Kannada Reality Shows

ಮಲ್ಲಿಗೆ ಮಲ್ಲಿಗೆ ಮೇಡಮ್ಮು! ಸ್ಕೂಲ್‌ ಹುಡ್ಗರ ಮೈ ಜುಮ್ ಜುಮ್‌!

ಅಬ್ಬಾ! ಬಿಗ್‌ಬಾಸ್‌ ಮನೆಯಲ್ಲಿ ಇಷ್ಟೊಂದು ಹಾಟ್ ಆಗಿರೋ ಟೀಚರ್‌ ಯಾವ ಸೀಸನ್‌ನಲ್ಲೂ ಇರಲಿಲ್ಲ ಬಿಡಿ. ಸ್ಟೂಡೆಂಟ್ಸ್ ಕೂಡ ಟೀಚರ್‌ಗೆ ಈ ಥರಾ ಹಾಡು ಹಾಡಿರಲಿಲ್ಲ. ಹೌದು, ಬಿಗ್‌ಬಾಸ್‌ ಮನೆಯಲ್ಲಿ ನಡೀತಿರೋ ಸ್ಕೂಲ್‌ ಟಾಸ್ಕ್‌ನಲ್ಲಿ ಹಾಟ್‌ ಟೀಚರ್‌ವೊಬ್ಬರು ಪ್ರತ್ಯಕ್ಷರಾಗಿದ್ದರು. ಅವರೇ ದೀಪಿಕಾ ದಾಸ್!

ಕ್ಲಾಸ್ ಶುರುವಾಗೋ ಮುನ್ನ ಇವತ್ತಿನ ಟೀಚರ್ ಯಾರು ಅನ್ನೋ ಕುತೂಹಲವಿತ್ತು.

ದೀಪಿಕಾ ದಾಸ್‌ ಸ್ಯಾರಿ ಹಾಕ್ಕೊಂಡು ಬರ್ತಿದ್ರೆ ವಿದ್ಯಾರ್ಥಿಗಳೆಲ್ಲಾ ಓ ಓ ಓ ಅಂತಾ ಕಿರುಚಾಡುತ್ತಿದ್ರು. ಕ್ಲಾಸ್ ಶುರುವಾದ್ಮೇಲಂತೂ ಎಲ್ರೂ, ಸೀರೇಲಿ ಹುಡ್ಗೀರ ನೋಡಲೇಬಾರದು ನಿಲ್ಲಲ್ಲ ಟೆಂಪರೇಚರ್ರೂ, ಸ್ಕೂಲಲ್ಲಿ ಹೇಳಿ ಕೊಡಬಹುದಿತ್ತಲ್ವಾ ಹೇಳಲಿಲ್ಲ ನಮ್‌ ಟೀಚರು’ ಅಂತಾ ಹಾಡೋಕೆ ಶುರು ಮಾಡಿದರು.

ಇದಿಷ್ಟೇ ಆಗಿದ್ದಿದ್ರೆ ಪರವಾಗಿರಲಿಲ್ಲ, ದೀಪಿಕಾಗೆ ಶೈನ್ ಮತ್ತು ಕಿಶನ್‌ ಸಿಕ್ಕಾಪಟ್ಟೆ ಕಾಟ ಕೊಟ್ಟುಬಿಟ್ರು. ತಮಾಷೆಗೆ ಅವರನ್ನ ಎಳೆದಾಡಿದರು. ಕೊನೆಗೆ ನಾನು ಕ್ಲಾಸ್ ಬಿಟ್ಟು ಹೋಗ್ತೀನಿ ಅಂತಾ ಹೇಳ್ದಿದ್ದಂತೆ ಶೈನ್, ದೀಪಿಕಾ ಕಾಲ್ ಹಿಡಿದುಕೊಂಡು ಬಿಟ್ಟರು. ಹೀಗೆ ಪ್ರತಿಯೊಬ್ಬರು ಫಿಸಿಕ್ಸ್‌ ಕ್ಲಾಸ್‌ನಲ್ಲಿ ದೀಪಿಕಾ ದಾಸ್‌ಗೆ ಟಾರ್ಚರ್‌ ಕೊಟ್ಟಿದ್ದೇ ಕೊಟ್ಟಿದ್ದು. ವಿದ್ಯಾರ್ಥಿಗಳ ಆಯನ್ಸರ್‌, ತರ್ಲೆ, ತಮಾಷೆಗೆ ದೀಪಿಕಾ ಸುಸ್ತಾಗಿ ಹೋದರು.

Trending

To Top