ಬಹುಭಾಷಾ ತಾರೆ, ಡಿಂಪಲ್ ಕ್ಷೀನ್ ರಚಿತಾ ರಾಮ್ ಮುದ್ದಿನ ಅಕ್ಕ ನಿತ್ಯಾ ರಾಮ್ ಇತ್ತೀಚಿಗೆ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ಮೂಲದ ಉದ್ಯಮಿ ಜೊತೆ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಕಿರುತೆರೆಗೆ ಗುಡ್ ಬೈ ಹೇಳಿ, ಪತಿಯ ಜೊತೆ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ. ಈಗ ಎಲ್ಲೆಡೆ ಕೊರೋನಾ ವೈರಸ್ ಹೆಚ್ಚಾಗುತ್ತಿರವ ಕಾರಣ ಮಾಸ್ಕ್ ಧರಿಸುವುದು ಹಾಗೂ ಕೈಗಳನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಕಡ್ಡಾಯ ಹೌದು. ಈ ನಡುವೆಯೂ ನವ ದಂಪತಿ, ಪ್ರೇಮಿಗಳು ರೊಮ್ಯಾನ್ಸ್ ಮಾಡುವುದು ಹೇಗೆಂದು ಹೇಳಿ ಕೊಟ್ಟಿದ್ದಾರೆ ನಿತ್ಯಾ.
ಮತ್ತೆ ದಾಂಪತ್ಯಕ್ಕೆ ಕಾಲಿಟ್ಟ ರಚಿತಾ ಅಕ್ಕ ನಿತ್ಯಾ ರಾಮ್!
ಅಷ್ಟೇ ಅಲ್ಲ, ‘Romance Responsibly’ ಎಂದು ಬರೆದುಕೊಂಡಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು, ಸಿಕ್ಕಾಪಟ್ಟೆ ಕಾಮೆಂಟ್ ಮಾಡುತ್ತಿದ್ದಾರೆ. ‘ನಿಮ್ಮಿಬ್ಬರನ್ನು ಯಾವುದಾರೋ ಮಾಸ್ಕ್ ಜಾಹೀರಾತಿಗೆ ಕಳುಹಿಸಬೇಕು’, ‘ನಿಮ್ಮ ರೋಮ್ಯಾನ್ಸ್ ಇನ್ನೂ ಸ್ಟ್ರಾಂಗ್ ಆಗಲಿ ‘ ಎಂದು ಹೇಳುವ ಮೂಲಕ ಕಾಲೆಳೆದಿದ್ದಾರೆ.
https://www.instagram.com/p/B9-vhgoAFNB/?igshid=x3ynuv1lbham
