Film News

ಮತ್ತೊಂದು ಪ್ರಯೋಗಾತ್ಮಕ ಪಾತ್ರದಲ್ಲಿ ಮಿಂಚಲು ಸಜ್ಜಾಗಿದ್ದಾರೆ ನಟಿ ಪ್ರಿಯಾಮಣಿ

ರಾಣಾ ದಗ್ಗುಬಾಟಿ ಮತ್ತು ಸಾಯಿ ಪಲ್ಲವಿ ನಾಯಕ ನಾಯಕಿಯಾಗಿ ನಟಿಸಿರುವ , ವೇಣು ಉದುಗುಲ ನಿರ್ದೇಶನದ ತೆಲುಗಿನ ‘ವಿರಾಟ ಪರ್ವ’ ಚಿತ್ರದ ಪ್ರಮುಖ ಭಾಗದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ವಿರಾಟ ಪರ್ವ ಒಂದು ಪಿರಿಯಾಡಿಕ್ ಸಿನಿಮಾ. ಲಾಕ್‌ಡೌನ್‌ ನಂತರ ಈ ಸಿನಿಮಾದ ಚಿತ್ರೀಕರಣ ಮುಂದುವರೆಸಲು ಚಿತ್ರತಂಡ ಸಿದ್ಧತೆ ನಡೆಸಿದೆ.

ನಟಿ ಪ್ರಿಯಾಮಣಿ ಈ ಚಿತ್ರದಲ್ಲಿ ನಕ್ಸಲೈಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲಾಕ್‌ಡೌನ್‌ನಿಂದಾಗಿ ಆಕೆಯ ಪಾತ್ರ ಚಿತ್ರೀಕರಣ ಅಪೂರ್ಣವಾಗಿರುವ ಕಾರಣ ಮರುಚಿತ್ರೀಕರಣಕ್ಕೆ ಚಿತ್ರತಂಡ ನಿರ್ಧರಿಸಿದೆ. ಈ ಸಿನಿಮಾಕ್ಕೆ ಸುಧಾಕರ್‌ ಮತ್ತು ಸುರೇಶ್‌ ಬಾಬು ಬಂಡವಾಳ ಹೂಡಿದ್ದಾರೆ. ಬಾಲಿವುಡ್‌ ನಟಿ ನಂದಿತಾ ದಾಸ್‌ ಕೂಡ ಇದರಲ್ಲಿ ಮುಖ್ಯಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

Trending

To Top