Tv Shows

ಮತ್ತೆ ಬಂತು ದಿ ಜಂಗಲ್ ಬುಕ್!

ಲಾಕ್ ಡೌನ್ ಹಿನ್ನಲೆಯಲ್ಲಿ ಎಲ್ಲ ಮಾಲ್, ಸಿನಿಮಾ ಥಿಯೇಟರ್ ಗಳು ಬಂದ್ ಆಗಿವೆ. ಟಿವಿಯಲ್ಲಿ ಪ್ರಸಾರವಾಗ್ತಿದ್ದ ಧಾರಾವಾಹಿಗಳ ಶೂಟಿಂಗ್ ನಿಂತ ಕಾರಣ ಹಳೆ ಎಪಿಸೋಡ್ ಗಳನ್ನು ಹಾಕಲಾಗ್ತಿದೆ. ಕೆಲ ಚಾನೆಲ್ ಗಳು ಹಿಂದೆ ಹೆಚ್ಚು ಪ್ರಸಿದ್ಧಿ ಪಡೆದಿದ್ದ ಶೋಗಳನ್ನು ಮತ್ತೆ ನಡೆಸುತ್ತಿವೆ.

ಈಗಾಗಲೇ ರಾಮಾಯಣ, ಮಹಾಭಾರತ ಧಾರಾವಾಹಿಗಳು ಮರು ಪ್ರಸಾರವಾಗ್ತಿವೆ. ಮಕ್ಕಳ ಅಚ್ಚು ಮೆಚ್ಚಿನ ಶಕ್ತಿಮಾನ್ ಶೋ ಕೂಡ ಮತ್ತೆ ಬಂದಿದೆ. ಮಕ್ಕಳ ನೆಚ್ಚಿನ ಮೊಗ್ಲಿ ಮರು ಪ್ರಸಾರಕ್ಕೆ ತಯಾರಿ ನಡೆಸಲಾಗ್ತಿದೆ. ದೂರದರ್ಶನದಲ್ಲಿ ಬಹಳ ಜನಪ್ರಿಯವಾದ ಜಂಗಲ್ ಬುಕ್ ಏಪ್ರಿಲ್ 8 ರಿಂದ ಪ್ರಸಾರವಾಗ್ತಿದೆ.

ದೂರದರ್ಶನ ಈ ಮಾಹಿತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ದೂರದರ್ಶನದಲ್ಲಿ ಜಂಗಲ್ ಬುಕ್ ಮರು ಪ್ರಸಾರವಾಗಲಿದೆ. ಪ್ರತಿ ದಿನ ಮಧ್ಯಾಹ್ನ 1 ಗಂಟೆಗೆ ಇದು ಪ್ರಸಾರವಾಗಲಿದೆ ಎಂದು ಚಾನೆಲ್ ಹೇಳಿದೆ

Trending

To Top