ಮುಖ್ಯಮಂತ್ರಿಗಳೇ ಕರುಣೆ ತೋರಿಸಿ ನಮ್ಮನ್ನು ಇಲ್ಲಿಂದ ಕರೆಸಿಕೊಳ್ಳಿ ಎಂದು ಕರ್ನಾಟಕ ಮೂಲದ ಕುಟುಂಬ ಒಂದು ಆಂಧ್ರ ಪ್ರದೇಶದ ಗುಂಟೂರಿನಿಂದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಮಾಡಿದೆ..
ಕೆಲಸಕ್ಕಾಗಿ ಗುಂಟೂರಿಗೆ ತೆರಳಿದ್ದ ಕುಟುಂಬ, ಈಗ ಲಾಕ್ ಡೌನ್ ಇಂದಾಗಿ ಬಹಳ ತೊಂದರೆಯಲ್ಲಿದೆ. ಊಟಕ್ಕೂ ಸಹ ತೊಂದರೆಯಾಗುತ್ತಿದೆ, ಈ ಕಾರಣದಿಂದ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ತಮ್ಮ ತಂದೆ ತಾಯಿ ತಮ್ಮಂದಿರ ಜೊತೆ ವೀಡಿಯೊ ಮಾಡಿ ಯುವಕನೊಬ್ಬ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾನೆ.
“ನಮ್ಮ ಕುಟುಂಬಕ್ಕೆ ತಿನ್ನಲು ಸಹ ಗತಿ ಇಲ್ಲದಂತೆ ಆಗಿದೆ. ಇಲ್ಲಿ ಯಾರು ಒಂದು ರೂಪಾಯಿ ಸಹ ಸಹಾಯ ಮಾಡುತ್ತಿಲ್ಲ. ಮನೆ ಬಾಡಿಗೆ ಕಟ್ಟಲು ಆಗುತ್ತಿಲ್ಲ.ನಮ್ಮನ್ನು ದಯಮಾಡಿ ಕರ್ನಾಟಕಕ್ಕೆ ಕರೆಸಿಕೊಳ್ಳಿ.” ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದಾನೆ.
ನೂರಕ್ಕೂ ಹೆಚ್ಚು ಕನ್ನಡಿಗರು ದುಡಿಮೆ ಇಲ್ಲದ ಹಿನ್ನೆಲೆ ಊಟಕ್ಕೂ ಪರದಾಡುತ್ತಿದ್ದಾರೆ. ಗುಂಟೂರಿನ ಬೇಕರಿಗಳಲ್ಲಿ ಚಿಕ್ಕಮಗಳೂರು, ಹಾಸನದ ಅನೇಕ ಜನರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ದಯವಿಟ್ಟು ನಮ್ಮನ್ನು ಕರ್ನಾಟಕಕ್ಕೆ ಕರೆಯಿಸಿಕೊಳ್ಳಿ ಅಂತ ಕನ್ನಡಿಗರು ಕಷ್ಟವನ್ನು ತೋಡಿಕೊಂಡಿದ್ದಾರೆ.
