ಕೊರೋನಾ ವೈರಸ್ ಹಿನ್ನಲೆಯಲ್ಲಿ ಕನ್ನಡ ಚಾನೆಲ್ ಗಳ ಚಿತ್ರೀಕರಣ ಸ್ಥಗಿತಗೊಂಡಿದ್ದು, ಬಹುತೇಕ ವಾಹಿನಿಗಳು ತಮ್ಮ ಹಳೇಯ ಜನಪ್ರಿಯ ಕಾರ್ಯಕ್ರಮಗಳನ್ನು ಮರು ಪ್ರಸಾರ ಮಾಡುತ್ತಿವೆ.
ಜೀ ಕನ್ನಡವಾಹಿನಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಹಿಂದೆ ಪ್ರಸಾರವಾಗಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ವನ್ನು ಮತ್ತೆ ಆರಂಭಿಸಲಿದೆ. ಏಪ್ರಿಲ್ 11 ರಿಂದ ಈ ಸಂಚಿಕೆಗಳು ಮರು ಪ್ರಸಾರ ಆಗಲಿವೆ,
ಹಿಂದೆ ದರ್ಶನ್ ಭಾಗವಹಿಸಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ದಾಖಲೆಯ ಟಿಆರ್ ಪಿ ಪಡೆದಿತ್ತು. ಅದೇ ರೀತಿ ಜಗ್ಗೇಶ್ ಭಾಗವಹಿಸಿದ್ದ ಎಪಿಸೋಡ್ ಗೂ ಉತ್ತಮ ವೀಕ್ಷಣೆ
ಬಂದಿತ್ತು. ಹೀಗಾಗಿ ಈ ಶನಿವಾರ ಮತ್ತು ಭಾನುವಾರ ಈ ಎರಡು ಎಪಿಸೋಡ್ ಗಳನ್ನು ಜೀ ವಾಹಿನಿ ಮರಳಿ ಪ್ರಸಾರ ಮಾಡಲಿದೆ.
