Film News

ಮಾಧ್ಯಮಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ ಬಾಲಿವುಡ್ ನಟಿ ಕತ್ರಿನಾ ಕೈಫ್

ಬಾಲಿವುಡ್‌ ಚಿತ್ರರಂಗದಲ್ಲಿ ಅತಿ ಹೆಚ್ಚು ಗಾಸಿಪ್‌ ಹಾಗೂ ಗರ್ಲ್‌ ಫ್ರೆಂಡ್‌ ಹೊಂದಿರುವ ನಟ ಅಂದ್ರೆ ರಣ್ಬೀರ್‌ ಕಪೂರ್‌. ಹಲವು ವರ್ಷಗಳಿಂದ ಆಲಿಯಾ ಭಟ್‌ನನ್ನು ಪ್ರೀತಿಸುತ್ತಿದ್ದು, 2020ರ ಕೊನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕೆಂದು ನಿರ್ಧರಿಸಿದ್ದಾರೆ, ಎನ್ನಲಾಗುತ್ತಿದೆ. ಆದಿರನ್ನೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಡೆಸ್ಟಿನೇಷನ್‌ ವೆಡ್ಡಿಂಗ್ ಪ್ಲಾನ್‌ ಮಾಡುವ ಸೆಲೆಬ್ರಿಟಿಗಳು ಕೊರೋನಾ ವೈರಸ್‌ ಹೆಬ್ಬಿರುವ ಹಿನ್ನೆಲೆಯಲ್ಲಿ ಮದುವೆಯನ್ನು ಮುಂದಿನ ವರ್ಷ ಮುಂದೂಡುವ ಸಾಧ್ಯತೆಯೂ ಇದೆ.

6 ವರ್ಷಗಳ ಕಾಲ ರಣ್ಬೀರ್ ಕಪೂರ್‌ ಹಾಗೂ ಕತ್ರಿನಾ ಕೈಫ್‌ ಪ್ರೀತಿಸುತ್ತಿದ್ದು, ಬಾಲಿವುಡ್‌ ಕ್ಯೂಟ್‌ ಕಪಲ್‌ ಎಂದು ಕರೆಸಿಕೊಂಡಿದ್ದರು. ಈ ಜೋಡಿ ಮದುವೆಯೂ ಆಗುತ್ತೆ ಎಂಬ ಸುದ್ದಿಯೂ ಹರಿದಾಡುತ್ತಿತ್ತು. ಆದರೆ ಕಾರಣಾಂತರಗಳಿಂದ ಬ್ರೇಕ್ ಅಪ್ ಆಯಿತು. ಆ ಸಮಯದಲ್ಲಿ ಈ ಜೋಡಿ ಆಗ ಸುತ್ತಾಡಿದ ಟ್ರಿಪ್‌ಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್‌ ಆಗುತ್ತಿದೆ.

ರಣ್ಬೀರ್‌ ಹಾಗೂ ಕತ್ರಿನಾ ಕೈಫ್ ಸಾಕಷ್ಟು ಸಿಕ್ರೇಟ್‌ ವಿದೇಶಿ ಟ್ರಿಪ್‌ಗಳಿಗೆ ಹೋಗಿದ್ದಾರೆ. ಅದರಲ್ಲೂ ಅವರು ಸ್ಪೇನ್‌ ಟ್ರಿಪ್‌ ಹೆಚ್ಚಾಗಿ, ಗಾಸಿಪ್‌ ಕ್ರಿಯೇಟ್‌ ಮಾಡಿತ್ತು. ಸ್ಪೇನ್‌ನಲ್ಲಿ ಸೆರೆ ಹಿಡಿದ ರಣ್ಬೀರ್‌ ಹಾಗೂ ಕತ್ರಿನಾ ಇನ್ಟಿಮೇಟ್‌ ಫೋಟೋ ವೈರಲ್‌ ಆಗುತ್ತಿದ್ದಂತೆ, ಕತ್ರಿನಾ ಮನನೊಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಈಗಾಗಲೇ ಅನೇಕ ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿಗಳೂ ಬಿತ್ತರಗೊಂಡಿವೆ. ಅದಕ್ಕೆ ನೊಂದು ಮಾಧ್ಯಮಗಳಿಗೆ ಕತ್ರೀನಾ ಓಪನ್ ಲೆಟರ್ ಬರೆದಿದ್ದಾರೆ.

‘ಹಲವು ವರ್ಷಗಳ ಹಿಂದೆ ನಾನೊಬ್ಬ ವ್ಯಕ್ತಿಯೊಂದಿಗೆ ಟ್ರಿಪ್‌ ತೆರಳಿದಾಗ ನಮಗೇ ತಿಳಿಯದ ರೀತಿಯಲ್ಲಿ ಅವರವರ ಲಾಭಕ್ಕಾಗಿ ಸೆರೆ ಹಿಡಿದಿರುವ ಫೋಟೋಗಳಿವು. ಸೆಲೆಬ್ರಿಟಿಗಳ ಪ್ರೈವೇಸಿ ಲೈಫ್‌ ಬಗ್ಗೆ ತಿಳಿದುಕೊಳ್ಳಬೇಕು ನಿಜ. ಆದರೆ, ಇಂಥ ಫೋಟೋಗಳನ್ನು ಶೇರ್ ಮಾಡುವುದರಿಂದ ಮಾಧ್ಯಮ ಸಂಸ್ಥೆಗೇನು ಲಾಭ? ಗಳಿಸುವುದಾದರೂ ಏನು. ನಾನು ಮಾಧ್ಯಮಗಳ ಜೊತೆ ಉತ್ತಮ ಸಂಬಂಧ ಹೊಂದಿರುವೆ ಹಾಗೂ ಅವರ ಕರೆಗೆ ಭೇದ ಭಾವ ತೋರದೇ ಸ್ಪಂದಿಸುವೆ, ಅವರಿಗೆ ಎಲ್ಲಾ ಮಾಹಿತಿ ನೀಡಿದರೂ, ಹೀಗೆ ಮಾಡುವುದು ತಪ್ಪು…’ ಎಂದು ಅಳಲು ತೋಡಿಕೊಂಡಿದ್ದಾರೆ.

Trending

To Top