Film News

ಮಿಲನ ಬಗ್ಗೆ ಡಾರ್ಲಿಂಗ್ ಕೃಷ್ಣನ ಪ್ರೀತಿಯ ಮಾತು..

ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ಬಾರೀ ಟ್ರೆಂಡ್ ಸೃಷ್ಟಿಸಿದ ಸೂಪರ್‌ ಹಿಟ್‌ ಸಿನಿಮಾ ಲವ್‌ ಮಾಕ್‌ಟೇಲ್‌ . ಈ ಚಿತ್ರವನ್ನು ನೋಡಿದ ಪ್ರೇಕ್ಷಕರು ತಮ್ಮ ಲೈಫ್‌ನ ಕಥೆಯೇನೋ ಎಂಬಂತೆ ಭಾವಿಸುತ್ತಿದ್ದರು . ಆ ಚಿತ್ರದ ಪಾತ್ರಗಳಿಗೆ ಹೆಚ್ಚು ಕನೆಕ್ಟ್ ಆಗಿರುವ ಸಿನಿ ಪ್ರೇಮಿಗಳು ಅವರನ್ನು ರಿಯಲ್ ಹೆಸರಿನ ಬದಲು ರೀಲ್‌ ಹೆಸರಿನಿಂದಲೇ ಕರೆಯುತ್ತಾರೆ.

ಈ ಜೋಡಿ ತಮ್ಮ ನಡುವೆ ಕುಚ್-ಕುಚ್ ಇದೆ ಎಂದು ಸಿನಿಮಾ ರಿಲೀಸ್‌ಗೂ ಮುನ್ನ ಬಹಿರಂಗ ಪಡಿಸಿದ್ದರು. ಅಂದಿನಿಂದ ಎಲ್ಲರ ಕಣ್ಣು ಈ ಜೋಡಿಯ ಮೇಲಿದೆ.

ಏಪ್ರಿಲ್‌ 25ರಂದು ಮಿಲನಾ ಹುಟ್ಟು ಹಬ್ಬವನ್ನು ಸಿಂಪಲ್‌ ಆಗಿ ಆಚರಿಸಿಕೊಂಡಿದ್ದಾರೆ. ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ಎಲ್ಲಿಯೂ ಹೋಗದೆ ಮನೆಯಲ್ಲೇ ಇದ್ದಾರೆ. ಮಿಲನಾ ಹುಟ್ಟು ಹಬ್ಬಕ್ಕೆ ಡಾರ್ಲಿಂಗ್ ಕೃಷ್ಣ ಇನ್‌ಸ್ಟಾಗ್ರಾಂನಲ್ಲಿ ವಿಶೇಷ ಫೋಟೋವೊಂದರ ಮೂಲಕ ಶುಭಕೋರಿದ್ದಾರೆ.

‘ನಿನ್ನ ಪ್ರೀತಿ ಪರಿಶುದ್ಧ, ನಿನ್ನ ಹೃದಯ ಪರಿಶುದ್ಧ ನಿನ್ನ ನಗು ಪರಿಶುದ್ಧ. ನಿನ್ನನು ನನ್ನ ಜೀನದಲ್ಲಿ ಪಡೆದಿರುವುದು ನನ್ನ ಅದೃಷ್ಟ. ಜೀವನದಲ್ಲಿ ನಿಜವಾದ ಸಂತೋಷವೇನೆಂದು ತೋರಿಸಿರುವೆ. ಈ ನಿನ್ನ ಗುಣವೇ ನನಗೆ ನಿಧಿಮಾ ಪಾತ್ರ ಬರೆಯುವುದಕ್ಕೆ ಸ್ಫೂರ್ತಿ. ಹ್ಯಾಪಿ ಬರ್ತಡೇ ಮಿಲನಾ. ನಿಧಿಮಾ ಒದೆಯುತ್ತಾಳೆ ಆದರೆ ಮಿಲನಾ…ನೀವೇ ನೋಡಿ’ ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಮಿಲನಾ ಕೃಷ್ಣ ಅವರ ಬೆನ್ನ ಮೇಲೆ ನಿಂತಿಕೊಂಡು ಮಸಾಜ್‌ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ಸಕತ್ ವೈರಲ್‌ ಆಗುತ್ತಿದೆ.

https://www.instagram.com/p/B_X-TJ4Aa52/?igshid=qjz7leaqp5zi

Trending

To Top