Kannada Updates
Film News

ಮದುವೆಗೆ ತಯಾರಾದ ಸ್ಯಾಂಡಲ್ ವುಡ್ ನ ಮತ್ತೊಂದು ಜೋಡಿ

ನಟಿ ಮಿಲನಾ ನಾಗರಾಜ್‌ ಮತ್ತು ನಟ ‘ಡಾರ್ಲಿಂಗ್‌’ ಕೃಷ್ಣ ಬಗ್ಗೆ ಕಳೆದ ಕೆಲವು ದಿನಗಳಿಂದ ಗುಸುಗುಸು ಕೇಳಿಬರುತ್ತಲೇ ಇತ್ತು. ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಕೂಡ ಹಬ್ಬಿತ್ತು. ಆದರೆ ಅದನ್ನು ಇಬ್ಬರೂ ಒಪ್ಪಿಕೊಂಡಿರಲಿಲ್ಲ. ಈಗ ತಮ್ಮ ಪ್ರೀತಿಯ ಬಗ್ಗೆ ಬಾಯಿಬಿಟ್ಟಿದ್ದಾರೆ. ಬಹಿರಂಗವಾಗಿಯೇ ಎಲ್ಲವನ್ನೂ ತಿಳಿಸಿದ್ದಾರೆ. ಅವರಿಬ್ಬರು ಜೊತೆಯಾಗಿ ನಟಿಸಿದ ‘ಲವ್‌ ಮಾಕ್ಟೇಲ್‌’ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆ ಆಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಯಶಸ್ಸಿನ ಖುಷಿಯನ್ನು ಸಂಭ್ರಮಿಸುತ್ತಲೇ ಮದುವೆ ಸುದ್ದಿಯನ್ನು ಬ್ರೇಕ್‌ ಮಾಡಿದ್ದಾರೆ. ಮಿಲನಾ ಮತ್ತು ಕೃಷ್ಣ ನಡುವೆ ಸದ್ದಿಲ್ಲದೆ ಚಿಗುರಿದ ಈ ಪ್ರೀತಿ ಬಗ್ಗೆ ಇಲ್ಲಿದೆ ಪೂರ್ಣ ಮಾಹಿತಿ.

ವ್ಯಾಲೆಂಟೈನ್‌ ಡೇ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿಯೇ ಮಿಲನಾ ಮತ್ತು ಕೃಷ್ಣ ಈ ವಿಚಾರವನ್ನು ಹೇಳಿಕೊಂಡಿರುವುದು ವಿಶೇಷ. ಬಹುದಿನಗಳಿಂದ ಇಬ್ಬರ ನಡುವೆ ಒಡನಾಟ ಇತ್ತು. ಸಿನಿಮಾ ಚಟುವಟಿಕೆಗಳಲ್ಲೂ ಜೊತೆಯಾಗಿ ಪಾಲ್ಗೊಳ್ಳುತ್ತಿದ್ದರು. ಪ್ರೀತಮ್‌ ಗುಬ್ಬಿ ನಿರ್ದೇಶನದ ‘ನಮ್‌ ದುನಿಯಾ ನಮ್‌ ಸ್ಟೈಲ್‌’ ಚಿತ್ರದಲ್ಲೂ ಇಬ್ಬರು ತೆರೆಹಂಚಿಕೊಂಡಿದ್ದರು. ‘ಲವ್ ಮಾಕ್ಟೇಲ್‌’ನಲ್ಲಿ ನಟಿಸುವುದರ ಜೊತೆಗೆ ತೆರೆಹಿಂದೆಯೂ ಒಟ್ಟಾಗಿ ಕೆಲಸ ಮಾಡಿದ್ದಾರೆ. ಒಟ್ಟಾರೆ ಈ ಜರ್ನಿಯಲ್ಲಿಯೇ ಮಿಲನಾ ಮೇಲೆ ಕೃಷ್ಣಗೆ ಪ್ರೀತಿ ಚಿಗುರಿತ್ತು. ಮಿಲನಾ ಬಳಿ ಅವರೇ ಮೊದಲು ಪ್ರೀತಿ ಹೇಳಿಕೊಂಡರಂತೆ.

ಮಿಲನಾ ಬಳಿ ತಮ್ಮ ಪ್ರೀತಿಯನ್ನು ಕೃಷ್ಣ ಹೇಳಿಕೊಳ್ಳುತ್ತಿದ್ದಂತೆಯೇ ಮದುವೆ ಮಾತುಕತೆ ನಡೆಯಿತು. ಇಬ್ಬರ ಮನೆಯಲ್ಲೂ ಈ ಬಗ್ಗೆ ಮಾತುಕತೆ ಆಯಿತು. ಎರಡೂ ಕುಟುಂಬದವರಿಂದ ಒಪ್ಪಿಗೆ ಸಿಕ್ಕಿದ್ದರಿಂದ ಮದುವೆ ಆಗಲು ಮಿಲನಾ-ಕೃಷ್ಣ ನಿರ್ಧರಿಸಿದರಂತೆ. ಆದರೆ ಈ ವಿಚಾರವನ್ನು ಎಲ್ಲಿಯೂ ಅವರು ಹೇಳಿಕೊಂಡಿರಲಿಲ್ಲ. ಅವರ ಆಪ್ತರಿಗೆ ಮತ್ತು ಕುಟುಂಬದ ಸದಸ್ಯರಿಗೆ ಮಾತ್ರ ವಿಷಯ ತಿಳಿದಿತ್ತು. ಈಗ ‘ಲವ್‌ ಮಾಕ್ಟೇಲ್‌’ ಸಿನಿಮಾದ ಗೆಲುವಿನ ಖುಷಿಯಲ್ಲಿರುವ ಅವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ತಮ್ಮ ಪ್ರೀತಿಯನ್ನು ಬಹಿರಂಗ ಪಡಿಸಿದ್ದಾರೆ. ಅವರಿಗೆ ಎಲ್ಲರಿಂದಲೂ ಶುಭ ಹಾರೈಕೆ ಕೇಳಿಬರುತ್ತಿದೆ.

Related posts

‘ಬುಟ್ಟಬೊಮ್ಮ’ ಹಾಡಿಗೆ ಸ್ಟೆಪ್ ಹಾಕಿದ ಆನೆಯ ವೀಡಿಯೋ ವೈರಲ್!

Pooja Siddaraj

ಶಂಕರ್ ಮಹಾದೇವನ್ ಹಾಡಿದ ‘ಜೈ ಶೀರಾಮ್..’ ಹಾಡಿಗೆ ಅರ್ಧ ಗಂಟೆಯಲ್ಲಿ 1ಲಕ್ಷಕ್ಕೂ ಅಧಿಕ ವೀಕ್ಷಣೆ ಸಿಕ್ಕಿತು…

Pooja Siddaraj

ಮೊದಲ ಹಂತದ ಚಿತ್ರೀಕರಣ ಮುಗಿಸಿದ ಕಬ್ಜ

Pooja Siddaraj

ಸೆಂಚುರಿ ಸ್ಟಾರ್ ಕಾಲೆಳೆದ ರಿಯಲ್ ಸ್ಟಾರ್

Pooja Siddaraj

ರಕ್ಷಿತ್ ಶೆಟ್ಟಿ ಬಗ್ಗೆ ಜಗ್ಗೇಶ್ ಮಾತು…

Pooja Siddaraj

ಬಿಗ್ ಬಾಸ್ ಕನ್ನಡ 7 ಮತ್ತು ಕೋಟಿಗೊಬ್ಬ 3 ಚಿತ್ರದ ನಂತರ ಸುದೀಪ್ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ?

Pooja Siddaraj

The Lion is Back ಎನ್ನುತ್ತಾ ಬಂದ್ರು ಕೋಟಿಗೊಬ್ಬ ಕಿಚ್ಚ ಸುದೀಪ್

Pooja Siddaraj

ಬಿಗ್ ಬಾಸ್ ಮನೆಯಲ್ಲಿ ಭೂಮಿಗೆ ಸಿಹಿ ಸುದ್ದಿ ನೀಡಿದ ರವಿ ಬೆಳಗೆರೆ

Pooja Siddaraj

‘ಆಚಾರ್ಯ’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಲಿರಿವ ರಾಮ್ ಚರಣ್ ಗೆ ಜೋಡಿಯಾಗಿ ನಟಿಸಲಿದ್ದಾರಾ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ?

Pooja Siddaraj

ಅನಾಥ ಮಕ್ಕಳ ಜೊತೆ ನಟ ಚೇತನ್ ಪ್ರೀವೆಡ್ಡಿಂಗ್ ಫೋಟೋಶೂಟ್

Pooja Siddaraj

‘ಕಬ್ಜ’ ಚಿತ್ರದ ನಾಯಕಿ ಕಾಜಲ್ ಅಗರ್ವಾಲ್!

Pooja Siddaraj

‘ದಿಯಾ’, ‘ಲವ್ ಮಾಕ್ಟೇಲ್’ ನಂತರ ಟ್ರೆಂಡ್ ಆಗ್ತಿದೆ ಮತ್ತೊಂದು ಕನ್ನಡ ಚಿತ್ರ !

Pooja Siddaraj