Food

ಮನೆಯಲ್ಲೇ ತಯಾರಿಸಿ ಬೆಣ್ಣೆ ಬಿಸ್ಕೆಟ್

ಬೆಣ್ಣೆ ಬಿಸ್ಕೆಟ್ ಎಂದರೆ ಮಕ್ಕಳಿಗೆಲ್ಲಾ ಅಚ್ಚುಮೆಚ್ಚು. ದೊಡ್ಡವರು ಕೂಡ ಇಷ್ಟಪಟ್ಟು ತಿನ್ನುತ್ತಾರೆ. ಮೈಕ್ರೋವೇವ್ ಅವನ್ ಇಲ್ಲದೆ ಮನೆಯಲ್ಲೇ ತಯಾರಿಸಿ ಬಟರ್ ಕುಕೀಸ್..

ಬೇಕಾಗುವ ಪದಾರ್ಥಗಳು :-
1 ಕಪ್ ಮೈದಾ
3/4 ಕಪ್ ಸಕ್ಕರೆ ಪುಡಿ
ಬೆಣ್ಣೆ

ಮಾಡುವ ವಿಧಾನ :-
ಒಂದು ಬೌಲ್ ಗೆ ಮೈದಾ ಮತ್ತು ಸಕ್ಕರೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಬೆಣ್ಣೆ ಸೇರಿಸಿ ಕಲಸಿ. ಚಪಾತಿ ಹಿಟ್ಟಿನ ಹದಕ್ಕೆ ಕಲಸುವುದು ಬೇಡ. ಸ್ವಲ್ಪ ಸ್ವಲ್ಪ ವಾಗಿ ಬೆಣ್ಣೆ ಸೇರಿಸಿ, ಚೆನ್ನಾಗಿ ಕಲಸಿ, ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ( ಬಾಲ್ ಆಕಾರದಲ್ಲಿ ) ಮಾಡಿ.

ಬೇಕಿಂಗ್ :-

ಕುಕ್ಕರ್ ನ ಕೆಳಭಾಗದಲ್ಲಿ ಒಂದು ಸ್ಟ್ಯಾಂಡ್ ಇಟ್ಟು, ಆದರೆ ಮೇಲೆ ಅಲ್ಯೂಮಿನಿಯಂ ತಟ್ಟೆ ಇಡಿ , ಅಲ್ಯೂಮಿನಿಯಂ ತಟ್ಟೆಯ ಮೇಲೆ ಬಟರ್ ಪೇಪರ್ ಇಡಿ, ನಂತರ ಬಿಸ್ಕೆಟ್ ಗಳನ್ನು ಅಲ್ಯೂಮಿನಿಯಂ ತಟ್ಟೆಯ ಮೇಲೆ ಇಟ್ಟು, ಕುಕ್ಕರ್ ಮುಚ್ಚಳ ಮುಚ್ಚಿ, 10-15 ನಿಮಿಷ ಬೇಯಿಸಿ. ಕುಕ್ಕರ್ ಗೆ ವಿಸಲ್ ಮತ್ತು ಗ್ಯಾಸ್ಕೆಟ್ ಹಾಕುವ ಹಾಗಿಲ್ಲ. 10-15 ನಿಮಿಷಗಳ ನಂತರ ಬಿಸ್ಕೆಟ್ ಗಳಲ್ಲಿ ಮೂಡಿರುವ ಬಿರುಕುಗಳು, ಬಿಸ್ಕೆಟ್ ತಯಾರಾಗಿದೆ ಎಂಬುದನ್ನು ಸೂಚಿಸುತ್ತದೆ.

( ಬೇಕಿಂಗ್ ಶುರು ಮಾಡುವ ಮೊದಲು ಕುಕ್ಕರ್ ಅನ್ನು ಹೈ ಫ್ಲೇಮ್ ನಲ್ಲಿ ಇಡಿ, ಬೇಕಿಂಗ್ ಮಾಡುವ ಸಮಯದಲ್ಲಿ ಲೋ ಫ್ಲೇಮ್ ನಲ್ಲಿ ಇಡಿ )

ರೆಸಿಪಿ ಕ್ರೆಡಿಟ್ಸ್ : ಡಾ.ನೇತ್ರ ಎನ್. ಎಸ್

Trending

To Top