Film News

ಮಾಯಾಬಜಾರ್ 2016 ಚಿತ್ರದ ಹಾಡಿಗೆ ಅಮೆರಿಕನ್ನರು ನೃತ್ಯ ಮಾಡುತ್ತಿರುವ ವೀಡಿಯೊ ಹಂಚಿಕೊಂಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್!

ಪಿಆರ್​​ಕೆ ಬ್ಯಾನರ್​ ಅಡಿ ನಿರ್ಮಾಣವಾಗಿರೋ ‘ಮಾಯಾಬಜಾರ್​-2016’ ಸಿನಿಮಾ ರಾಜ್ಯಾದ್ಯಂತ ರಿಲೀಸ್​ ಆಗಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ಇದೇ ಮಾರ್ಚ್​​ 6ಕ್ಕೆ ಸಿನಿಮಾ ಅಮೆರಿಕಾದಲ್ಲೂ ತೆರೆಕಾಣಲಿದೆ ಅಂತ ಚಿತ್ರದ ನಿರ್ಮಾಪಕ ಪುನೀತ್​ ರಾಜ್​ಕುಮಾರ್​ ಹೇಳಿದ್ದಾರೆ. ಅಮೆರಿಕಾದಲ್ಲಿ ‘ಸಾತ್’​ ಕೊರಿಯಾಗ್ರಫಿ ತಂಡ ಮಾಯಾಬಜಾರ್​ ಚಿತ್ರದ ಟೈಟಲ್ ಟ್ರ್ಯಾಕ್​​ಗೆ ಡ್ಯಾನ್ಸ್​ ಮಾಡಿರುವ ವಿಡಿಯೋವನ್ನ ಹಂಚಿಕೊಂಡು ಈ ವಿಷಯ ತಿಳಿಸಿದ್ದಾರೆ.

ಪುನೀತ್‌ ರಾಜ್‌ಕುಮಾರ್ ಅವರ ಪಿಆರ್​ಕೆ ಪ್ರೊಡಕ್ಷನ್ ಸಂಸ್ಥೆಯಡಿ ನಿರ್ಮಿಸುತ್ತಿರುವ ಎರಡನೇ ಸಿನಿಮಾ ಮಾಯಾಬಜಾರ್​. ರಾಧಾಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ, ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜೇಶ್​ ಬಿ. ಶೆಟ್ಟಿ, ವಸಿಷ್ಠ ಸಿಂಹ, ಸುಧಾರಾಣಿ, ಸಾಧು ಕೋಕಿಲ ಹಾಗೂ ಅಚ್ಚ್ಯುತ್​ ಕುಮಾರ್​ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ನೋಟ್ ಬ್ಯಾನ್​ನಿಂದಾಗುವ ಪರಿಣಾಮ ಹಾಗೂ ನಡೆಯುವ ಕೆಲ ಘಟನೆಗಳ ಸುತ್ತಲೇ ಸಿನಿಮಾದ ಕಥೆ ಸುತ್ತುತ್ತದೆ.

Trending

To Top