News

ಮಹಿಳೆಯರು ಕಾಂಡೋಮ್ ಇಟ್ಕೊಬೇಕು, ಅತ್ಯಾಚಾರಿಗಳಿಗೆ ಸಹಕರಿಸಬೇಕು: ನಿರ್ದೇಶಕನ ಪೋಸ್ಟ್ ವೈರಲ್!

Daniel Shravan Facebook Post

ಹೈದರಾಬಾದ್ ಪಶುವೈದ್ಯೆಯ ಮೇಲೆ ಅತ್ಯಾಚಾರ ನಡೆದ ಪ್ರಕರಣದಲ್ಲಿ ಸಾರ್ವಜನಿಕರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ನಿರ್ದೇಶಕನೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕ ಹೇಳಿಕೆ ಪೋಸ್ಟ್ ಮಾಡಿ ವಿವಾದಕ್ಕೀಡಾಗಿದ್ದಾನೆ.

ನಿರ್ದೇಶಕ ಡೇನಿಯಲ್ ಫೆಸ್ ಬುಕ್ ನಲ್ಲಿ ಬರೆದುಕೊಂಡಿದ್ದು, ಮಹಿಳೆಯರು ತಮ್ಮ ಜೊತೆ ಕಾಂಡೋಮ್ ಇಟ್ಟುಕೊಂಡು ಅತ್ಯಾಚಾರಿಗಳಿಗೆ ಸಹಕರಿಸಬೇಕು, ಪುರುಷರ ಲೈಂಗಿಕ ಬಯಕೆಗಳನ್ನು ಈಡೇರಿಸಿದರೆ ಯಾರೂ ಅವರನ್ನು ಹತ್ಯೆ ಮಾಡುವುದಿಲ್ಲ ಎಂದು ಹೇಳಿದ್ದಾನೆ

ಹೇಗೆ ವೀರಪ್ಪನ್ ನ್ನು ಹತ್ಯೆ ಮಾಡಿದರೆ ಕಳ್ಳಸಾಗಾಣೆ ತಡೆಗಟ್ಟಲು ಸಾಧ್ಯವಿಲ್ಲವೋ, ಹೇಗೆ ಬಿನ್ ಲ್ಯಾಡೆನ್ ನ್ನು ಹತ್ಯೆ ಮಾಡಿದರೆ ಭಯೋತ್ಪಾದನೆ ನಿರ್ಮೂಲನೆ ಮಾಡಲು ಸಾಧ್ಯವಿಲ್ಲವೋ ಹಾಗೆಯೇ ನಿರ್ಭಯ ಕಾನೂನು ತಂದರೆ ಅತ್ಯಾಚಾರಗಳನ್ನು ತಡೆಯಲು ಸಾಧ್ಯವಿಲ್ಲ. ಆದ್ದರಿಂದ ಅತ್ಯಾಚಾರಗಳನ್ನು ಕಾನೂನುಬದ್ಧಗೊಳಿಸಬೇಕು, 18 ರ ಮೇಲ್ಪಟ್ಟ ಯುವತಿಯರು ತಮ್ಮೊಂದಿಗೆ ಕಾಂಡೋಮ್ ಇಟ್ಟುಕೊಂಡು ಅತ್ಯಾಚಾರಿಗಳ ಲೈಂಗಿಕ ಬಯಕೆಗಳನ್ನು ಪೂರೈಸಬೇಕು ಹಾಗಾದಲ್ಲಿ ಪುರುಷರ ಲೈಂಗಿಕ ಬಯಕೆಗಳು ಈಡೇರಿದರೆ ಯಾರೊಬ್ಬರೂ ಮಹಿಳೆಯರನ್ನು ಹತ್ಯೆ ಮಾಡುವುದಿಲ್ಲ ಎಂದು ಹೇಳಿದ್ದಾನೆ.

ಅತ್ಯಾಚಾರಿಗಳು ತಮ್ಮ ಲೈಂಗಿಕ ಆಸೆಯನ್ನು ಈಡೇರಿಸಿಕೊಳ್ಳುವುದಕ್ಕೆ ಯಾವುದೇ ಮಾರ್ಗ ಕೊಂಡುಕೊಳ್ಳುತ್ತಿಲ್ಲ, ಹೀಗಾಗಿ ಕೊಲೆಗಳು ನಡೆಯುತ್ತಿವೆ. ಅತ್ಯಾಚಾರ ನಂತರ ಕೊಲೆ ಮಾಡುವುದನ್ನು ತಡೆಯಲು ಸರ್ಕಾರ ಅತ್ಯಾಚಾರವನ್ನು ಕಾನೂನುಬದ್ಧಗೊಳಿಸಬೇಕು ಹಾಗೂ  ಮಹಿಳೆಯರು ತಮ್ಮ ಜೊತೆ ಕಾಂಡೋಮ್ ಇಟ್ಟುಕೊಂಡು ಅತ್ಯಾಚಾರಿಗಳಿಗೆ ಸಹಕರಿಸುವ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಡೇನಿಯಲ್ ಶ್ರವಣ್ ಪೋಸ್ಟ್ ಹಾಕಿದ್ದನು

ಈ ಪೋಸ್ಟ್ ಗೆ ಸಾರ್ವಜನಿಕರಾದಿಯಾಗಿ ಸೆಲಬ್ರಿಟಿಗಳೂ ಡೇನಿಯಲ್ ನ್ನು ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು,  ಹಿನ್ನೆಲೆ ಗಾಯಕಿ ಚಿನ್ಮಯಿ ಶ್ರೀಪಾದ ಹಾಗೂ ಬಾಲಿವುಡ್ ನಟಿ ಕುಬ್ರಾ ಸೇಠ್ ಆದಿಯಾಗಿ ಸೆಲಬ್ರಿಟಿಗಳು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ನಿರ್ದೆಶಕ ತನ್ನ ಪೋಸ್ಟ್ ನ್ನು ಡಿಲೀಟ್ ಮಾಡಿದ್ದಾನೆ.

Trending

To Top