Film News

ಮದುವೆಗೂ ಮುನ್ನ ಅನಾಥ ಮಕ್ಕಳಿಗೆ ನೆರವಾಗುತ್ತಿರುವ ನಟ ಚೇತನ್ ಹಾಗೂ ಅವರ ಭಾವಿ ಪತ್ನಿ

ಆ ದಿನಗಳು ಚಿತ್ರ ಖ್ಯಾತಿಯ ನಟ ಚೇತನ್ ಅವರು ಫೆ.2ರಂದು ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಭಾವಿ ಪತ್ನಿ ಮೇಘಾ ಅವರೊಂದಿಗೆ ಮಾನವೀಯ ಕಾರ್ಯವೊಂದಕ್ಕೆ ಚೇತನ್ ಸಜ್ಜಾಗುತ್ತಿದ್ದಾರೆ.

ವಲ್ಲಭ್​ ನಿಕೇತನ ವಿನೋಭಾ ಭಾವೆ ಆಶ್ರಮದಲ್ಲಿ, ಫೆ.2ರ ಸಂಜೆ 6 ಗಂಟೆಗೆ ಅನಾಥಾಶ್ರಮದ ಮಕ್ಕಳು ಹಾಗೂ ವೃದ್ಧರ ಸಮ್ಮುಖದಲ್ಲಿ ಸರಳವಾಗಿ ವಿವಾಹ ಮಾಡಿಕೊಳ್ಳುತ್ತಿದ್ದಾರೆ.

ಹೀಗಾಗಿ ಆಶ್ರಮದ ಮಕ್ಕಳಿಗೆ ಮದುವೆಯ ನೆನಪಿನಾರ್ಥ ಹಾಸಿಗೆಯನ್ನು ನೀಡಲು ಚೇತನ್​ ಮತ್ತು ಭಾವಿ ಪತ್ನಿ ಹಾಸಿಗೆ ಸಂಗ್ರಹ ಕಾರ್ಯದಲ್ಲಿ ತೊಡಗಿದ್ದಾರೆ. ಈ ಕುರಿತು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿರುವ ಚೇತನ್​ ಮೇಘಾ, ವಿನಯ್ ಮತ್ತು ನಾನು ಕೆಲಸ ಮಾಡುತ್ತಿದ್ದೇವೆ. ಆಶ್ರಮ ಮಕ್ಕಳಿಗೆ ಹಾಸಿಗೆ ನೀಡಲು ನಾವು ತಯಾರಾಗುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ ಚೇತನ್​ ಮದುವೆಯಾಗಲು ಹೊರಟಿರುವ ಮೇಘಾ ಅಸ್ಸಾಂ ಮೂಲದವರು. ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಈಗ ವಿವಾಹವಾಗಲು ಮುಂದಾಗುತ್ತಿದ್ದಾರೆ. ವಿವಾಹದ ಆಮಂತ್ರಣ ಪತ್ರಿಕೆ ಕೂಡ ಸರಳವಾಗಿ ಇಂಗ್ಲಿಷ್​ ಹಾಗೂ ಕನ್ನಡದಲ್ಲಿ ಮುದ್ರಿಸಿದ್ದಾರೆ.

ವಿವಾಹದ ಅಂಗವಾಗಿ ವಚನ-ಸೂಫಿ ಗಾಯನ, ಸಿದ್ದಿ, ಲಂಬಾಣಿ, ಕೊರಗ ನೃತ್ಯ ಹಾಗೂ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಚೇತನ್​ ಈ ಹಿಂದೆಯೇ ತಿಳಿಸಿದ್ದಾರೆ.

Trending

To Top