Film News

‘ಮಂಡ್ಯದ ಗಂಡು’ ಟೈಟಲ್ ಬದಲಾಯಿಸಲು ಅಂಬಿ ಅಭಿಮಾನಿಗಳ ಆಗ್ರಹ !

ಮಂಡ್ಯದ ಗಂಡು ಎಂದಾಕ್ಷಣ ನೆನಪಾಗುವುದು ರೆಬೆಲ್ ಸ್ಟಾರ್ ಅಂಬರೀಶ್. ಅಂಬರೀಶ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಿದ್ದುದು ಮಂಡ್ಯದ ಗಂಡು ಎಂದೇ. ಈಗ ಇದೇ ಹೆಸರಲ್ಲಿ ಸಿನಿಮಾ ತೆರೆಗೆ ಬರುತ್ತಿದ್ದು, ಅಂಬರೀಶ್ ಫ್ಯಾನ್ಸ್ ಸಿಟ್ಟಾಗಿದ್ದಾರೆ.

ಇಂದು, ಅಂಭಿ ಸಮಾಧಿ ಮುಂದೆ ‘ಮಂಡ್ಯದ ಗಂಡು’ ಸಿನಿಮಾಕ್ಕೆ ಮುಹೂರ್ತ ನಡೆಯುತ್ತಿದೆ. ಚಿತ್ರತಂಡ ಮುಹೂರ್ತಕ್ಕೆ ಸಜ್ಜಾಗಿದೆ. ಆದರೆ, ಇದಕ್ಕೆ ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ‘ಮಂಡ್ಯದ ಗಂಡು ಅಂದರೆ ಅದು ಅಂಬರೀಶ್ ಮಾತ್ರ. ಅಂಬರೀಶ್ ಜಾಗಕ್ಕೆ ಹೊಸಬರನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ,’ ಎಂದಿದ್ದಾರೆ ಅಭಿಮಾನಿಗಳು.

ಲೋಕೇಶ್ ಹೆಸರಿನ ನಿರ್ದೇಶಕರು ” ಟೈಟಲ್ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾಗೆ ಹೀರೋ ಕೂಡ ಫಿಕ್ಸ್ ಆಗಿದ್ದಾರೆ. ಈ ಸಿನಿಮಾಗೆ ಚಾಲೆಂಜಿಂಗ್ ಸ್ಟಾರ್ ಹಾಗೂ ಅಂಬಿ ಪುತ್ರ ಅಭಿಷೇಕ್ ಚಾಲನೆ ನೀಡಬೇಕಿತ್ತು. ಆದರೆ, ಚಿತ್ರಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಅಂಬರೀಶ್ ಅಭಿಮಾನಿಗಳು ಚಲನ ಚಿತ್ರ ವಾಣಿಜ್ಯ ಮಂಡಳಿಗೆ ಇಂದು 11 ಘಂಟೆಗೆ ಮನವಿ ನೀಡಲಿದ್ದಾರೆ. ಈ ಮೂಲಕ ಟೈಟಲ್ ಬದಲಿಸುವಂತೆ ಕೋರಲಿದ್ದಾರೆ.

Trending

To Top