BBK8

ಮೂರು ದಿನ ಬಿಗ್ ಬಾಸ್ ಮನೆಯೊಳಗಿದ್ದ ವೈಜಯಂತಿ ಅವರಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ ?

ಬಿಗ್ ಬಾಸ್ ಮನೆಗೆ ಹೋಗುವ ಅವಕಾಶ ಸಿಕ್ಕಾಗ ಕೆಲವರು ಅದನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡರೆ ಮತ್ತೆ ಕೆಲವರು ಸರಿಯಾಗಿ ಉಪಯೋಗಿಸಿಕೊಳ್ಳದೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಮರೆಯಾಗಿ ಹೋದ ಬಹಳಷ್ಟು ಉದಾಹರಣೆಗಳು ಸಹ ಇದೆ.

ಬಿಗ್ ಬಾಸ್ ಸೀಸನ್ 8 ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದ ವೈಜಯಂತಿ ಅಡಿಗ ಮೂರನೇ ದಿನಕ್ಕೆ ಬಿಗ್ ಬಾಸ್ ಮನೆಯ ಸಹವಾಸ ಸಾಕು ಎಂದು ಹೊರಬಂದಿದ್ದಾರೆ.”ನಾನು ಎಲ್ಲಿ ಎಮೋಷನಲಿ ಸ್ಟ್ರಾನ್ಗ್ ಇರಲು ಸಾಧ್ಯವಿಲ್ಲ, ಅಪ್ಪ ಅಮ್ಮ ಹಾಗೂ ಫಿಯಾನ್ಸಿ ಯನ್ನ ಮಿಸ್ ಮಾಡಿಕೊಳ್ಳುತ್ತಿದ್ದೇನೆ, ನಾನು ಅಂದುಕೊಂಡಿದ್ದೆ ಒಂದು ಎಲ್ಲಿ ಆಗುತ್ತಿರುವುದೇ ಇನ್ನೊಂದು, ನಾನು ಮನೆಗೆ ಹೋಗಬೇಕು ಎಂದು ವೈಜಯಂತಿ ಆಗಾಗ ಕಣ್ಣೀರಿಡುತ್ತಿದರು.

ವೈಜಯಂತಿ ಅವರು ರಾಜ್ ವಿ ಶೆಟ್ಟಿ ಅವರ ಅಮ್ಮಚಿ ಎಂಬ ನೆನಪು ಎಂಬ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿ ಕೊಂಚ ಹೆಸರು ಮಾಡಲು ಬಿಗ್ ಬಾಸ್ ಮನೆಗೆ ತೆರಳುವ ನಿರ್ಧಾರ ಮಾಡಿದರು.ಅವರಿಗೂ ಸಹ ಇತರ ಸದಸ್ಯರಂತೆ ವಾರಕ್ಕೆ ಒಳ್ಳೆಯ ಸಂಭಾವನೆ ನಿಗದಿಯಾಗಿತ್ತು, ಆದರೆ ವೈಜಯಂತಿ ಅವರು ಬಿಗ್ ಬಾಸ್ ಮನೆಯಲ್ಲಿ ವಾರವೂ ಸಹ ಪೂರೈಸದ ಕಾರಣ ಇವರಿಗೆ ಯಾವುದೇ ಸಂಭಾವನೆ ನೀಡಲಾಗಿಲ್ಲ, ಬಿಗ್ ಬಾಸ್ ನಿಯಮಗಳ ಪ್ರಕಾರ ಎಲಿಮಿನೇಟ್ ಆಗಿ ಆಥವಾ ಅನಾರೋಗ್ಯದ ಕಾರಣದಿಂದಾಗಿ ಮಾತ್ರ ಮನೆಯಿಂದ ಹೊರಬರುವ ಅವಕಾಶವಿದೆ, ತಾವಾಗಿಯೇ ಹೊರಬರಬೇಕು ಎಂದು ಕೇಳಿಬಂದರೆ ಸಂಭಾವನೆ ನೀಡಲಾಗುವುದಿಲ್ಲ,ಅದರಲ್ಲೂ ವೈಜಯಂತಿ ಅವರದ್ದು ಮೂರೂ ದಿನಗಳ ವಾಸವಾದ್ದರಿಂದ ಅವರಿಗೆ ಯಾವುದೇ ರೀತಿಯ ಸಂಭಾವನೆ ನೀಡಿಲ್ಲ.

Trending

To Top