gossip

ಮಲೆನಾಡಿನ ಸಕ್ರಬೈಲ್‌ನಲ್ಲಿ ಭಜರಂಗಿ-2 ಶೂಟಿಂಗ್!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಹರ್ಷ ನಿರ್ದೇಶನದ ಭಜರಂಗಿ-2 ಸಿನಿಮಾ ಶೂಟಿಂಗ್ ಮಲೆನಾಡಿನ ಸುಂದರ ತಾಣಗಳ ನಡುವೆ ನಡೆದಿದೆ.

ನಿನ್ನೆ ಸಕ್ರೆಬೈಲಿನಲ್ಲಿ ಆನೆಗಳ ನಡುವೆ ಚಿತ್ರೀಕರಣ ನಡೆದಿದ್ದು, ಮೇಕಿಂಗ್ ಫೋಟೋಗಳು ಆಚೆ ಬಂದಿವೆ. ನಿನ್ನೆ ಶಿವರಾಜ್‌ಕುಮಾರ್ ಆನೆಯ ಮೇಲೆ ಕುಳಿತು ಮುಂದೆ ಸಾಗುವ ಹಾಗೂ ತುಂಗಾ ಹಿನ್ನೀರಿನಲ್ಲಿ ಆನೆಗೆ ಸ್ನಾನ ಮಾಡಿಸುವ ಎರಡು ಸನ್ನಿವೇಶಗಳನ್ನು ಶೂಟ್‌ ಮಾಡಲಾಯಿತು. ಇನ್ನು ನೆಚ್ಚಿನ ನಟ ತಮ್ಮೂರಿಗೆ ಬಂದಿದ್ದಾರೆ ಅಂತಾ ತಿಳಿದಿದ್ದೇ ತಡ ಸಾಕಷ್ಟು ಅಭಿಮಾನಿಗಳು ಶೂಟಿಂಗ್‌ ಜಾಗಕ್ಕೆ ಆಗಮಿಸಿದ್ರು.

2013ರಲ್ಲಿ ತೆರೆಕಂಡ ಭಜರಂಗಿ ಸಿನಿಮಾಗೂ ಈ ಸಿನಿಮಾಗೂ ಏನೂ ಸಂಬಂಧ ಇಲ್ಲ. ಎಲ್ಲಾ ಅಂದುಕೊಂಡಂತಾದ್ರೆ ಜನವರಿ ತಿಂಗಳಾಂತ್ಯಕ್ಕೆ ಚಿತ್ರೀಕರಣ ಮುಗಿಯಲಿದ್ದು ಚಿತ್ರ ಏಪ್ರಿಲ್ ತಿಂಗಳಿನಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ.

ಟಗರು ನಂತರ ಭಾವನಾ ಮತ್ತು ಶಿವಣ್ಣ ಮತ್ತೊಮ್ಮೆ ನಟಿಸುತ್ತಿದ್ದಾರೆ. ಭಜರಂಗಿ ಸಿನಿಮಾ ಮಾಟ, ಮಂತ್ರ, ತಂತ್ರ, ವಾಮಾಚಾರಕ್ಕೆ ಸಂಬಂಧಿಸಿದ ಕಥೆಯಾಗಿತ್ತು. ಭಜರಂಗಿ-2 ನಲ್ಲಿ ಚಿತ್ರಕಥೆ ಹೇಗಿರಲಿದೆ ಅನ್ನೋದು ಕುತೂಹಲ ಕೆರಳಿಸಿದೆ.

Trending

To Top