆ ಕೇಕ್ ಬೇಕು … ಜನ್ಮದಿನ, ನೆನಪಿನ ದಿನ, ಮದುವೆ ವಾರ್ಷಿಕೋತ್ಸವ, ಮದುವೆ ಸಂಭ್ರಮ, ಪಾರ್ಟಿಗಳು ಯಾವುದೇ ಸಂಭ್ರಮವಾಗಲಿ ಅದನ್ನು ಆಚರಿಸಲು ರುಚಿಯಾದ ಕೇಕ್ ಕಡ್ಡಾಯವಾಗಿ ಇರಲೇಬೇಕು. ಹಾಗಾಗಿ, ಇಂತಹ ಸ್ಪೆಷಲ್ ಆದ ಕೇಕ್ ಅನ್ನು, ಮನೆಯಲ್ಲೇ ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ.. ಇಲ್ಲಿದೆ ಮೃದುವಾದ ವೆನಿಲ್ಲಾ ಕೇಕ್ ತಯಾರಿಸುವ ವಿಧಾನ..

ಬೇಕಾಗುವ ಪದಾರ್ಥಗಳು : –

1) ಒಂದು ಅರ್ಧ ಟೀ ಕಪ್ ಮೈದಾ ಹಿಟ್ಟು
2) 1 ಟೀಸ್ಪೂನ್ ವೆನಿಲ್ಲಾ ಎಸೆನ್ಸ್
3) 1 ಟೀ ಕಪ್ ಸಕ್ಕರೆ ಪುಡಿ
4) ಅರ್ಧ ಕಪ್ ಹಾಲು
5) ಬೇಕಿಂಗ್ ಪೌಡರ್
6) 2 ಮೊಟ್ಟೆಗಳು
7) ಹಾಲು

ತಯಾರಿಸುವ ವಿಧಾನ: – ಮೊಟ್ಟೆಗಳು ಹಗುರವಾಗುವವರೆಗೆ ಮತ್ತು ಮೂಲಕ್ಕಿಂತ ಉತ್ತಮವಾಗಿ ಕಾಣುವವರೆಗೆ ಚೆನ್ನಾಗಿ ಬೀಟ್ ಮಾಡಿ.

ಸಕ್ಕರೆ ಮತ್ತು ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣಕ್ಕೆ ಬೀಟ್ ಮಾಡಿದ ಮೊಟ್ಟೆಯನ್ನು ಸೇರಿಸಿ ಈ ಮೂರನ್ನೂ ಚೆನ್ನಾಗಿ ಮಿಶ್ರಣ ಮಾಡಿ.

ಮೈದಾ ಮಿಕ್ಸ್ ತಯಾರಿಸಲು ಮೈದಾ ಹಿಟ್ಟು ಮತ್ತು ಬೇಕಿಂಗ್ ಪೌಡರ್ ಈ ಎರಡನ್ನು ಚೆನ್ನಾಗಿ ಮಿಶ್ರಣ ಮಾಡಿ.

ನಂತರ ಸಕ್ಕರೆ, ಎಣ್ಣೆ ಮತ್ತು ಮೊಟ್ಟೆಯನ್ನು ಬೆರೆಸಿ ತಯಾರಿಸಿದ ಬ್ಯಾಟರ್‌ಗೆ ಮೈದಾ ಮಿಶ್ರಣವನ್ನು ಕ್ರಮೇಣ ಸೇರಿಸಿ.

ಇವೆಲ್ಲವನ್ನು ಮಿಕ್ಸ್ ಮಾಡುವಾಗ, ಮಿಶ್ರಣವು ದಟ್ಟವಾಗಿರುತ್ತದೆ ಆದ್ದರಿಂದ ಹಾಲನ್ನು ಸಣ್ಣ ಪ್ರಮಾಣದಲ್ಲಿ ಸೇರಿಸಿ ಅದನ್ನು ಸುಗಮಗೊಳಿಸಿ.

ವೆನಿಲ್ಲಾ ಎಸೆನ್ಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಗ್ರೀಸ್ ಮಾಡಿರುವ ಕೇಕ್ ಟ್ರೇ ಗೆ ಬ್ಯಾಟರ್ ಹಾಕಿ ಮತ್ತು 170° ಟೆಂಪರೇಚರ್ ನಲ್ಲಿ ಸುಮಾರು 30 ರಿಂದ 40 ನಿಮಿಷ ಬೇಕ್ ಮಾಡಿ..

Soft and Spongy Vanilla Cake

ರೆಸಿಪಿ : ಡಾ ನೇತ್ರ ಎನ್.ಎಸ್

Trending

To Top