Connect with us

Film News

ಮಾಸ್ಕೆ ಬೇವು ಸ್ಯಾನಿಟೈಸರೇ ಬೆಲ್ಲ ! ಎಂದು ಯುಗಾದಿ ಹಬ್ಬದ ಶುಭಾಶಯ ತಿಳಿಸಿದ್ದಾರೆ ಅವತಾರ ಪುರುಷ ಚಿತ್ರತಂಡ

Published

on

ಈ ಬಾರಿಯ ಯುಗಾದಿ ತುಂಬಾನೇ ಅಪರೂಪ. ಬಹುಶಃ ಇಂತಹ ವಾತಾವರಣದಲ್ಲಿ ಬಂದೇ ಇಲ್ಲ ಅನ್ನಬಹುದು. ಹೀಗಾಗಿ ಯುಗಾದಿ ಶುಭಾಶಯಗಳು ಕೂಡ ವಿಭಿನ್ನವಾಗಿಯೇ ಬರ್ತಿವೆ. ಸ್ಯಾಂಡಲ್‌ವುಡ್‌ನ ನಿರ್ದೇಶಕ ಸಿಂಪಲ್‌ ಸುನಿ ಇನ್ನೂ ಭಿನ್ನವಾಗಿಯೇ ವಿಶ್ ಮಾಡಿದ್ದಾರೆ.ಯುಗಾದಿ ಹಬ್ಬಕ್ಕೆ ಅವತಾರ ಪುರುಷ ಪೋಸ್ಟರ್ ರಿಲೀಸ್ ಮಾಡಿರೋ ಚಿತ್ರತಂಡ ಡಿಫರೆಂಟಾಗಿ ಶುಭ ಕೋರಿದೆ.

ಈ ಬಾರಿ ಮಾಸ್ಕೆ ಬೇವು… ಸ್ಯಾನಿಟೈಸರೇ ಬೆಲ್ಲ! ಹ್ಯಾಪಿ ಯುಗಾದಿ ಎಂಬ ಕ್ಯಾಚಿ ಸಾಲುಗಳು ಪೋಸ್ಟರ್‌ನಲ್ಲಿವೆ. ಶರಣ್ ಮತ್ತು ಆಶಿಕಾ ರಂಗನಾಥ್‌ ಮಾಸ್ಕ್‌ ಧರಿಸಿ ಎಲ್ಲರಿಗೂ ಶುಭಾಶಯ ಕೋರಿದ್ದಾರೆ. ಜೊತೆಗೆ ಮನೆಯಲ್ಲಿರಿ ಸುರಕ್ಷಿತವಾಗಿರಿ ಎಂಬ ಸಂದೇಶವೂ ಪೋಸ್ಟರ್‌ನಲ್ಲಿದೆ. ಸಿಂಪಲ್‌ ಸುನಿ ನಿರ್ದೇಶನದ ಅವತಾರ ಪುರುಷ ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಪುಷ್ಕರ್‌ ಮಲ್ಲಿಕಾರ್ಜುನಯ್ಯ ನಿರ್ಮಾಣದ ಈ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲ ಮೂಡಿಸಿದೆ.

Film News

ಮನೆಯಲ್ಲಿ ಕುಳಿತು ಉತ್ತಮ ಚಿತ್ರ ನೋಡಬಯಸುವವರು ಯೂಟ್ಯೂಬ್ ನಲ್ಲಿ ‘ರಾಮ ರಾಮ ರೇ’ ಚಿತ್ರ ವೀಕ್ಷಿಸಬಹುದು..

Published

on

ಲಾಕ್ ಡೌನ್ ಇರುವ ಕಾರಣ ಮನೆಯಲ್ಲಿ ಕುಳಿತು ಉತ್ತಮ ಚಿತ್ರಗಳನ್ನು ನೋಡಬಯಸುವ ಜನರಿಗೆ ಇಲ್ಲಿದೆ ಒಂದು ಉತ್ತಮ ಮೂವಿ ಸಜೇಶನ್.. ಯಾವುದು ಗೊತ್ತಾ? ಡಿ ಸತ್ಯ ಪ್ರಕಾಶ್ ಅವರು ನಿರ್ದೇಶಿಸಿ ಬಿಗ್ ಬಾಸ್ ಖ್ಯಾತಿಯ ವಾಸುಕಿ ವೈಭವ ಸಂಗೀತ ನಿರ್ದೇಶನ ಮಾಡಿರುವ ‘ರಾಮ ರಾಮ ರೇ’ ಚಿತ್ರ..

ಈ ಚಿತ್ರವನ್ನು ಈಗ ಯೂಟ್ಯೂಬ್ ನಲ್ಲಿ ಫ್ರಿ ಆಗಿ ನೋಡಬಹುದು.. ರಾಮ ರಾಮ ರೇ ಸತ್ಯ ಪ್ರಕಾಶ್ ಅವರು ನಿರ್ದೇಶಿಸಿದ ಮೊದಲ ಚಿತ್ರವಾಗಿದ್ದು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಗಳಿಸಿತ್ತು. ಇದೀಗ ಚಿತ್ರ ಯೂಟ್ಯೂಬ್ ಚಾನಲ್ ಸತ್ಯಪಿಕ್ಚರ್ಸ್ ನಲ್ಲಿ ಬಿಡುಗಡೆಯಾಗಿದ್ದು ಸಾಕಷ್ಟು ಗಮನ ಸೆಳೆಯುತ್ತಿದೆ.

ಈ ಚಿತ್ರವನ್ನು ಅಕ್ಟೋಬರ್ 2016 ರಲ್ಲಿ ಕನ್ನಡ ಕಲರ್ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಯಿತು. ಇದು ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದ ಖೈದಿಯೊಬ್ಬನ ನಿವೃತ್ತ ಪೊಲೀಸ್ ಅಧಿಕಾರಿಯೊಂದಿಗಿನ ಮುಖಾಮುಖಿಯನ್ನು ಹೇಳುತ್ತದೆ.

ಚಿತ್ರದ ಲಿಂಕ್ ಇಲ್ಲಿದೆ ನೋಡಿ..

https://youtu.be/47L9HXwxiIg

Continue Reading

Film News

ಲವ್ ಮಾಕ್ಟೇಲ್ ಚಿತ್ರವನ್ನು ಮೆಚ್ಚಿಕೊಂಡ ಟಾಲಿವುಡ್ ನಟ ಅಲ್ಲು ಸಿರಿಶ್ ಡಾರ್ಲಿಂಗ್ ಕೃಷ್ಣ ಅವರಿಗೆ ಕನ್ನಡದಲ್ಲೇ ಧನ್ಯವಾದ ಹೇಳಿದ್ದಾರೆ

Published

on

ಡಾರ್ಲಿಂಗ್ ಕೃಷ್ಣ ರಚಿಸಿ, ನಿರ್ದೇಶಿಸಿ, ನಟಿಸಿದ ಲವ್ ಮಾಕ್ಟೇಲ್ ಚಿತ್ರ ಇಡೀ ರಾಜ್ಯದಲ್ಲಿ ಯಶಸ್ವಿ ಪ್ರದರ್ಶನ ಕಂಡು. ನಮ್ಮ ರಾಜ್ಯದವರನ್ನು ಮಾತ್ರವಲ್ಲದೆ ಹೊರರಾಜ್ಯದವರನ್ನು ಮತ್ತು ಹೊರದೇಶದವರಿಂದ ಸಹ ಮೆಚ್ಚುಗೆ ಪಡೆಯಿತು..

ನಮ್ಮ ಸ್ಯಾಂಡಲ್ ವುಡ್ ನ ಹಲವಾರು ನಟರು ಈ ಚಿತ್ರಕ್ಕೆ ಪ್ರೋತ್ಸಾಹ ನೀಡಿದರು. ಸಿನಿಅಭಿಮನಿಗಳಂತೂ ಆದಿ ನಿಧಿಮ ಎಂದು ಕೃಷ್ಣ ಮತ್ತು ಮಿಲನ ಅವರ ನಟನೆಗೆ ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪೋಸ್ಟ್ ಗಳು ಲವ್ ಮಾಕ್ಟೇಲ್ ಬಗ್ಗೆ ಬರುತ್ತಲೇ ಇರುತ್ತವೆ. ಚಿತ್ರದ್ಲಲಿನ ಕಾಮಿಡಿ, ಲವ್ ಮತ್ತು ಟ್ರಾಜಿಡಿ ಕ್ಲೈಮ್ಯಾಕ್ಸ್ ಎಲ್ಲರನ್ನೂ ಆಕರ್ಷಿಸಿದೆ.

ಇದೀಗ ಟಾಲಿವುಡ್ ನ ನಟರಾದ ಅಲ್ಲು ಸಿರಿಶ್ ಲವ್ ಮಾಕ್ಟೇಲ್ ಚಿತ್ರವನ್ನು ಮೆಚ್ಚಿ , ಟ್ವೀಟ್ ಮಾಡಿದ್ದಾರೆ.. ಲವ್ ಮಾಕ್ಟೇಲ್ ಚಿತ್ರವನ್ನು ಅಮೆಜಾನ್ ಪ್ರೈಮ್ ನಲ್ಲಿ ವೀಕ್ಷಿಸಿ ಬಹಳ ಇಷ್ಟವಾಯಿತು, ನನ್ನನ್ನು ಹಳೆಯ ದಿನಗಳಿಗೆ ಕರೆದುಕೊಂಡು ಹೋಯಿತು ಎಂದು ಬರೆದಿದ್ದಾರೆ..

ಜೊತೆಗೆ ಡಾರ್ಲಿಂಗ್ ಕೃಷ್ಣ ಅವರಿಗೆ ಧನ್ಯವಾದ ಎಂದು ಕನ್ನಡದಲ್ಲಿ ಹೇಳಿದ್ದಾರೆ ..

Continue Reading

Film News

ಕನ್ನಡದಲ್ಲಿ ಧನ್ಯವಾದ ಹೇಳಿ ಕನ್ನಡಿಗರ ಹೃದಯ ಗೆದ್ದ ಸ್ಟಾರ್ ನಿರ್ದೇಶಕ ರಾಜಮೌಳಿ!

Published

on

ನಿರ್ದೇಶಕ ರಾಜಮೌಳಿ ಮೂಲತಃ ಕನ್ನಡಿಗರು .. ರಾಯಚೂರಿನ ಮಾನ್ವಿ ಇವರ ಹುಟ್ಟೂರು ಹಾಗಾಗಿ ಇವರು ಬಹಳ ಚೆನ್ನಾಗಿ ಕನ್ನಡ ಮಾತನಾಡಬಲ್ಲರು . ತಮ್ಮ ಫೇಸ್ ಬುಕ್ ಖಾತೆಯಲ್ಲಿ ಕನ್ನಡದಲ್ಲಿಯೇ ಒಂದು ಪೋಸ್ಟ್ ಹಾಕಿ ಕನ್ನಡಿಗರ ಹೃದಯ ಗೆದ್ದಿದ್ದಾರೆ ರಾಜಮೌಳಿ..


ನಟ ರಾಮ್‌ ಚರಣ್‌ ಜನ್ಮದಿನದ ಸಲುವಾಗಿ ಅವರ ‘ಆರ್‌ಆರ್‌ಆರ್‌’ ಚಿತ್ರದ ಮೊದಲ ಟೀಸರ್ ರಿಲೀಸ್ ಆಗಿತ್ತು. ಅದರಲ್ಲಿ ರಾಮ್ ಚರಣ್ ಕೊಮರಂ ಭೀಮ್‌ ಎಂಬ ಪಾತ್ರವನ್ನು ನಿಭಾಯಿಸಿದ್ದಾರೆ. ಅದಕ್ಕಾಗಿ ಆ ಪಾತ್ರ ಯಾವ ರೀತಿ ಇರಲಿದೆ ಎಂಬ ಬಗ್ಗೆ ಸಣ್ಣ ಪರಿಚಯವನ್ನು ಈ ಟೀಸರ್‌ನಲ್ಲಿ ನೀಡಲಾಗಿದೆ. ಈ ಸಿನಿಮಾ ಕನ್ನಡ, ತೆಲುಗು, ಸೇರಿ ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ ಎಂಬ ಸತ್ಯ ಈ ಹಿಂದೆಯೇ ಗೊತ್ತಾಗಿತ್ತು. ಅಂತೆಯೇ ರಾಮ್‌ ಚರಣ್ ಬರ್ತ್‌ ಡೇ ಟೀಸರ್ ಕೂಡ ಐದು ಭಾಷೆಗಳಲ್ಲಿ ರಿಲೀಸ್ ಆಗಿತ್ತು. ನಟ ಜೂ. ಎನ್‌ಟಿಆರ್ ಕನ್ನಡದಲ್ಲೇ ಆ ಟೀಸರ್‌ಗೆ ಧ್ವನಿ ನೀಡಿದ್ದು ಇನ್ನೊಂದು ವಿಶೇಷವಾಗಿತ್ತು. ಅವರ ಧ್ವನಿಯಲ್ಲಿ ಕನ್ನಡ ಭಾಷೆ ಕೇಳಿದ ಕನ್ನಡಿಗರು ಖುಷಿಯಾಗಿದ್ದರು.

ನಿಮ್ಮ ಉತ್ತಮ ಪ್ರತಿಕ್ರಿಯೆಗೆ ತುಂಬುಹೃದಯದ ಧನ್ಯವಾದಗಳು…:) #RRR

Opublikowany przez SS Rajamouliego Niedziela, 29 marca 2020

ರಾಮ್‌ ಚರಣ್ ಅವರ ‘ಕೊಮರಂ ಭೀಮ್ ಟೀಸರ್’ ಭರ್ಜರಿ ಹಿಟ್ ಆಗಿದ್ದರಿಂದ ರಾಜಮೌಳಿ ಖುಷಿ ಆಗಿದ್ದಾರೆ. ಕನ್ನಡ ವರ್ಷನ್‌ ಟೀಸರ್ ಅನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ನಿರ್ದೇಶಕ ರಾಜಮೌಳಿ, ‘ನಿಮ್ಮ ಉತ್ತಮ ಪ್ರತಿಕ್ರಿಯೆಗೆ ತುಂಬುಹೃದಯದ ಧನ್ಯವಾದಗಳು…’ ಎಂದು ಕನ್ನಡದಲ್ಲೇ ಬರೆದುಕೊಂಡಿದ್ದಾರೆ. ಇದನ್ನು ಕಂಡ ಕನ್ನಡಿಗರು ಖುಷಿಯಾಗಿದ್ದಾರೆ. ಕನ್ನಡ ಮಾತ್ರವಲ್ಲದೆ, ಎಲ್ಲ ಭಾಷೆಯ ಸಿನಿಪ್ರಿಯರಿಗೆ ಅವರು ಶುಭ ಕೋರಿದ್ದಾರೆ. ‘ಈಗ’ ಖ್ಯಾತಿಯ ನಿರ್ಮಾಪಕ ಹಾಗೂ ರಾಜಮೌಳಿಯ ಆಪ್ತ ಸಾಯಿ ಕೊರ್ರಪಟಿ ‘ಆರ್‌ಆರ್‌ಆರ್‌’ ಕನ್ನಡ ವರ್ಷನ್‌ ಅನ್ನು ಕರ್ನಾಟಕದಲ್ಲಿ ರಿಲೀಸ್ ಮಾಡಲಿದ್ದಾರೆ.

Continue Reading
News5 mins ago

ಬ್ಯಾಂಕ್ ಗಳಿಂದ ಕಿಂಗ್ ಫಿಶರ್ ಏರ್ ಲೈನ್ಸ್ ಪಡೆದಿದ್ದ ಶೇ.100ರಷ್ಟು ಸಾಲ ಪಾವತಿಸಲು ಸಿದ್ದ : ವಿಜಯ್ ಮಲ್ಯ

Film News27 mins ago

ಮನೆಯಲ್ಲಿ ಕುಳಿತು ಉತ್ತಮ ಚಿತ್ರ ನೋಡಬಯಸುವವರು ಯೂಟ್ಯೂಬ್ ನಲ್ಲಿ ‘ರಾಮ ರಾಮ ರೇ’ ಚಿತ್ರ ವೀಕ್ಷಿಸಬಹುದು..

Karnataka1 hour ago

ರಾಜ್ಯದ 4 ಜಿಲ್ಲೆಗಳಿಗೆ ರೆಡ್ ಝೋನ್ ಘೋಷಿಸಿದೆ ಸರ್ಕಾರ

News2 hours ago

ಕೊರೊನಾ ಹೋರಾಟಕ್ಕೆ 10 ಲಕ್ಷ ದೇಣಿಗೆ ನೀಡಿದ್ದಾರೆ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು

Karnataka2 hours ago

ಮುಖ್ಯಮಂತ್ರಿಗಳೇ ಕರುಣೆ ತೋರಿಸಿ ನಮ್ಮನ್ನು ಕರೆಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ ಆಂಧ್ರಪ್ರದೇಶದಲ್ಲಿ ಸಿಲುಕಿರುವ ಕನ್ನಡಿಗರು

Film News3 hours ago

ಲವ್ ಮಾಕ್ಟೇಲ್ ಚಿತ್ರವನ್ನು ಮೆಚ್ಚಿಕೊಂಡ ಟಾಲಿವುಡ್ ನಟ ಅಲ್ಲು ಸಿರಿಶ್ ಡಾರ್ಲಿಂಗ್ ಕೃಷ್ಣ ಅವರಿಗೆ ಕನ್ನಡದಲ್ಲೇ ಧನ್ಯವಾದ ಹೇಳಿದ್ದಾರೆ

News4 hours ago

ಕೊರೊನಾ ವೈರಸ್ ಅನ್ನು ಬೌಲ್ ಔಟ್ ಮಾಡೋಣ ಎಂದಿದ್ದಾರೆ ಕ್ರಿಕೆಟಿಗ ಅನಿಲ್ ಕುಂಬ್ಳೆ !

Film News11 hours ago

ಕನ್ನಡದಲ್ಲಿ ಧನ್ಯವಾದ ಹೇಳಿ ಕನ್ನಡಿಗರ ಹೃದಯ ಗೆದ್ದ ಸ್ಟಾರ್ ನಿರ್ದೇಶಕ ರಾಜಮೌಳಿ!

Karnataka12 hours ago

ಜೀವ ಭಯ ಬಿಟ್ಟು ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕಿಚ್ಚನ ಸಲ್ಯೂಟ್!

Film News14 hours ago

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಮೇಲಿದೆ ಭಾರಿ ಒತ್ತಡ : ಮನದ ಮಾತು ಹೇಳಿದ್ದಾರೆ ಅರ್ಜುನ್ ಜನ್ಯ

Kollywood1 week ago

ಲಂಡನ್ ನಿಂದ ವಾಪಸ್ ಆದ ನಂತರ ಸ್ವಯಂ ಗೃಹ ಬಂಧನದಲ್ಲಿರುವ ನಟಿ ಸುಹಾಸಿನಿ ಅವರ ಮಗ ನಂದನ್!

Bollywood2 weeks ago

ಬಟ್ಟೆ ಜಾರಿ ಮುಜುಗರಕ್ಕೆ ಒಳಗಾದ ನಟಿ ಶ್ರದ್ಧಾ ಕಪೂರ್!

News6 days ago

ಇಂದಿನಿಂದ ಬೆಂಗಳೂರಿನಲ್ಲಿ ನಿತ್ಯ ಬಳಕೆ ವಸ್ತುಗಳು ಮತ್ತು ಆರೋಗ್ಯ ಸೇವೆಗಾಗಿ ಬಿಎಂಟಿಸಿ ಬಸ್ಸುಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ

Karnataka3 weeks ago

ಹನಿಮೂನ್ ಮುಗಿಸಿಕೊಂಡು ಭಾರತಕ್ಕೆ ಹಿಂದಿರುಗಿ ಬರುತ್ತಿರುವ ಚಂದನ್-ನಿವೇದಿತಾಗೆ ಕಡ್ಡಾಯವಾಗಿ ಕೊರೊನಾ ತಪಾಸಣೆ ಆಗಲೇಬೇಕೆಂದು NSUI ಆಗ್ರಹ!

Film News2 weeks ago

ಇಡೀ ಸ್ಯಾಂಡಲ್ ವುಡ್ ಮೆಚ್ಚುವಂಥ ಕೆಲಸಕ್ಕೆ ಮುಂದಾಗಿದ್ದಾರೆ ಪವರ್ ಸ್ಟಾರ್ ಮಗಳು ಧೃತಿ!

Videos1 week ago

ಅಪ್ಪನಿಗೆ ಆಯ್ರಾಳ ಮುದ್ದಾದ ಕೈತುತ್ತು! ಅಪ್ಪ ಮಗಳ ಬಾಂಧವ್ಯಕ್ಕೆ ಇನ್ಯಾವುದು ಸಾಟಿ ಇಲ್ಲ!

Film News1 week ago

ಅವೈಜ್ಞಾನಿಕ ತಿಯರಿಗಳನ್ನು ಹರಡಬೇಡಿ ಎಂದು ಕಿಚ್ಚ ಸುದೀಪ್ ಗೆ ಬುದ್ಧಿವಾದ ಹೇಳಿದ ನಟ ಚೇತನ್!

gossip3 weeks ago

ಡೈರೆಕ್ಟರ್ ಪ್ರಕಾಶ್ ಕೊವೆಲಮುಡಿ ಅವರ ಜೊತೆಗೆ ವಿವಾಹದ ಗಾಸಿಪ್ ಬಗ್ಗೆ ಸ್ಪಷ್ಟನೆ ನೀಡಿದ ಕಡಲ ಕಿನ್ನರಿ ಅನುಷ್ಕಾ ಶೆಟ್ಟಿ!

Film News4 weeks ago

ಕಿಚ್ಚನ ಕಿಚನ್ ಹೇಗಿದೆ ಗೊತ್ತಾ? ಈ ಫೋಟೋ ಗ್ಯಾಲರಿ ನೋಡಿ!

Kannada Music5 days ago

ಕೊರೊನಾ ಜಾಗೃತಿ ಕುರಿತಾಗಿ ವಾರಿಜಾಶ್ರೀ ಹಾಡಿರುವ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ

Trending