Film News

ಮತ್ತೆ ಟಾಲಿವುಡ್ ನತ್ತ ಪಯಣ ಬೆಳೆಸಲಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ !

ನಟ, ನಿರ್ದೇಶಕ ಉಪೇಂದ್ರ ಕನ್ನಡಕ್ಕೆ ಮಾತ್ರವಲ್ಲ ನೆರೆಯ ತೆಲುಗು ಸಿನಿರಂಗದಲ್ಲೂ ಚಿರ ಪರಿಚಿತ ನಟ. ಹಲವು ಸಿನಿಮಾಗಳನ್ನು ಉಪೇಂದ್ರ ಅವರು ತೆಲುಗಿನಲ್ಲಿ ಮಾಡಿದ್ದಾರೆ.

‘ರಾ’, ಕನ್ಯಾದಾನಂ, ಟಾಸ್, ಸತ್ಯಂ, ಸನ್ ಆಫ್ ಸತ್ಯಮೂರ್ತಿ ಸೇರಿ ಇನ್ನೂ ಕೆಲವು ತೆಲುಗು ಸಿನಿಮಾಗಳಲ್ಲಿ ಉಪೇಂದ್ರ ನಟಿಸಿದ್ದಾರೆ. ಅಷ್ಟೆ ಅಲ್ಲದೆ ಅವರ ಅನೇಕ ಕನ್ನಡ ಸಿನಿಮಾಗಳು ತೆಲುಗು ಗೆ ಡಬ್ ಆಗಿ ಹಿಟ್ ಆಗಿವೆ. ನಟ ಉಪೇಂದ್ರ ಅವರು ಅಲ್ಲು ಅರ್ಜುನ್ ಅಭಿನಯದ ‘ಸನ್ ಆಫ್ ಸತ್ಯಮೂರ್ತಿ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಮೆಗಾಸ್ಟಾರ್ ಕುಟುಂಬ ಉದಯೋನ್ಮುಖ ನಟ ವರುಣ್ ತೇಜ್ ಸಿನಿಮಾದಲ್ಲಿ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸುವುದು ಬಹುತೇಕ ಖಾತ್ರಿಯಾಗಿದೆ. ವರುಣ್ ತೇಜ್ ಅವರ ಮುಂದಿನ ಸಿನಿಮಾದಲ್ಲಿ ಉಪೇಂದ್ರ ಗೆ ಉತ್ತಮ ಪಾತ್ರವಿದೆಯಂತೆ.

ಸನ್ ಆಫ್ ಸತ್ಯಮೂರ್ತಿ ಬಳಿಕ ಉಪೇಂದ್ರ ಅವರಿಗೆ ಹಲವು ಆಫರ್‌ಗಳು ತೆಲುಗು ಸಿನಿ ಉದ್ಯಮದಿಂದ ಬಂದಿತಂತೆ. ಆದರೆ ಬಹುತೇಕ ಸಿನಿಮಾಗಳಲ್ಲಿ ವಿಲನ್ ಪಾತ್ರವೇ ಇದ್ದಿದ್ದರಿಂದ ಉಪೇಂದ್ರ ಸಿನಿಮಾಗಳನ್ನು ನಿರಾಕರಿಸಿದರಂತೆ.

ಆದರೆ ವರುಣ್ ತೇಜ್ ನಟನೆಯ ಸಿನಿಮಾದಲ್ಲಿ ನೆಗೆಟಿವ್ ಶೇಡ್ ಇಲ್ಲದ ಪಾತ್ರ ದೊರೆತಿದ್ದರಿಂದ ಹಾಗೂ ಪಾತ್ರವು ಉಪೇಂದ್ರ ಅವರ ವ್ಯಕ್ತಿತ್ವಕ್ಕೆ ಹೆಚ್ಚು ಹೊಂದಿಕೆ ಆಗುವ ಕಾರಣದಿಂದ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಸಿನಿಮಾವನ್ನು ಕಿರಣ್ ಕೊರ್ರಪಾಟಿ ನಿರ್ದೇಶಿಸುತ್ತಿದ್ದು, ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ.

Trending

To Top